ಬೆಂಗಳೂರು: ಸಾಮಾನ್ಯ ದೃಷ್ಟಿಯನ್ನು ಹೊಂದಿರುವವರಿಗೆ ಹೋಲಿಸಿದರೆ ಮಯೋಪಿಯಾ ಹೊಂದಿರುವವರಲ್ಲಿ ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಗ್ಲಾಕೋಮಾ ಜಾಗೃತಿ ಮಾಸದ ಆಚರಣೆಯ ವೇಳೆ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ವೈದ್ಯರು ಹೇಳಿ ದ್ದಾರೆ.
ಸಮೀಪ ದೃಷ್ಟಿ ದೋಷ ಎಂದೂ ಕರೆಯಲಾಗುವ ಮಯೋಪಿಯಾ ಒಂದು ಅತ್ಯಂತ ಸಾಮಾನ್ಯ ದೃಷ್ಟಿ ಸಮಸ್ಯೆಯಾಗಿದ್ದು, ಇದರಲ್ಲಿ ಸಮೀಪದ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಆದರೆ, ದೂರದ ವಸ್ತುಗಳು ಮಂದವಾಗಿ ಕಾಣಿಸುತ್ತವೆ. ಇದು ರಿಫ್ರಾಕ್ಟಿವ್ ದೋಷಕ್ಕೆ ಕಾರಣವಾಗುತ್ತದೆ ಮತ್ತು ಭಾರತದ ೧೦-೨೦ ಶೇಕಡಾ ಜನಸಂಖ್ಯೆಗೆ ಈ ಸಮಸ್ಯೆ ಬಾಧಿಸುತ್ತದೆ.
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ಕನ್ಸಲ್ಟಂಟ್ ಆಪ್ಥಾಲ್ಮಾಲಜಿಸ್ಟ್ ಡಾ. ಪಿ ಸುನೀತಾ ಹೇಳುವಂತೆ “ಮಯೋಪಿಯಾ ಮತ್ತು ಗ್ಲಾಕೋಮಾ ಮಧ್ಯೆ ಇರುವ ಸಂಬ0ಧವನ್ನು ಪರಿಗಣಿಸಿ, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಓದುವುದು, ಕಂಪ್ಯೂಟರ್ ಬಳಕೆ, ವೀಡಿಯೋ ಗೇಮ್ ಆಡುವುದು ಮತ್ತು ಸಮೀಪದಿಂದ ಟಿವಿ ವೀಕ್ಷಣೆ ಇತ್ಯಾದಿ ಚಟುವಟಿಕೆಗಳನ್ನು ಕಡಿಮೆ ಮಾಡುವ ಮೂಲಕ ಮಕ್ಕಳಲ್ಲಿ ಮಯೋಪಿಯಾವನ್ನು ನಿಯಂತ್ರಿಸಬಹುದು. ಈ ಎಲ್ಲ ಚಟುವಟಿಕೆಗಳೂ ಮಕ್ಕಳ ಕಣ್ಣಿನಿಂದ ಹೆಚ್ಚು ದೃಷ್ಟಿ ಬೇಡಿಕೆಯನ್ನು ಹುಟ್ಟುಹಾಕುತ್ತವೆ.
ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ಸಮಯ ಕಳೆಯುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಸರಿಯಾದ ಕರೆಕ್ಟಿವ್ ಲೆನ್ಸ್ ಅನ್ನು ಧರಿಸುವುದು ಕೂಡಾ ಅತ್ಯಂತ ಮುಖ್ಯವಾಗಿರುತ್ತದೆ. ಮಯೋಪಿಯಾ ಹೊಂದಿರುವವರು ವರ್ಷಕ್ಕೆ ಎರಡು ಬಾರಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಜಾಗೃತಿ ಕೊರತೆ, ಪತ್ತೆ ಸಾಧನಗಳ ಸೀಮಿತ ಲಭ್ಯತೆ ಮತ್ತು ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡುವುದಕ್ಕೆ ಬದ್ಧವಾಗದೇ ಇರುವುದು ಇತ್ಯಾದಿ ಸಮಸ್ಯೆಗಳು ಗ್ಲಾಕೋಮಾ ಮತ್ತು ಮಯೋಪಿಯಾವನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವಲ್ಲಿ ಇರುವ ಅಡಚಣೆಗಳಾಗಿವೆ.”
ಇನ್ನೊಂದೆಡೆ ಗ್ಲಾಕೋಮಾ ಭಾರತದಲ್ಲಿ ದೃಷ್ಟಿ ಮಾಂದ್ಯತೆಗೆ ಮೂರನೇ ಪ್ರಮುಖ ಕಾರಣವಾಗಿದೆ ಎಂದು ಡಾ. ಅಗರ್ವಾಲ್ಸ್ ಹಾಸ್ಪಿಟಲ್‌ನ ಕ್ಲಿನಿಕಲ್ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ. ರಾಮ್ ಎಸ್ ಮಿರ್ಲೆ ಹೇಳಿದ್ದಾರೆ. ಅಲ್ಲದೆ, “ಮಧ್ಯಮ ಪ್ರಮಾಣದಿಂದ ಅಧಿಕ ಪ್ರಮಾಣದ ಮಯೋಪಿಯಾ ಹೊಂದಿರುವವರನ್ನು ಗ್ಲಾಕೋಮಾ ಕಾಣಿಸಿಕೊಳ್ಳುವ ಅಪಾಯ ಮೂರರಿಂದ ನಾಲ್ಕು ಪಟ್ಟು ಹೆಚ್ಚಿದೆ. ಕಣ್ಣಿನ ದ್ರವ ಒತ್ತಡದಿಂದ ಸ್ವತಂತ್ರವಾಗಿ ಈ ಅಪಾಯ ಕಂಡುಬರುತ್ತದೆ. ೩೦% ಪ್ರೆöÊಮರಿ ಓಪನ್ ಆಂಗಲ್ ಗ್ಲಾಕೋಮಾ (ಪಿಒಎಜಿ) ರೋಗಿಗಳು ಮಯೋಪಿಯಾ ಹೊಂದಿದ್ದಾರೆ. ಮಯೋಪಿಯಾ ಹೊಂದಿರುವವರಲ್ಲಿ ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆಯು ವಯಸ್ಸು, ಕುಟುಂಬದ ಇತಿಹಾಸ ಮತ್ತು ಮಯೋಪಿಯಾ ಮಟ್ಟವನ್ನು ಅವಲಂಬಿಸಿರುತ್ತದೆ.
ತೆಳ್ಳನೆಯ ಕಾರ್ನಿಯಾ, ಅಧಿಕ ಮಯೋಪಿಯಾ ಅಥವಾ ಕುಟುಂಬದ ಇತಿಹಾಸವು ಗ್ಲಾಕೋಮಾ ಬೆಳವಣಿಗೆಯನ್ನು ಅಪಾಯಕಾರಿ ಅಂಶಗಳಾಗಿವೆ. ಕಳೆದ ಹಲವು ವರ್ಷಗಳಿಂದಲೂ, ಮಯೋಪಿಯಾ ಮತ್ತು ಗ್ಲಾಕೋಮಾ ಹೊಂದಿರುವ ವ್ಯಕ್ತಿಗಳು ದೃಷ್ಟಿ ದೋಶವನ್ನು ಅನುಭವಿಸಿದ್ದಾರೆ. ಕಾಲಕಾಲಕ್ಕೆ ಕಣ್ಣಿನ ತಪಾಸಣೆಯು ಇಂತಹ ಪ್ರಕರಣಗಳಲ್ಲಿ ಅತ್ಯಂತ ಪ್ರಮುಖವಾಗಿದ್ದು, ಇದು ರೋಗದ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಸರಿಯಾದ ಚಿಕಿತ್ಸೆ ಯೋಜನೆಯನ್ನು ಅನುಸರಿಸುತ್ತದೆ.”
ಡಾ. ರಾಮ್ ಎಸ್ ಮಿರ್ಲೆ ಹೇಳುವಂತೆ “ಕೋಲಾರದಲ್ಲಿನ ಶಾಲೆಯಲ್ಲಿ ೬-೧೬ ವರ್ಷಗಳ ವ್ಯಕ್ತಿಗಳಲ್ಲಿ ೨೦೧೨ ರಲ್ಲಿ ನಡೆಸಿದ ಎರಡು ಕಣ್ಣು ತಪಾಸಣೆ ಅಧ್ಯಯನಗಳಲ್ಲಿ ೧೧.೫% ಜನರಿಗೆ ಮಯೋಪಿಯಾ ಇರುವುದು ಕಂಡುಬAದಿದೆ. ೨೦೧೬ ರಲ್ಲಿ ಉಡುಪಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ೪% ಮಯೋ ಪಿಯಾ ಇರುವುದು ಪತ್ತೆಯಾಗಿದೆ. ೧೮ ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನ ಸುಮಾರು ೪೧% ರಷ್ಟು ಜನಸಂಖ್ಯೆಯನ್ನು ಹೊಂದಿರುವ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತವಾಗಿದೆ. ಹೀಗಾಗಿ, ಮಯೋಪಿಯಾ ಸಮಸ್ಯೆ ಹೆಚ್ಚು ಪ್ರಮುಖವಾಗಿದೆ.”
ಗ್ಲಾಕೋಮಾ ದೀರ್ಘಕಾಲೀನ, ಬೆಳೆಯುತ್ತಿರುವ ಕಣ್ಣಿನ ರೋಗವಾಗಿದ್ದು, ಆಪ್ಟಿಕ್ ನರದ ಹಾನಿಯಿಂದ ಕಂಡುಬರುತ್ತದೆ. ಇದು ನಿಧಾನವಾಗಿ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ. ಮೊದಲ ಹೊರ ಮೇಲ್ಮೆöÊ ದೃಷ್ಟಿಗೆ ಇದು ಬಾಧಿಸುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಣ್ಣಿಗೆ ಹೆಚ್ಚು ಒತ್ತಡ ಹಾಕುವು ದಾಗಿದೆ. ದೊಡ್ಡ ಪ್ರಮಾಣದಲ್ಲಿ ಕಣ್ಣಿಗೆ ಹಾನಿಯಾಗುವವರೆಗೂ ಯಾವುದೇ ಎಚ್ಚರಿಕೆ ಚಿಹ್ನೆಗಳು ಕಂಡುಬರುವುದಿಲ್ಲ. ಔಷಧ ಅಥವಾ ಲೇಸರ್ ಸರ್ಜರಿ ಮೂಲಕ ಇಂಟ್ರಾಕ್ಯುಲರ್ ಒತ್ತಡ (ಕಣ್ಣಿನ ದ್ರವ ಒತ್ತಡ) ಕಡಿಮೆ ಮಾಡುವ ವಿಧಾನವನ್ನು ಚಿಕಿತ್ಸೆಯು ಒಳಗೊಂಡಿರುತ್ತದೆ. ೪೦ ಹಾಗೂ ಹೆಚ್ಚು ವಯಸ್ಸಿನ ಸುಮಾರು ೧೨ ಮಿಲಿಯನ್ ಜನರು ಭಾರತದಲ್ಲಿ ಗ್ಲಾಕೋಮಾದಿಂದ ಬಳಲುತ್ತಿದ್ದಾರೆ” ಎಂದು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ಕ್ಲಿನಿಕಲ್ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ. ಅರ್ಚನಾ ಎಸ್ ಹೇಳಿದ್ದಾರೆ.