Thursday, 19th September 2024

ಡ್ರೀಮ್ ಎ ಡ್ರೀಮ್ ಪ್ರಸ್ತುತಪಡಿಸುತ್ತಿದೆ ‘ವೆನ್ ವಿ ಥ್ರೈವ್, ಅವರ್ ವರ್ಲ್ಡ್ ಥ್ರೈವ್ಸ್’ ಲೇಖಕಿ ಡಾ. ಕೋನಿ ಕೆ ಚುಂಗ್ ಅವರೊಂದಿಗೆ ಸಂವಾದ ಗೋಷ್ಠಿ

ಡ್ರೀಮ್ ಎ ಡ್ರೀಮ್ ನ 20 ಪದವೀಧರರ ಗಮನಸೆಳೆಯು ಕಥೆಗಳನ್ನು ಮತ್ತು ಪ್ರತಿಕೂಲ ಸ್ಥಿತಿಯಿಂದ ಅಭಿವೃದ್ಧಿ ಸಾಧಿಸಿರುವ ಅವರ ಪ್ರಯಾಣವನ್ನು ಖ್ಯಾತ ಲೇಖಕಿ ಡಾ.ಕೋನಿ ಕೆ ಚುಂಗ್ ಅವರು ಚರ್ಚಿಸಲಿದ್ದಾರೆ.

ಬೆಂಗಳೂರು: ಬಡತನದಲ್ಲಿ ಬದುಕುತ್ತಿರುವ ಮಕ್ಕಳ ಶಿಕ್ಷಣವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಲಾಭರಹಿತ ಸಂಸ್ಥೆಯಾದ (ಎನ್​ಜಿಒ) ಡ್ರೀಮ್ ಎ ಡ್ರೀಮ್, ‘ವೆನ್ ವಿ ಥ್ರೈವ್, ಅವರ್ ವರ್ಲ್ಡ್ ಥ್ರೈವ್ಸ್’ ಲೇಖಕ ಡಾ.ಕೋನಿ ಕೆ ಚುಂಗ್ ಅವರೊಂದಿಗೆ ಫೈಯರ್​ಸೈಡ್​ ಚಾಟ್ ಮತ್ತು ಪ್ಯಾನಲ್ ಸಂವಾದವನ್ನು ಆಯೋಜಿಸಿದೆ. ಡ್ರೀಮ್ ಎ ಡ್ರೀಮ್​​ನ ಸಹ-ಸಂಸ್ಥಾಪಕರಾದ ವಿಶಾಲ್ ತಲ್ರೇಜಾ ಅವರೂ ಈ ಕೃತಿಯ ಸಹ-ಲೇಖಕರಾಗಿದ್ದು, ಈ ಪುಸ್ತಕದಲ್ಲಿ ಡ್ರೀಮ್ ಎ ಡ್ರೀಮ್​ ಕಾರ್ಯಕ್ರಮದ 20 ಹಳೆಯ ವಿದ್ಯಾರ್ಥಿಗಳ ಸ್ಫೂರ್ತಿದಾಯಕ ಕಥೆಗಳನ್ನು ಮತ್ತು ಪ್ರತಿಕೂಲತೆಯಿಂದ ಅಭಿವೃದ್ಧಿ ಹೊಂದಿರುವ ಅವರ ಪ್ರಯಾಣವನ್ನು ವಿಶ್ಲೇಷಿಸಲಾಗಿದೆ.

ನ.29 ರಂದು ಸಂಜೆ 5 ರಿಂದ 6 ರವರೆಗೆ ದೊಮ್ಮಲೂರಿನ ಬೆಂಗಳೂರು ಇಂಟರ್​ನ್ಯಾಷನಲ್​ ಸೆಂಟರ್​​ನಲ್ಲಿ ಫೈಯರ್​ಸೈಡ್​ ಚಾಟ್ ನಡೆಯಲಿದೆ. ಡಿ.2ರಂದು ಸಂಜೆ 4 ಗಂಟೆಗೆ ಲಲಿತ್ ಅಶೋಕ್ ಸಭಾಂಗಣದಲ್ಲಿ ಬೆಂಗಳೂರು ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ವಿಚಾರ ಸಂಕಿರಣ ನಡೆಯಲಿದೆ.

ಡಾ. ಕೋನಿ ಕೆ ಚುಂಗ್ ಅವರ ಪುಸ್ತಕವು ಡ್ರೀಮ್ ಎ ಡ್ರೀಮ್​ನ ಕಾರ್ಯಕ್ರಮದ 20 ಹಳೆಯ ವಿದ್ಯಾರ್ಥಿಗಳ ಕಥೆಗಳನ್ನು ಒಳಗೊಂಡಿದೆ, ಕಷ್ಟಕರ ಹಾದಿಯಿಂದ ಅಭಿವೃದ್ಧಿ ಹೊಂದುತ್ತಿರುವ ಅವರ ಪ್ರಯಾಣವನ್ನು ಅನಾವರಣಗೊಳಿಸಲಾಗಿದೆ. ಯುವಜನರು ತಮ್ಮ ಪ್ರತಿಕೂಲತೆಯ ಹೊರತಾ ಗಿಯೂ ಮತ್ತು ಸರಿಯಾದ ಬೆಂಬಲದೊಂದಿಗೆ ಅವರು ಅಭಿವೃದ್ಧಿ ಹೊಂದಬಹುದು ಎಂದು ಪುಸ್ತಕದಲ್ಲಿ ಅವರ ಕಥೆಗಳು ಮತ್ತು ಸಂಶೋಧನೆಯ ದೃಷ್ಟಿಕೋನದ ಮೂಲಕ ಅರಿಯಲಾಗಿದೆ. ಇದು ಯುವಜನರಲ್ಲಿ ಮತ್ತು ಪರಿಸರ ವ್ಯವಸ್ಥೆಯಲ್ಲಿ ಮನಸ್ಥಿತಿಯ ಬದಲಾವಣೆಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ. ಅಭಿವೃದ್ಧಿ ಹೊಂದಲು ಯುವಜನರಿಗೆ ಏನು ಬೇಕು ಎಂಬುದನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿದೆ. ಈ ಪುಸ್ತಕವು ಪ್ರತಿಕೂಲತೆಯನ್ನು ಎದುರಿಸುತ್ತಿರುವ ಯುವಜನರಿಗೆ ಆರೈಕೆ ಮತ್ತು ಬೆಂಬಲವನ್ನು ಒದಗಿಸುವಲ್ಲಿ ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರ ಪ್ರಯತ್ನಗಳ ಬಗ್ಗೆ ದೀರ್ಘಕಾಲೀನ ದೃಷ್ಟಿಕೋನವನ್ನು ತೆರೆದಿಡುತ್ತದೆ. ಹೆಚ್ಚುವರಿಯಾಗಿ, ಒಂದು ಸಂಸ್ಥೆಯಾಗಿ ಡ್ರೀಮ್ ಎ ಡ್ರೀಮ್​​ನ ಬೆಳವಣಿಗೆ ಮತ್ತು ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಚಿಂತನೆಯ ಮಾಡುವ ಅದರ ಪಾತ್ರವನ್ನು ಬಣ್ಣಿಸುತ್ತದೆ.

ಡಾ.ಕೋನಿ ಕೆ ಚುಂಗ್ ಮಾತನಾಡಿ, “ಈ ಪುಸ್ತಕದ ಮೂಲಕ, ಸವಾಲುಗಳನ್ನು ಮೆಟ್ಟಿ ಜಯಿಸಿದವರ ಧ್ವನಿಯನ್ನು ಹೆಚ್ಚಿಸುವುದು ಮತ್ತು ಈ ಯುವಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಡ್ರೀಮ್ ಎ ಡ್ರೀಮ್​​ನ ಶ್ಲಾಘನೀಯ ಪ್ರಯತ್ನಗಳನ್ನು ಎತ್ತಿ ತೋರಿಸುವುದು ನನ್ನ ಉದ್ದೇಶ ವಾಗಿದೆ. ಈ ಪುಸ್ತಕವು ಬದಲಾವಣೆಯ ಕಥೆಗಳನ್ನು ಹಂಚಿಕೊಳ್ಳುವುದರ ಜತೆಗೆ ಕಾಳಜಿ ವಹಿಸುವವರ ವ್ಯಕ್ತಿಗಳ ಸರಿಯಾದ ಬೆಂಬಲವು ಯುವ ಮನಸ್ಸುಗಳು ಅಭಿವೃದ್ಧಿ ಹೊಂದಲು ಮತ್ತು ತಮ್ಮ ಸಮುದಾಯಗಳನ್ನು ಮುನ್ನಡೆಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಒತ್ತಿಹೇಳುತ್ತದೆ ಫೈಯರ್​​ಸೈಡ್​ ಚಾಟ್ ಮತ್ತು ಪ್ಯಾನಲ್ ಚರ್ಚೆಯಲ್ಲಿ ಇಂತಹ ಕಥೆಗಳನ್ನು ಹಂಚಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಡ್ರೀಮ್ ಎ ಡ್ರೀಮ್​​ನ ಸಹ-ಲೇಖಕ ಮತ್ತು ಸಹ-ಸಂಸ್ಥಾಪಕರಾದ ವಿಶಾಲ್ ತಲ್ರೇಜಾ ಮಾತನಡಿ, “ಈ ಕಥೆಗಳು ಪ್ರತಿಕೂಲತೆಯ ವಾತಾವರಣದಲ್ಲಿ ಬೆಳೆಯುವ ಮಕ್ಕಳಿಗೆ ಏನು ಸಾಧ್ಯ ಎಂಬುದನ್ನು ನಮಗೆ ಪ್ರಸ್ತುತಪಡಿಸುತ್ತದೆ ಮತ್ತು ಪ್ರೀತಿ, ಕಾಳಜಿ, ಗೌರವ, ಘನತೆ ಮತ್ತು ನಂಬಿಕೆಯ ತತ್ವಗಳೊಂದಿಗೆ ಆಗಬಹುದಾದ ಸಾಮಾಜಿಕ ಬದಲಾವಣೆಯ ಒಂದು ನೋಟವನ್ನು ವಿವರಿಸುತ್ತದೆ ” ಎಂದು ಹೇಳಿದ್ದಾರೆ.

ಕಾರ್ಯಕ್ರಮದ ವಿವರಗಳು
ಯಾವಾಗ
• ನವೆಂಬರ್ 29 ರಂದು ಫೈಯರ್ ಸೈಡ್ ಚಾಟ್ – ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ, ದೊಮ್ಮಲೂರು.
• ಡಿಸೆಂಬರ್ 2 ರಂದು ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪ್ಯಾನಲ್ ಚರ್ಚೆ, ಲಲಿತ್ ಅಶೋಕ್.
ಸಂಪರ್ಕ: ಸುಚಿತಾ +91 97394 59573

ಡಾ. ಕೋನಿ ಕೆ ಚುಂಗ್ ಬಗ್ಗೆ
ಕೋನಿ ಕೆ. ಚುಂಗ, EdD, ಮಾಜಿ ಫಾಸ್ಟರ್ ಅಮೇರಿಕಾ ಫೆಲೋ ಆಗಿದ್ದಾರೆ. ಅವರು 21ನೇ ಶತಮಾನದಲ್ಲಿ ಅಭಿವೃದ್ಧಿ ಹೊಂದಲು ಕಲಿಕೆ ಮತ್ತು ಬೋಧನೆಯ ಬಗ್ಗೆ ಮತ್ತು ಜನರು ಮತ್ತು ಸಮುದಾಯಗಳು ಒಟ್ಟಿಗೆ ಹೇಗೆ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸಬಹುದು ಎಂಬುದರ ಕುರಿತು ಆರು ಪುಸ್ತಕಗಳು ಮತ್ತು ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಹಲವು ಕೃತಿಗಳಿಗೆ ಅವರು ಸಹಸಂಪಾದಕರಾಗಿದ್ದಾರೆ. ಮಾಜಿ ಪ್ರೌಢಶಾಲಾ ಶಿಕ್ಷಕಿ, ಮಾಜಿ ಫೋಸ್ಟರ್ ಪೇರೆಂಟ್​ ಮತ್ತು ಹಾರ್ವರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಎಜುಕೇಶನ್​ ಗ್ಲೋಬಲ್ ಎಜುಕೇಶನ್ ಇನ್ನೋವೇಶನ್ ಇನಿಶಿಯೇಟಿವ್​​ನ ಮಾಜಿ ಸಹಾಯಕ ನಿರ್ದೇಶಕರಾಗಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಡಬ್ಲ್ಯೂ.ಇ.ಬಿ. ಡು ಬೋಯಿಸ್ (W. E. B. Du Bois) ರಿಸರ್ಚ್ ಇನ್​ಸ್ಟಿಟ್ಯೂಟ್​ನಿಂದ ಫೆಲೋಶಿಪ್ ಪಡೆದು 1994ರಿಂದ ಮಕ್ಕಳ ರಕ್ಷಣಾ ನಿಧಿಯ ಸ್ವಾತಂತ್ರ್ಯ ಶಾಲೆಗಳಲ್ಲಿ ಕಲಿಸಲು ಯುವ ಸಮುದಾಯದ ಜತೆ ಕೆಲಸ ಮಾಡಿದ್ದಾರೆ. ಅವರು ಶಿಕ್ಷಣದಲ್ಲಿ ಡಾಕ್ಟರೇಟ್, ಅಂತಾರರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಬೋಧನೆ ಮತ್ತು ಪಠ್ಯಕ್ರಮದಲ್ಲಿ ದ್ವಿ-ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ಇಂಗ್ಲಿಷ್ ಮತ್ತು ಅಮೆರಿಕನ್ ಸಾಹಿತ್ಯದಲ್ಲಿ ಪದವಿ ಪಡೆ

Leave a Reply

Your email address will not be published. Required fields are marked *