Sunday, 15th December 2024

ಎಂಟು ತಿಂಗಳವರೆಗೆ ಯಾವುದೇ ಅನುದಾನ ಕೇಳಬಾರದು: ಸಿದ್ದರಾಮಯ್ಯ ಮನವಿ

muda scam cm siddaramaiah

ಬೆಂಗಳೂರು: ಕಾಂಗ್ರೆಸ್ ಶಾಸಕರು ಮುಂದಿನ ಎಂಟು ತಿಂಗಳವರೆಗೆ ಯಾವುದೇ ಅನು ದಾನವನ್ನು ಕೇಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದಿದೆ.

ಬಜೆಟ್ ಮಂಡನೆಗೂ ಮುನ್ನ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಯಲ್ಲಿ  ಮಾತನಾಡಿ, ಚುನಾವಣೆಗೂ ಮುನ್ನ ನಾವು ನೀಡಿದ್ದ ಐದು ಗ್ಯಾರಂಟಿ ಗಳನ್ನು ನಾವು ಜಾರಿಗೊಳಿಸಲೇಬೇಕಿದ್ದು, ಅದಕ್ಕಾಗಿ ಬದ್ಧತೆ ತೋರಿಸಬೇಕಿದೆ.

ಗ್ಯಾರಂಟಿಗಳ ಯೋಜನೆಗೆ ಸಾವಿರಾರು ಕೋಟಿ ರೂ.ಗಳು ಬೇಕಿರುವುದರಿಂದ ಸಂಪನ್ಮೂಲ ಕ್ರೋಢೀಕರಣವು ನಮ್ಮ ಮುಂದಿನ ಬಹುದೊಡ್ಡ ಸವಾಲಾಗಿದೆ ಎಂದರು.

ಸವಾಲನ್ನು ಸುಲಭವಾಗಿ ಮೆಟ್ಟಲು ಸಾಕಷ್ಟು ದಾರಿಗಳೂ ನಮ್ಮ ಮುಂದಿವೆ ಎಂದು ಅವರು ವಿವರಿಸಿದ್ದು, ಗ್ಯಾರಂಟಿಗಳ ಜಾರಿಗೆ ಬೇಕಾದ ಹಣವನ್ನು ಹೊಂದಿಸಲು ನಾವು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಅದಕ್ಕಾಗಿ, ಕೆಲವು ಉಳಿತಾಯಗಳನ್ನೂ ಮಾಡಬೇಕಿದ್ದು ಆ ನಿಟ್ಟಿನಲ್ಲಿ, ಶಾಸಕರಿಗೆ ನೀಡಬೇಕಾದ ಅನುದಾನವನ್ನು ಮುಂದಿನ ಎಂಟು ತಿಂಗಳ ವರೆಗೆ ಶಾಸಕರು ಕೇಳದೇ ಇದ್ದರೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಚ್ಚಿನ ಬೆಂಬಲ ಕೊಟ್ಟಂತಾಗುತ್ತದೆ ಎಂದು ಹೇಳಿದರು.