Sunday, 15th December 2024

ವಾಟ್ಸಾಪ್ ಟೆಲಿಗ್ರಾಂ ಮೂಲಕ ಹಣ ಹೂಡಿಕೆ: 6 ಆರೋಪಿಗಳ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ವಾಟ್ಸಾಪ್ ಟೆಲಿಗ್ರಾಂ ಮೂಲಕ ಹಣ ಹೂಡಿಕೆ ಮಾಡಿಸಿ ಕೊಂಡು ವಂಚನೆ ಮಾಡುತ್ತಿದ್ದ ಸೈಬರ್ ಕ್ರೈಂ ಜಾಲವನ್ನು ಪತ್ತೆ ಮಾಡಿದೆ. ಘಟನೆಗೆ ಸಂಬಂಧಿಸಿ 6 ಆರೋಪಿಗಳನ್ನು ಬಂಧಿಸ ಲಾಗಿದೆ.

ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ 84 ಬ್ಯಾಂಕ್ ಖಾತೆಯಲ್ಲಿ 254 ಕೋಟಿ ಹಣದ ವಹಿವಾಟು ಪತ್ತೆ ಮಾಡ ಲಾಗಿದೆ. ಸೈಬರ್ ಕ್ರೈಂ ವಂಚನೆಗೆ ಸಂಬಂಧಿಸಿದಂತೆ 5,013 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ನಗರದಲ್ಲಿ 17 ಸೈಬರ್ ಕ್ರೈಂ ಪ್ರಕರಣ ದಾಖಲೆಯಾಗಿತ್ತು. ವಾಟ್ಸಾಪ್ ಟೆಲಿಗ್ರಾಂ ಮೂಲಕ ಹಣ ಹೂಡಿಕೆ ಮಾಡಿಸಿ ಕೊಂಡು ವಂಚನೆ ಮಾಡುತ್ತಿದ್ದರು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ರಿಂದ ಮೊಬೈಲ್ ಲ್ಯಾಪ್ಟಾಪ್ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.