Sunday, 15th December 2024

ಒಂದು ತಿಂಗಳಲ್ಲಿ 3,797 ಮಂದಿಗೆ ಡೆಂಘೀ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೇವಲ ಒಂದು ತಿಂಗಳಲ್ಲಿ 3,797 ಮಂದಿಗೆ ಡೆಂಘೀ ತಗುಲಿರುವುದು ವರದಿಯಿಂದ ದೃಢಪಟ್ಟಿದೆ. ಈ ಮೂಲಕ ಪ್ರಕರಣಗಳ ಒಟ್ಟು ಸಂಖ್ಯೆ 10,000 ಗಡಿಯನ್ನು ದಾಟಿದೆ.

ರಾಜ್ಯದಲ್ಲಿ ಡೆಂಘೀ ಹೆಚ್ಚಳಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಆರೋಗ್ಯ ಇಲಾಖೆಯಿಂದ ನಿಯಂತ್ರಣ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆಯೂ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 5,756 ಹಾಗೂ ಇತರೆ ಜಿಲ್ಲೆಗಳಲ್ಲಿ 4,504 ಸೇರಿದಂತೆ ರಾಜ್ಯಾಧ್ಯಂತ 10,260 ಮಂದಿಗೆ ಡೆಂಘೀ ಸೋಕು ತಗುಲಿರುವುದು ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ.

ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 23,191 ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 18,378 ಮಂದಿಯ ರಕ್ತದ ಪರೀಕ್ಷೆ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ 2,302 ಮಂದಿಯಲ್ಲಿ ಡೆಂಘೀ ಸೋಂಕು ತಗುಲಿದೆ.

ಈವರೆಗೆ ಮೈಸೂರು 486, ಉಡುಪಿ 590, ಶಿವಮೊಗ್ಗ 264, ಕಲಬುರ್ಗಿ 219, ದಕ್ಷಿಣ ಕನ್ನಡ 210 ಡೆಂಘೀ ಪ್ರಕರಣ ಗಳು ವರದಿಯಾಗಿವೆ.

ಡೆಂಘೀ ಜೊತೆ ಜೊತೆಗೆ ಚಿಕನ್ ಗುನ್ಯಾ ಕೇಸ್ ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. 36 ಸಾವಿರಕ್ಕೂ ಅಧಿಕ ಮಂದಿ ಚಿಕನ್ ಗುನ್ಯಾ ಶಂಕಿತರನ್ನು ಗುರುತಿಸ ಲಾಗಿದ್ದು, 22 ಸಾವಿರಕ್ಕೂ ಹೆಚ್ಚು ಜನರ ರಕ್ತ ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ 1,023 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಮೈಸೂರು 168 ಹಾಗೂ ವಿಜಯಪುರದಲ್ಲಿ 112 ಅಧಿಕ ಚಿಕನ್ ಗುನ್ಯಾ ಕೇಸ್ ವರದಿಯಾಗಿವೆ.