Friday, 22nd November 2024

ಭಾರಿ ಮಳೆಗೆ ಸಾಗರದ ಯುವಕ ನೀರು ಪಾಲು

ಕೆ.ಆರ್.ಪುರ: ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರಿ‌ ಮಳೆಗೆ ಯುವಕ ನೀರು ಪಾಲಾಗಿದ್ದಾನೆ.

ಕೆ ಆರ್ ಪುರದ ಗಾಯತ್ರಿ ಬಡಾವಣೆಯಲ್ಲಿ ಶಿವಮೊಗ್ಗದ ಸಾಗರದ ಮೂಲದ ಸಿವಿಲ್ ಎಂಜಿನಿಯರ್ 24 ವರ್ಷದ ಮಿಥುನ್ ರಾಜಕಾಲುವೆ ಪಾಲಾಗಿದ್ದಾನೆ.

ಸೀಗೆಹಳ್ಳಿ ಕೆರೆ ಸಂಪರ್ಕ ಕಲ್ಪಿಸುವ ಗಾಯತ್ರಿ ಬಡವಾಣೆಯ ರಾಜಕಾಲುವೆ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ಬೈಕ್ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಈ ವೇಳೆ ಯುವಕ ಬೈಕ್ ರಕ್ಷಣೆ ಮಾಡಿ ಕೊಳ್ಳಲು ಮುಂದಾಗಿದ್ದಾನೆ.

ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಯುವಕ ಮಿಥುನ್ ಪತ್ತೆ ಕಾರ್ಯ ಆರಂಭ ವಾಗಿದೆ. ಎರಡು ಪ್ರತ್ಯೇಕ ತಂಡಗಳಾಗಿ ಯುವಕನಿಗಾಗಿ ಪತ್ತೆಕಾರ್ಯ ಆರಂಭ ವಾಗಿದೆ. ಅಗ್ನಿಶಾಮಕದಳ ಹಾಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿಯಿಂದ ಪತ್ತೆಕಾರ್ಯ ಆರಂಭವಾಗಿದೆ.

ಯುವಕ ರಾಜಕಾಲುವೆಗೆ ಬಿದ್ದ ಸ್ಥಳ(ಗಾಯತ್ರಿ ಬಡಾವಣೆಯಿಂದ) ಸುಮಾರು ಎರಡು ಕಿಲೋ‌ಮೀಟರ್ ವರೆಗೂ ಹುಡುಕಾಟ ನಡೆಯಿತು. ರಾಜಕಾಲುವೆ ಮಾರ್ಗದಲ್ಲಿನ ಕಬ್ಬಿಣದ ಜಾಲರಿಗಳಲ್ಲಿ ಮೊದಲಿಗೆ ಯುವಕನಿಗಾಗಿ ಹುಡುಕಾಟ ನಡೆದಿದೆ.

ಚೀಫ್ ಫೈರ್ ಆಫೀಸರ್ ರವಿಪ್ರಸಾದ್ ನೇತೃತ್ವದಲ್ಲಿ ಯುವಕನ ಪತ್ತೆಕಾರ್ಯ ನಡೆದಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ , ಎನ್ ಡಿಆರ್ ಎಪ್ ಸಿಬ್ಬಂದಿಯಿಂದ ಕೊಚ್ಚಿ ಹೋದ ಯುವಕನ ಹುಡುಕಾಟ ನಡೆದಿದೆ. ಘಟನೆ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.