Saturday, 14th December 2024

ಬಂಗಾರ ದರದಲ್ಲಿ 530 ರೂ. ಏರಿಕೆ

ಬೆಂಗಳೂರು: ಬಂಗಾರದ ದರದಲ್ಲಿ 530 ರೂ. ಏರಿಕೆಯಾಗಿದೆ. 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 55,630 ರೂ.ಗೆ ವೃದ್ಧಿಸಿದೆ.‌

22 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರದಲ್ಲಿ 500 ರೂ. ಏರಿಕೆಯಾಗಿದ್ದು, 51,000 ರೂ.ಗೆ ಹೆಚ್ಚಳವಾಗಿದೆ.

ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 1,000 ರೂ. ಹೆಚ್ಚಳವಾಗಿದ್ದು, 75,500 ರೂ.ಗೆ ವೃದ್ಧಿಸಿದೆ.

ಬೆಂಗಳೂರಿನಲ್ಲಿ ಸೋಮವಾರ ಒಂದೇ ದಿನ 22 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಬಂಗಾರದ ದರದಲ್ಲಿ 5,000 ರೂ. ಏರಿಕೆಯಾಗಿದೆ. 24 ಕ್ಯಾರಟ್‌ ಚಿನ್ನದ ದರ ಯಥಾಸ್ಥಿತಿಯಲ್ಲಿ ಇತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆ ಯಲ್ಲಿ ಡಾಲರ್‌ ಎದುರು ರೂಪಾ ಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.

Read E-Paper click here