ಬೆಂಗಳೂರು: ವ್ಯಾಬ್‍ಟೆಕ್ ಕರ‍್ಪೊರೇಶನ್ ಮತ್ತು ಫೌಂಡೇಶನ್ ಫಾರ್ ಎಕ್ಸಲೆನ್ಸ್(ಎಫ್‍ಎಫ್‍ಇ) ಭಾರತ ದಲ್ಲಿನ ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಪ್ರತಿಭಾನ್ವಿತ ೨೪೦ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಎಜುಕೇಶನ್ ಸ್ಕಾಲರ್‌ಶಿಪ್ ಕಾರ‍್ಯಕ್ರಮವನ್ನು ವಿಸ್ತರಣೆ ಮಾಡಿದೆ.
“ಆಕ್ಸಿಲರೇಟಿಂಗ್ ಕೆರಿಯರ‍್ಸ್’’ ಕರ‍್ಯಕ್ರಮವು ದೇಶಾದ್ಯಂತ ೧೦೦ ಕ್ಕೂ ಹೆಚ್ಚು ಕಾಲೇಜು ಗಳಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳನ್ನು ಒಳಗೊಂಡ ಹಿಂದಿನ ಪಾಲುದಾರಿಕೆಯ ಯಶಸ್ಸಿನ ಮೇಲೆ ನಿರ್ಮಿತವಾಗಿದೆ.
ಈ ಬಗ್ಗೆ ಮಾತನಾಡಿದ ವ್ಯಾಬ್‍ಟೆಕ್ ಇಂಡಿಯಾದ ಹಿರಿಯ ಉಪಾಧ್ಯಕ್ಷರು ಮತ್ತು ಪ್ರಾದೇಶಿಕ ನಾಯಕರಾಗಿರುವ ಸುಜಾತ ನಾರಾಯಣನ್ ಅವರು, “ವ್ಯವಹಾರದಲ್ಲಿ ಯಶಸ್ಸು ಜನರೊಂದಿಗೆ ಆರಂಭವಾಗುತ್ತದೆ ಮತ್ತು ಮುಂದಿನ ಪೀಳಿಗೆಯ ಚಿಂತ ಕರು, ಚಿಂತನೆ ಮಾಡುವವರು ಮತ್ತು ಹೊಸತನವನ್ನು ಬೆಳೆಸುವವರನ್ನು ರೂಪಿಸುತ್ತದೆ’’ ಎಂದು ತಿಳಿಸಿದರು.
“ಈ ಪಾಲು ದಾರಿಕೆಯು ಪ್ರಕಾಶಮಾನವಾದ, ರ‍್ಥಿಕವಾಗಿ ಸವಾ ಲನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಅವರ ಸಂಪೂರ್ಣ ಸಾಮರ್ಥ್ಯವನ್ನು ತಲುಪುವ ನಿಟ್ಟಿನಲ್ಲಿ ಮತ್ತು ಯಶಸ್ವಿ ವೃತ್ತಿಜೀವನಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಆರ್ಥಿಕ ಬೆಂಬಲ ವನ್ನು ನೀಡುತ್ತದೆ’’ ಎಂದು ಹೇಳಿದರು.
ವ್ಯಾಬ್‍ಟೆಕ್‍ನ ನಮ್ಮ ಸಮುದಾಯಗಳ ಆರೈಕೆ ಕರ‍್ಯಕ್ರಮದಡಿ ಈ ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ. ನೌಕರರು ವಾಸ ಮಾಡುವ ಮತ್ತು ಕೆಲಸ ಮಾಡುವ ಸಮುದಾಯಗಳಲ್ಲಿ ಅರ್ಥಪೂರ್ಣವಾದ, ಸಮರ್ಥನೀಯವಾದ ಪ್ರಭಾವವನ್ನು ಬೀರಲು ಬದ್ಧವಾಗಿದೆ. ವಿದ್ಯಾರ್ಥಿವೇತನದ ಜೊತೆಗೆ ಈ ಕರ‍್ಯಕ್ರಮವು ವಿದ್ಯರ‍್ಥಿಗಳಿಗೆ ಇಂರ‍್ನ್‍ಶಿಪ್ ಕಾರ‍್ಯಕ್ರಮಗಳು, ಯೋಜನೆಗಳು ಮತ್ತು ಕರ‍್ಪೊರೇಟ್ ಸಾಮಾಜಿಕ ಜವಾಬ್ದಾರಿಗಳು ಹಾಗೂ ಸೌಲಭ್ಯಗಳ ಮೂಲಕ ಕಲಿಯಲು, ಅಭಿವೃದ್ಧಿಪಡಿಸಲು ಹಾಗೂ ಬೆಳೆಯಲು ಅವಕಾಶಗಳನ್ನು ಒದಗಿಸಿಕೊಡುತ್ತದೆ.
ಫೌಂಡೇಶನ್ ಫಾರ್ ಎಕ್ಸಲೆನ್ಸ್ ಇಂಡಿಯಾ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಸುಧಾ ಕಿಡಾವ್ ಅವರು ಮಾತನಾಡಿ, “ಪ್ರಸ್ತುತ ಸಾರಿಗೆ ಉದ್ಯಮವು ವಿಶಾಲವಾಗಿದೆ ಹಾಗೂ ವೇಗವಾಗಿ ನವೀನ ರೀತಿಯಲ್ಲಿ ಬೆಳೆಯುತ್ತಿದೆ. ಈ ಕಾರ‍್ಯಕ್ರಮವು ಎಫ್‍ಎಫ್‍ಇ ವಿದ್ವಾಂಸರಿಗೆ ಅನುಭವ ಪಡೆಯಲು ಹಾಗೂ ಯೋಜನೆಗಳಲ್ಲಿ ಉದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಲು ಅನುಮತಿಸುತ್ತದೆ’’ ಎಂದು ಹೇಳಿದರು.