ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಕೋರ್ಟ್‌ಗೆ ಸಿಐಡಿಯಿಂದ ಜು.27ರಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಒಂದನೆ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದೆ. ಕರ್ನಾಟಕದಲ್ಲಿ ಪಿಎಸ್‌ಐ ನೇಮಕಾತಿ ಹಗರಣ ಭಾರಿ ಸದ್ದು ಮಾಡಿತ್ತು. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸಹ ಹಗರಣದಲ್ಲಿ ಸಿಲುಕಿದ್ದರು. ಕೋಟಿ ಕೋಟಿ ಹಣವನ್ನು ಪಡೆದು ಪಿಎಸ್‌ಐ ಹುದ್ದೆಯನ್ನು ಬಿಗರಿ ಮಾಡಿದಂತೆ ಪರೀಕ್ಷೆಯಲ್ಲಿ ಅಕ್ರಮ ಎಸಗಲಾಗಿತ್ತು.
ನೇಮಕಾತಿ ವಿಭಾಗದ ಕಚೇರಿಯಲ್ಲಿಯೇ ಉತ್ತರದ ಹಾಳೇಗಳನ್ನು ತಿದ್ದುವ ಕೆಲಸ ಮಾಡಿದ್ದರು. ಬ್ಲೂಟೂತ್ ಸೇರಿದಂತೆ ಹೊಸ ವಿಧಾನವನ್ನು ಬಳಕೆಯನ್ನು ಮಾಡಿ ನಕಲನ್ನು ಮಾಡಿ ಪರೀಕ್ಷೆಯನ್ನು ಉತ್ತಮ ಅಂಕವನ್ನು ಗಳಿಸಿ ಸೆಲೆಕ್ಷನ್ ಆಗವ ಹಂತ ದಲ್ಲಿದ್ದರು. ಅಕ್ರಮದಲ್ಲಿ ಶಾಮೀಲು ಆಗಿದ್ದವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
3065 ಪುಟಗಳ ಚಾರ್ಜ್ ಶೀಟ್ ನಲ್ಲಿ 202 ವಿಟ್ನೆಸ್‌ಗಳು 330 ದಾಖಲಾತಿಗಳನ್ನು 30 ಜನ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ನಲ್ಲಿ ಸೇರಿಸಲಾಗಿದೆ. ಎಡಿಜಿಪಿ ಅಮ್ರಿತ್ ಪೌಲ್ ಸೇರಿದಂತೆ ಕೆಲ ಆರೋಪಿಗಳನ್ನು ಬಿಟ್ಟು ಉಳಿದ ಅರೋಪಿಗಳ ಮೇಲೆ ಚಾರ್ಶೀಟ್ ಸಲ್ಲಿಸಲಾಗಿದೆ.