ಗೋವಿಂದರಾಜನಗರ: ವಾಸವಿ ಜ್ಞಾನಪೀಠ ಫಸ್ಟ್ ಗ್ರೆಡ್ ಕಾಲೇಜು ಸಭಾಂಗಣ. ಅಂತರಕಾಲೇಜು ಕ್ರೀಡಾಕೂಟ-23 ಪ್ರಶಸ್ತಿ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ.ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿರವರು ಮತ್ತು ಪ್ರಾಂಶುಪಾಲರುಗಳಾದ ಪದ್ಮರವರು,ರಚನ, ರಂಗಸ್ವಾಮಿ, ಸೌಭಾಗ್ಯ ರವರು ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿದರು.
16ಕಾಲೇಜಿನ 500ಕ್ರೀಡಾಪಟುಗಳು ಪಾಲ್ಗೊಂಡಿದ್ದರು.ಹುಡುಗಿಯರ ಥ್ರೋಬಾಲ್ ಪ್ರಥಮ ಸ್ಥಾನ ವಾಸವಿ ಜ್ಞಾನ ಪೀಠ ಫಸ್ಟ್ ಗ್ರೆಡ್ ಕಾಲೇಜು , ರನ್ನರ್ ಅಪ್ ವಾಸವಿ ಶಿಕ್ಷಣ ಸಂಸ್ಥೆ.
ಯುವಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ವಿವೇಕಾನಂದ ಕಾಲೇಜು, ದ್ವಿತೀಯ ಸ್ಥಾನ ವಾಸವಿ ಜ್ಞಾನಪೀಠ ಫಸ್ಟ್ ಗ್ರೆಡ್ ಕಾಲೇಜ್.
ಕ್ರಿಕೆಟ್ ನಲ್ಲಿ ಪ್ರಥಮ ಸ್ಥಾನ ವಿ.ಇ.ಟಿ ಫಸ್ಟ್ ಗ್ರೆಡ್ ಕಾಲೇಜ್, ದ್ವಿತಿಯ ಸ್ಥಾನ ವಾಸವಿ ಗ್ರೂಪ್ ಆಫ್ ಎಜುಕೇಷನಲ್ ಇನ್ಸಟ್ಯೂಷನ್
ಫೈನಲ್ ಪಂದ್ಯದಲ್ಲಿ ಜಯಗಳಿಸಿದ ತಂಡಗಳಿಗೆ ಪ್ರಥಮ ಸ್ಥಾನ ಗಳಿಸಿದವರಿಗೆ 10 ನಗದು ಪುರಸ್ಕಾರಗಳು.
ವಾಸವಿ ಜ್ಞಾನಪೀಠ ಅಂತರ ಕಾಲೇಜು ಕ್ರೀಡಾಕೂಟ-2023ರಲ್ಲಿ ಯುವತಿಯ ಥ್ರೋಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಾಸವಿ ಜ್ಞಾನಪೀಠ ಫಸ್ಟ್ ಗ್ರೆಡ್ ಕಾಲೇಜಿನ ಕ್ರೀಡಾ ಪಟುಗಳಿಗೆ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿರವರು ಬಹುಮಾನ ವಿತರಿಸಿದರು. ಪ್ರಾಂಶುಪಾಲರಾದ ಪದ್ಮ,ರಚನ, ರಂಗಸ್ವಾಮಿ, ಸೌಭಾಗ್ಯರವರು ಉಪಸ್ಥಿತರಿದ್ದರು.