Thursday, 12th December 2024

ಡೆಲಿವರಿ ಉದ್ಯೋಗಿಗಳಿಗೆ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆ

ಬೆಂಗಳೂರು: ಬಜೆಟ್‌ ಮಂಡನೆಗೂ ಮುನ್ನ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಅಬಕಾರಿ ತೆರಿಗೆ ಹೆಚ್ಚಳ ಮಾಡಿರುವುದನ್ನು ತಿಳಿಸಿದರು.
Swiggy, zomato ಮತ್ತು Amazon ನಂತಹ ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ ಸರ್ಕಾರವು 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಕೊಡುವುದಾಗಿ ಘೋಷಣೆ ಮಾಡಿದೆ.

ಹೊಟ್ಟೆ ಪಾಡಿಗೆ ದಿನವಿಡೀ ಕಷ್ಟ ಪಟ್ಟು ದುಡಿಯುತ್ತಿರುವ ವರ್ಗ ಅಂದ್ರೆ ಅದು ಡೆಲಿವರಿ ಮಾಡುವ ಕೆಲಸಗಾರರು ಅಂದರೆ ತಪ್ಪಾಗಲ್ಲ. ಅದರಲ್ಲೂ ಈ ಸ್ವಿಗ್ಗಿ, ಜೊಮ್ಯಾಟೋ ದಲ್ಲಿ ಎಷ್ಟು ಗಂಟೆಗೆ ಆರ್ಡರ್‌ ಮಾಡಿದ್ರೂ ನಿಮ್ಮ ಮನೆ ಬಾಗಿಲಿಗೆ ಬಿಸಿ ಬಿಸಿ ಆಹಾರ ವನ್ನು ತಂದು ಕೊಡುವವರು ಡೆಲಿವರಿ ಬಾಯ್ಸ್. ಇತ್ತೀಚೆಗೆ ರಾತ್ರಿ ಸಮಯದಲ್ಲಿ ಡೆಲಿವರಿ ಬಾಯ್ಸ್‌ ಡೆಲಿವರಿ ಮಾಡುವಾಗ ಅಪಘಾತವಾಗಿರುವ ಘಟನೆಗಳು ಹೆಚ್ಚಾಗುತ್ತಲೇ ಇದೆ.

ಮೈಸೂರು ರಸ್ತೆಯಲ್ಲಿ ಡೆಲಿವರಿ ಏಜೆಂಟ್‌ಗೆ ಕಾರು ಗುದ್ದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನೆಲ್ಲಾ ಪರಿಗಣಿಸಿರುವ ಸರ್ಕಾರ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಕೊಡುವುದಾಗೊ ಘೋಷಿಸಿದೆ.

ಈ ಕಾಮರ್ಸ್ ಸಂಸ್ಥೆಗಳ ಡೆಲಿವರಿ ಬಾಯ್ಸ್‌ಗೆ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.