Saturday, 14th December 2024

ನಾಳೆ ಪದ್ಮಶ್ರೀ ಮಂಜಮ್ಮ ಜೋಗತಿ ಜೀವನ ಆಧಾರಿತ ನಾಟಕ “ಮಾತಾ” ಪ್ರದರ್ಶನ

ಬೆಂಗಳೂರು: ಲಯನ್ಸ್ ಇಂಟರ್‌ನ್ಯಾಷನಲ್, ಕನ್ನಡ ಮತ್ತು ಸಂಸ್ಕೃತಿ ತಂಡ ಜಿಲ್ಲೆ ೩೧೭೧ ಮತ್ತು ರಂಗಚಂದಿರ ಟ್ರಸ್ಟ್ ಆಯೋಜಿಸಿರುವ ‘ಕಾರ್ಮಿಕ-ರಂಗ ನಿರ್ದೇಶಕ ಮೈಕೋ ಶಿವಣ್ಣ ನೆನಪು’ ಕಾರ್ಯಕ್ರಮ ಆ.೧೩ರ ಭಾನುವಾರ ಸಂಜೆ ೫ಕ್ಕೆ ಬೆಂಗಳೂರು ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ತತ್ವಪದ ಗಾಯನ, ರಂಗಾಭಿನಂದನೆ, ಹಾಗೂ ನಾಟಕ ಪ್ರದರ್ಶನ ಇರಲಿದೆ. ಪದ್ಮಶ್ರೀ ಡಾ.ಮಾತಾ ಮಂಜಮ್ಮ ಜೋಗತಿ ಜೀವನ ಆಧಾರಿತ ‘ಮಾತಾ’ ನಾಟಕ ಪ್ರದರ್ಶನವೂ ನಡೆಯಲಿದ್ದು ಜಯದೇವ ಹೃದ್ರೋಗ ಸಂಸ್ಥೆಯ ನಾಡೋಜ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸುವರು.

ಲಯನ್ ಎನ್.ಆರ್.ಹೆಗಡೆ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಯಾಗಿ ಲಯನ್ ಬಿ.ಎಸ್.ನಾಗರಾಜ್ ಪಾಲ್ಗೊಳ್ಳುವರು.