Thursday, 3rd October 2024

ಬೆಂಗಳೂರಿನ ರಿಂಗ್ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರು: ಇಂದು ಕಾರ್ಯಕ್ರಮ

ಬೆಂಗಳೂರು: ಡಾ.ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರಿನ ರಿಂಗ್ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರಿಡಲು ತೀರ್ಮಾನಿಸಿದ್ದು, ಮಂಗಳವಾರ ಬೃಹತ್ ಕಾರ್ಯಕ್ರಮ ಜರುಗಲಿದೆ.

ಸಿನಿಮಾ ಸೇರಿದಂತೆ ಸಾಮಾಜಿಕ ಸಾಧನೆ ಮಾಡಿ ಮಾದರಿಯಾದ ಅಭಿಮಾನಿಗಳ ಕಣ್ಮಣಿ ದಿ.ಡಾ.ಪುನೀತ್ ರಾಜಕುಮಾರ್ ಅವರ ಹೆಸರು ಚಿರಸ್ಥಾಯಿಯಾಗುವಂತೆ ಮಾಡಲು ಈ ನೀರ್ಧಾರ ಕೈಗೊಳ್ಳಲಾಗಿದೆ.

ಮೈಸೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್ ಹಾಗೂ ಬನ್ನೇರುಘಟ್ಟವರೆಗಿನ 12ಕಿಲೋ ಮೀಟರ್ ಡಬಲ್ ರಸ್ತೆಗೆ ‘ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಹೆಸರು ಇಡಲು ನಿರ್ಧರಿಸಲಾಗಿದೆ. ಮಂಗಳವಾರ ಸಂಜೆ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಯವರು ನಾಮಕರಣ ಮಾಡಲಿದ್ದಾರೆ ಎಂದರು.

ಮಂಗಳವಾರ ಸಂಜೆ ನಡೆಯಲಿರುವ ಬೃಹತ್ ಸಮಾರಂಭಕ್ಕೆ ಅನೇಕ ಗಣ್ಯರು, ಹಿರಿಯ ನಟ ಡಾ.ಶಿವರಾಜ ಕುಮಾರ್, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.