Saturday, 14th December 2024

ಡಾ. ಜ್ಯೋತ್ಸ್ನಾ ಕಾಮತ್ ಇನ್ನಿಲ್ಲ

ಬೆಂಗಳೂರು: ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ. ಜ್ಯೋತ್ಸ್ನಾ ಕಾಮತ್(86) ನಿಧನರಾದರು.

ಅವರು ಕನ್ನಡದ ಹಿರಿಯ ಸಾಹಿತಿ, ವಿದ್ವಾಂಸರೂ ಮತ್ತು ಸಂಶೋಧಕಿಯಾಗಿದ್ದರು. ಕನ್ನಡ ಇಂಗ್ಳೀಷ್ ಮೊದಲಾದ 8 ಭಾಷೆಗಳಲ್ಲಿ ಪ್ರೌಢಿಮೆ ಗಳಿಸಿದ್ದ ಅವರು 22 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು ಮೂರು ಭಾಷೆಗಳಿಗೆ ಭಾಷಾಂತರಗೊಂಡಿವೆ.

ಇತಿಹಾಸ, ಜಾನಪದ ಮತ್ತು ಹಾಸ್ಯ ಅವರ ಮೆಚ್ಚಿನ ವಿಷಯ ಗಳಾಗಿದ್ದವು. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.