ಬೆಂಗಳೂರು: ಸಿಯಾಟಲ್ ಮೂಲದ ಕೊಲಂಬಿಯಾ ಪೆಸಿಫಿಕ್ ಗ್ರೂಪ್ನ ಭಾಗವಾಗಿರುವ ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟೀಸ್ (ಸಿಪಿಸಿ) ಮತ್ತು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಎಂಬಸಿ ಗ್ರೂಪ್, ಎಂಬಸಿ ಸ್ಪ್ರಿಂಗ್ಸ್ನಲ್ಲಿ ಹಿರಿಯರಿಗಾಗಿ ವಿಶಿಷ್ಟ ವಸತಿ ಯೋಜನೆ ಸೆರೆನ್ ಅಮರ (Serene Amara) ಯೋಜನೆ ಪ್ರಾರಂಭಿಸಿದೆ. ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಈ ಯೋಜನೆಯನ್ನು ಎಂಬಸಿ ಗ್ರೂಪ್ ನಿರ್ಮಿಸುತ್ತಿದ್ದು, ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟೀಸ್ ನಿರ್ವಹಿಸಲಿದೆ.
ಹಿರಿಯರ ವಸತಿ ಯೋಜನೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿನ ತನ್ನ 40 ವರ್ಷಗಳ ಅನುಭವ ಬಳಸಿಕೊಳ್ಳಲಿರುವ ಕೊಲಂಬಿಯಾ ಪೆಸಿಫಿಕ್ ಗ್ರೂಪ್, ಭಾರತದಲ್ಲಿ ತನ್ನ 11ನೇಯ ಸೀನಿ ಯರ್ ಲಿವಿಂಗ್ ಕಮ್ಯುನಿಟಿ ನಿರ್ಮಾಣದಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸೌಲಭ್ಯ ಒದಗಿಸುವಲ್ಲಿ ಎಂಬಸಿ ಗ್ರೂಪ್ನ ಸಾಮರ್ಥ್ಯದ ಸಹಯೋಗದೊಂದಿಗೆ ಪರಿಣತಿ ಸಾಧಿಸಲಿದೆ.
288 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಹರಡಿರುವ ಸಮಗ್ರ ಟೌನ್ಶಿಪ್ ಎಂಬಸಿ ಸ್ಪ್ರಿಂಗ್ಸ್ನಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಮತ್ತು ಬೆಂಗಳೂರಿನ ಅತಿದೊಡ್ಡ ಹಾಗೂ ಅತ್ಯುತ್ತಮ ಯೋಜಿತ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೊಲಂಬಿಯಾ ಪೆಸಿಫಿಕ್ನ ಸೆರೆನ್ ಅಮರ – 17 ಅಂತಸ್ತುಗಳಲ್ಲಿ 239 ವಿಶೇಷ ಬಗೆಯ ನಿವಾಸಗಳನ್ನು ಒಳಗೊಂಡಿರಲಿದೆ. ಹಿರಿಯರಿಗೆ ಆರಾಮದಾಯಕ ಮತ್ತು ಆರೋಗ್ಯಕರ ಜೀವನ ಉತ್ತೇಜಿಸಲು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳು ಮತ್ತು ಸೌಕರ್ಯಗಳನ್ನು ಇದು ಒಳಗೊಂಡಿದೆ. 2.44 ಎಕರೆಗಳಷ್ಟು ವಿಶಾಲವಾದ ಜಾಗ ಹೊಂದಿರುವ ಸೀನಿಯರ್ ಲಿವಿಂಗ್ ಕಮ್ಯುನಿಟಿ ಯೋಜನೆಗೆ ಒಟ್ಟಾರೆ ₹ 165 ಕೋಟಿ ಹೂಡಿಕೆ ಮಾಡಲಾಗುತ್ತಿದೆ.
ಜಾಗತಿಕ ಖ್ಯಾತಿಯ ವಾಸ್ತುಶಿಲ್ಪ ಸಂಸ್ಥೆ ವೆಂಕಟರಮಣನ್ ಅಸೋಸಿಯೇಟ್ಸ್ನಿಂದ ವಿನ್ಯಾಸಗೊಳಿಸಲಾಗಿರುವ ಈ ಯೋಜನೆಯು ಈ ವರ್ಷ ಕಾರ್ಯಾ ರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಹಿರಿಯರು ಆರೋಗ್ಯಕರ, ಸಂತೋಷದ, ಹೆಚ್ಚು ಸುರಕ್ಷಿತ ಮತ್ತು ಉತ್ತಮ ಸಂಪರ್ಕಿತ ಸೌಲಭ್ಯಗಳಡಿ ಜೀವಿಸಲು ಸುಸಜ್ಜಿತ ವಾಸಸ್ಥಳವನ್ನು ಇದು ನೀಡಲಿದೆ. ಶ್ರೇಷ್ಠ ಗುಣಮಟ್ಟದ, ಅತ್ಯುತ್ತಮ ಸೇವೆಗಳು, ವಿಶಾಲವಾದ ಮುಕ್ತ ಪ್ರದೇಶ, ಹಸಿರು ಪರಿಸರ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಅಪಾರ್ಟ್ಮೆಂಟ್ಸ್ಗಳು 1, 2, ಮತ್ತು 3-ಬಿಎಚ್ಕೆ ವಿನ್ಯಾಸಗಳಲ್ಲಿ ಲಭ್ಯ ಇರಲಿವೆ. ಶಾಸನಬದ್ಧ ಶುಲ್ಕಗಳನ್ನು ಹೊರತುಪಡಿಸಿ, ಮನೆಗಳ ಬೆಲೆ ₹ 60 ಲಕ್ಷಗಳಿಂದ ₹ 1.48 ಕೋಟಿವರೆಗೆ ಇರಲಿದೆ.
ಹಿರಿಯರ ಸ್ನೇಹಿ ಜಿಮ್ನಾಷಿಯಂ, ಒಳಾಂಗಣ ಕ್ರೀಡೆಗಳ ಕೊಠಡಿ ಮತ್ತು ಸ್ಪಾಗಳಂತಹ ಸೌಕರ್ಯಗಳ ಜೊತೆಗೆ ಮನರಂಜನೆ, ಮೋಜು ಮತ್ತು ಫಿಟ್ನೆಸ್ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ–ಯುಗದ ಕ್ಲಬ್ ಜೊತೆಗೆ, ಹಿರಿಯರು ತಮ್ಮ ಶಾಶ್ವತವಾದ ಮನೆಗಳಲ್ಲಿ ತಮ್ಮ ಜೀವನದ ಅತ್ಯುತ್ತಮ ಸಮಯ ಕಳೆಯುವುದನ್ನು ಈ ಯೋಜನೆಯು ಖಚಿತಪಡಿಸುತ್ತದೆ. ಯೋಗ ಮತ್ತು ಧ್ಯಾನದ ಪ್ರತ್ಯೇಕ ತಾಣಗಳು, ಓದುವ ಕೋಣೆ, ರೆಸ್ಟೋರೆಂಟ್, ವ್ಯಾಪಾರ ಕೇಂದ್ರ, ಹೊರಾಂಗಣ ಸ್ಥಳಗಳಲ್ಲಿ ನಡಿಗೆ ಪಥಗಳು ಮತ್ತು ಪೋಡಿಯಂನಲ್ಲಿ ಹೊರಾಂಗಣ ಊಟವು ಹಿರಿಯರ ಸುವರ್ಣ ವರ್ಷಗಳ ಅನುಭವ ಹೆಚ್ಚಿಸಲಿವೆ. ಈ ‘ಹಿರಿಯರ ಸ್ನೇಹಿ’ ಸೌಕರ್ಯಗಳ ಜೊತೆಗೆ, ಈ ಕಮ್ಯುನಿಟೀಸ್ ಆಹಾರ, ಮನೆಗೆಲಸ, 24-ಗಂಟೆಗಳ ನೆರವು ಮತ್ತು ವೈದ್ಯಕೀಯ ಸೇವೆಯ ಸಂಪೂರ್ಣ ಸೌಲಭ್ಯಗಳನ್ನು ಒಳಗೊಂಡಿರಲಿದೆ.
ಈ ಯೋಜನೆ ಆರಂಭದ ಬಗ್ಗೆ ಪ್ರತಿಕ್ರಿಯಿಸಿರುವ ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟೀಸ್ನ ಸಿಇಒ ಮೋಹಿತ್ ನಿರುಲಾ ಅವರು, ‘ಭಾರತದಲ್ಲಿ ನಮ್ಮ 11 ನೇ ಸೀನಿಯರ್ ಲಿವಿಂಗ್ ಕಮ್ಯುನಿಟಿ ಮತ್ತು ಎಂಬಸಿ ಗ್ರೂಪ್ನ ಸೆರೆನ್ ಅಮರ ಜಂಟಿ ಯೋಜನೆ ಕಾರ್ಯಗತಗೊಳಿಸಲು ನಾವು ಉತ್ಸುಕ ರಾಗಿದ್ದೇವೆ. ಎಂಬಸಿ ಗ್ರೂಪ್ನ ಸಹಯೋಗದಲ್ಲಿ ಕಾರ್ಯಗತಗೊಳಿಸುತ್ತಿರುವ ಈ ಕಮ್ಯುನಿಟಿಯು ಹಿರಿಯ ನಿವಾಸಿಗಳಿಗೆ ಆರೋಗ್ಯಕರ ಮತ್ತು ಆರಾಮದಾಯಕ ವಸತಿ ಸೌಲಭ್ಯ ಒದಗಿಸುವುದಲ್ಲದೆ, ಅವರು ನೆಮ್ಮದಿಯ ಜೀವನ ನಡೆಸಲು ಸಕಲ ರೀತಿಯಲ್ಲಿಯೂ ನೆರವಾಗಲಿದೆ ಎಂಬುದರ ಬಗ್ಗೆ ನಮಗೆ ದೃಢ ವಿಶ್ವಾಸವಿದೆ. ಎರಡು ಪರಿಣತ ಸಂಸ್ಥೆಗಳು ಜೊತೆಯಾಗುವುದರೊಂದಿಗೆ ಭಾರತದಲ್ಲಿ ಹಿರಿಯರಿಗಾಗಿ ವಿಶ್ವ ದರ್ಜೆಯ ಸೀನಿಯರ್ ಲಿವಿಂಗ್ ಕಮ್ಯುನಿಟೀಸ್ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ಈ ಮನೆಗಳು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ವಿನ್ಯಾಸಗೊಳಿಸಲಾದ ಸಂಪೂರ್ಣ ಸೇವೆ ಒಳಗೊಂಡಿರಲಿವೆ’ ಎಂದು ಹೇಳಿದ್ದಾರೆ.
ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟೀಸ್ನಲ್ಲಿ (ಸಿಪಿಸಿ) ಸಮುದಾಯ ಜೀವನ, ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಯೋಗಕ್ಷೇಮ ಮತ್ತು ಸಾಮಾಜಿಕ ಸಂಪರ್ಕದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಹಿರಿಯರಲ್ಲಿ ಸಕಾರಾತ್ಮಕ ವೃದ್ಧಾಪ್ಯ ಉತ್ತೇಜಿಸುವ ಕಮ್ಯುನಿಟೀಸ್ಗಳನ್ನು ನಾವು ನಿರ್ಮಿಸುತ್ತೇವೆ. ಕಮ್ಯುನಿಟಿ ಲಿವಿಂಗ್, ವರ್ಧಿತ ಜೀವನಶೈಲಿ, ಭದ್ರತೆ, ಸುರಕ್ಷತೆ, ಹಿರಿಯರಿಗೆ ವೈದ್ಯಕೀಯ ಸೇವೆ ಒದಗಿಸುವುದರ ಜೊತೆಗೆ ಅವರ ಕುಟುಂಬಗಳಿಗೆ ಮನಶಾಂತಿಯನ್ನೂ ನೀಡಲಿದೆ.
ಎಂಬಸಿ ಗ್ರೂಪ್ನ ಸಿಒಒ ಆದಿತ್ಯ ವಿರ್ವಾನಿ ಅವರು ಮಾತನಾಡಿ, ‘ಎಂಬಸಿ ಗ್ರೂಪ್ನ ಹೊಸ ಆಸ್ತಿ ವರ್ಗದ ಸೀನಿಯರ್ ಲಿವಿಂಗ್ ವಿಭಾಗದಲ್ಲಿ ನಮ್ಮ ಮೊದಲ ಯೋಜನೆಗಾಗಿ ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟಿ ಜೊತೆಗೆ ಕೈಜೋಡಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಈ ಬೆಳೆಯುತ್ತಿರುವ ಹಾಗೂ ಪ್ರಮುಖ ವಿಭಾಗದ ಅವಶ್ಯಕತೆಗಳನ್ನು ಪೂರೈಸಲು ನಮ್ಮ ಪರಿಣತಿ, ಶಕ್ತಿ ಮತ್ತು ಸಾಮರ್ಥ್ಯಗಳನ್ನು ನಾವು ಒಟ್ಟುಗೂಡಿಸಲಿದ್ದೇವೆ. ಕೊಲಂಬಿಯಾ ಪೆಸಿಫಿಕ್ನ ಸೆರೆನ್ ಅಮರ ಆರೋಗ್ಯಕರ, ಪ್ರಶಾಂತ ಜೀವನಶೈಲಿ ಮತ್ತು ತಮ್ಮ ಸ್ವಂತ ಮನೆಯ ಖಾಸಗಿತನದ ಮೆಚ್ಚುಗೆಯೊಂದಿಗೆ ಹಿರಿಯರನ್ನು ಆಕರ್ಷಿಸಲಿದೆ. ನಮ್ಮ ಹಿರಿಯರಿಗೆ ಉತ್ಕೃಷ್ಟ ಅನುಭವ ಒದಗಿಸುವ ಪರಿಣತ ಪಾಲುದಾರನ ಜೊತೆ ಕೆಲಸ ಮಾಡಲು ನಾವು ಬಯಸುತ್ತೇವೆ. ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟೀಸ್ನಲ್ಲಿ (ಸಿಪಿಸಿ) ನಾವು ಆದರ್ಶ ಪಾಲುದಾರನನ್ನು ಕಂಡುಕೊಂಡಿದ್ದೇವೆ. ಎಲ್ಲಾ ವಯೋಮಾನದವರಿಗೂ ಉತ್ತಮ–ಗುಣಮಟ್ಟದ, ಭವಿಷ್ಯದ–ಮುಂಚೂಣಿ ಮತ್ತು ವರ್ಧಿತ ವಾಸಸ್ಥಳಗಳನ್ನು ಎಲ್ಲ ವಯೋಮಾನದವರಿಗೆ ತಲುಪಿಸುವ ಬಗ್ಗೆ ಎಂಬಸಿ ಗ್ರೂಪ್ನ ಬ್ರ್ಯಾಂಡ್ ಭರವಸೆ ನೀಡುತ್ತದೆ. ಹೊಸ ತಲೆಮಾರಿನವರಿಗೆ ಸಹ ಜೀವನದಿಂದ ಹಿಡಿದು ಬ್ರ್ಯಾಂಡೆಡ್ ಮತ್ತು ವಿಲಾಸಿ ಮನೆಗಳನ್ನು ಒದಗಿಸುತ್ತಿರುವ ಎಂಬಸಿ ಗ್ರೂಪ್, ಈಗ ಹಿರಿಯರಿಗೆ ಮೀಸಲಾದ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಕ್ಷೇತ್ರಕ್ಕೆ ಪ್ರವೇಶಿಸಿದೆ. ಕೊಲಂಬಿಯಾ ಪೆಸಿಫಿಕ್ ಆರಂಭಿಸಿರುವ ಸೆರೆನ್ ಅಮರ ಯೋಜನೆ ಮೂಲಕ, ನಮ್ಮ ಹಿರಿಯರು ತಮ್ಮ ಬದುಕಿನ ಸುವರ್ಣ ವರ್ಷಗಳನ್ನು ಘನತೆ, ಸಂತೋಷ ಹಾಗೂ ಎಲ್ಲವನ್ನೂ ಈಡೇರಿಸಿಕೊಳ್ಳುವ ರೀತಿಯಲ್ಲಿ ನೆರವಾಗುವ ವಸತಿ ಯೋಜನೆಗಳನ್ನು (ಕಮ್ಯುನಿಟೀಸ್) ನಿರ್ಮಿಸುವುದರತ್ತ ನಾವು ಮೊದಲ ಹೆಜ್ಜೆ ಇರಿಸಿದ್ದೇವೆ’ ಎಂದು ಹೇಳಿದ್ದಾರೆ.
ಹಿರಿಯ ನಟಿ ರತ್ನಾ ಪಾಠಕ್ ಷಾ ಅವರು ಸಮಾರಂಭದಲ್ಲಿ ಉಪಸ್ಥಿತರಾಗಿ, ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಗೌರವ ಹೆಚ್ಚಿಸಿದರು. ‘ಸಮಾನ ಮನಸ್ಕ ಗೆಳೆಯರ ಜೊತೆ ವಾಸಿಸಲು, ಅವರ ಜೊತೆ ಸಂವಹನ ನಡೆಸುವುದನ್ನು, ಸಕ್ರಿಯ ಮತ್ತು ಶಾಂತಿಯುತ ಬದುಕಿನ ಆನಂದ ಅನುಭವಿಸುವುದನ್ನು ಎದುರು ನೋಡುತ್ತಿರುವ ಹಿರಿಯರಿಗೆ ವಿಶಿಷ್ಟ ಸ್ವರೂಪದ ವಸತಿ ಯೋಜನೆ ನಿರ್ಮಿಸುತ್ತಿರುವುದಕ್ಕೆ ನಾನು ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟೀಸ್ ಮತ್ತು ಎಂಬಸಿ ಗ್ರೂಪ್ಗೆ ಅಭಿನಂದನೆ ಸಲ್ಲಿಸುತ್ತೇನೆ. ಧನಾತ್ಮಕ ವೃದ್ಧಾಪ್ಯದ ಕಲ್ಪನೆಯು ಕೇವಲ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸೀಮಿತವಾಗಿರ ಬಾರದು. ಸಮಾಜದಲ್ಲಿ ಹಿರಿಯ ನಾಗರಿಕರು ಅತ್ಯುತ್ಸಾಹದಿಂದ ಭಾಗವಹಿಸುವುದನ್ನು ಅದು ಪ್ರೋತ್ಸಾಹಿಸುವಂತಿರಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರೆ, ತಮ್ಮ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ, ತಮ್ಮ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಮತ್ತು ತಮಗೆ ಗೌರವ ನೀಡಲಾಗುತ್ತಿದೆ ಎಂದು ಹಿರಿಯರು ಭಾವಿಸುತ್ತಾರೆ. ನನ್ನ ವಯಸ್ಸಿನ ಜನರು ದೈಹಿಕವಾಗಿ ಸದೃಢರಾಗಿ, ಮಾನಸಿಕವಾಗಿ ಜಾಗರೂಕರಾಗಿ ಮತ್ತು ಭಾವನಾತ್ಮಕವಾಗಿ ಉತ್ತೇಜಿತ ರಾಗಿರಲು ಪ್ರೋತ್ಸಾಹಿಸುವ ಪೂರಕ ವಾತಾವರಣ ಸೃಷ್ಟಿಸಲು ಈ ಎರಡೂ ವಿಶಿಷ್ಟ ಬ್ರ್ಯಾಂಡ್ಗಳು ಸರಿಯಾದ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡುತ್ತಿರುವು ದನ್ನು ಕಂಡು ನನಗೆ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.
ಹಿರಿಯರಿಗಾಗಿ ನಿರ್ಮಿಸುತ್ತಿರುವ ಈ ವಿಶಿಷ್ಟ ವಸತಿ ಯೋಜನೆಯು ಪುಸ್ತಕ ಓದುವಿಕೆ, ಯೋಗ ಮತ್ತು ಮನಸ್ಸಿನ ಚಂಚಲತೆ ನಿವಾರಿಸಿ ಸಮಾಧಾನ ಮೂಡಿಸುವ ಕಾರ್ಯಕ್ರಮ, ಡ್ರಮ್ ಬಾರಿಸುವಿಕೆ, ಕುಂಬಾರಿಕೆ ಮತ್ತು ಕಥೆ ಹೇಳುವ ಕಾರ್ಯಾಗಾರ ಮುಂತಾದವುಗಳನ್ನು ಒಳಗೊಂಡ ನಿರ್ದಿಷ್ಟ ವೇಳಾಪಟ್ಟಿ ಹೊಂದಿರಲಿದೆ. ಧನಾತ್ಮಕ ವೃದ್ಧಾಪ್ಯದ ಆರು ಆಧಾರ ಸ್ತಂಭಗಳ ಸುತ್ತಲೂ ವಿನ್ಯಾಸಗೊಳಿಸಲಾಗಿರುವ ಈ ಚಟುವಟಿಕೆಗಳು ಸೀನಿಯರ್ ಲಿವಿಂಗ್ ಕಮ್ಯುನಿಟೀಸ್ನ ನಿವಾಸಿಗಳು ಹೆಚ್ಚು ಕಾಲ ಆರೋಗ್ಯವಾಗಿರಲು ಸಹಾಯ ಮಾಡಲಿವೆ.