Thursday, 12th December 2024

ಎಲೆಕ್ಟ್ರಿಕ್ ವೆಹಿಕಲ್ ಡೀಲರ್ ಫೈನಾನ್ಸಿಂಗ್ ಕಾರ್ಯಕ್ರಮಕ್ಕಾಗಿ, HDFC ಬ್ಯಾಂಕ್‍ನೊಂದಿಗೆ ಕೈ ಜೋಡಿಸಿದ ಟಾಟಾ ಮೋಟಾರ್ಸ್

 ಪ್ರಮುಖ ಅಂಶಗಳು: 

• ಟಾಟಾ ಮೋಟಾರ್ಸ್‍ನ ಡೀಲರ್ ಗಳಿಗಾಗಿ ಈ ರೀತಿಯ ವಿಶಿಷ್ಟ ಎಲೆಕ್ಟ್ರಿಕ್ ವೆಹಿಕಲ್ ಇನ್ವೆಂಟರಿ ಫೈನಾನ್ಸಿಂಗ್ ಕಾರ್ಯಕ್ರಮ
• ಇಂಟರ್ನಲ್ ಕಂಬಸ್ಟನ್ ಎಂಜಿನ್‍ಗಳಿಗೆ (ICE) ಹೋಲಿಸಿದರೆ, EV ಗಳಿಗೆ ವಿಸ್ತರಿಸಲಾದ ಮಿತಿಗಳು ನಿಯಮಿತ ಡೀಲರ್ ಹಣಕಾಸು ಮಿತಿಗಳಿಗಿಂತ ಹೆಚ್ಚಾಗಿರುತ್ತದೆ.
• ಆಕರ್ಷಕವಾದ ವಿಶೇಷ ಬೆಲೆಯನ್ನು REPO ದರಗಳಿಗೆ ಲಿಂಕ್ ಮಾಡಲಾಗಿದೆ.
• ಗರಿಷ್ಠ ಋತುಗಳಲ್ಲಿ ಹೆಚ್ಚುವರಿ ಮಿತಿ; ವರ್ಷಕ್ಕೆ 3 ಬಾರಿ ವಿಸ್ತರಿಸಬಹುದು.

ಬೆಂಗಳೂರು: ದೇಶದಲ್ಲಿ EV ಅಳವಡಿಕೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಯಾದ ಟಾಟಾ ಮೋಟಾರ್ಸ್, ತನ್ನ ಅಧಿಕೃತ ಪ್ಯಾಸೆಂಜರ್ EV ವಿತರಕರಿಗೆ ಎಲೆಕ್ಟ್ರಿಕ್ ವೆಹಿಕಲ್ ಡೀಲರ್ ಫೈನಾನ್ಸಿಂಗ್ ಪರಿಹಾರವನ್ನು ನೀಡಲು ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ HDFC ಬ್ಯಾಂಕ್‍ನೊಂದಿಗೆ ಕೈಜೋಡಿಸಿದೆ. ಈ ಯೋಜನೆಯಡಿಯಲ್ಲಿ, ಟಾಟಾ ಮೋಟಾರ್ಸ್ ತನ್ನ ವಿತರಕರಿಗೆ ತಮ್ಮ ICE ಹಣಕಾಸು ಮಿತಿಯ ಮೇಲೆ ಮತ್ತು ಹೆಚ್ಚಿನ ದಾಸ್ತಾನು ನಿಧಿಯನ್ನು ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಗೆ ಲಿಂಕ್ ಮಾಡಲಾದ ಆಕರ್ಷಕ ಬೆಲೆಯೊಂದಿಗೆ ಒದಗಿಸು ತ್ತದೆ. ಮರುಪಾವತಿ ಅವಧಿಯು 60 ರಿಂದ 75 ದಿನಗಳವರೆಗೆ ಇರುತ್ತದೆ. ಇದಲ್ಲದೆ, ಹೆಚ್ಚಿನ ಬೇಡಿಕೆಯ ಹಂತಗಳನ್ನು ಪೂರೈಸಲು ಬ್ಯಾಂಕ್ ಹೆಚ್ಚುವರಿ ಮಿತಿಯನ್ನು ನೀಡುತ್ತದೆ, ಡೀಲರ್ ಗಳಿಗೆ ಇದು ವರ್ಷದಲ್ಲಿ 3 ಬಾರಿ ಲಭ್ಯವಿರುತ್ತದೆ.

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‍ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‍ನ ನಿರ್ದೇಶಕರಾದ ಶ್ರೀ ಆಸಿಫ್ ಮಲ್ಬಾರಿ ಮತ್ತು ಎಚ್‍ಡಿಎಫ್‍ಸಿ ಬ್ಯಾಂಕ್‍ನ ಗ್ರೂಪ್ ಹೆಡ್ -ರಿಟೇಲ್ ಅಸೆಟ್ಸ್ ಶ್ರೀ ಅರವಿಂದ್ ಕಪಿಲ್ ಅವರು ಈ ಪಾಲುದಾರಿಕೆಯ MoU ಗೆ ಸಹಿ ಮಾಡಿದ್ದಾರೆ.

ಈ ಹಣಕಾಸು ಯೋಜನೆಯ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‍ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‍ನ ನಿರ್ದೇಶಕರಾದ ಶ್ರೀ ಆಸಿಫ್ ಮಲ್ಬಾರಿ ಹೇಳಿದರು, “ನಮ್ಮ ಅಧಿಕೃತ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ ಡೀಲರ್ ಪಾಲುದಾರರಿಗಾಗಿನ ಈ ಫೈನಾನ್ಸಿಂಗ್ ಪ್ರೋಗ್ರಾಂಗಾಗಿ ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಬ್ಯಾಂಕ್‍ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಳ್ಳಲು ನಮಗೆ ಅತ್ಯಂತ ಸಂತೋಷವಾಗಿದೆ. ನಮ್ಮ ವಿತರಕರು EV ಗಳ ತ್ವರಿತ ಅಳವಡಿಕೆಗಾಗಿ ನಮಗೆ ನಿರಂತರ ಬೆಂಬಲವನ್ನು ಒದಗಿಸಿದ್ದಾರೆ ಮತ್ತು HDFC ಬ್ಯಾಂಕ್‍ನೊಂದಿಗಿನ ಈ ಸಂಬಂಧ ಹಸಿರು ಚಲನಶೀಲತೆಯನ್ನು ಸಾಧಿಸುವ ನಮ್ಮ ದೃಷ್ಟಿಯಲ್ಲಿ ನಮಗೆ ಮತ್ತಷ್ಟು ಸಹಾಯ ಮಾಡುತ್ತದೆ. ಈ ಟೈ-ಅಪ್ ಮೂಲಕ, ನಾವು ನಮ್ಮ ಗ್ರಾಹಕರಿಗೆ ಇಗಿ ಖರೀದಿಯ ಅನುಭವವನ್ನು ಹೆಚ್ಚು ಸುಗಮಗೊಳಿಸುತ್ತೇವೆ ಮತ್ತು ಇದು ಟಾಟಾ ಕಾರುಗಳ ಒಟ್ಟಾರೆ ಖರೀದಿ ಅನುಭವದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ನಮಗೆ ಭರವಸೆ ಇದೆ. ”

ಈ ಸಹಭಾಗಿತ್ವದ ಕುರಿತು ಮಾತನಾಡಿದ HDFC ಬ್ಯಾಂಕ್‍ನ ರಿಟೇಲ್ ಅಸೆಟ್ಸ್ ಗ್ರೂಪ್ ಹೆಡ್, ಶ್ರೀ ಅರವಿಂದ್ ಕಪಿಲ್, “HDFC ಬ್ಯಾಂಕ್‍ನಲ್ಲಿ ನಾವು ಈ ಕಾರ್ಯಕ್ರಮದೊಂದಿಗಿನ ಸಹಭಾಗಿತ್ವಕ್ಕಾಗಿ ಬಹಳ ಸಂತೋಷಪಡುತ್ತೇವೆ. ಇದು ವೈಯಕ್ತೀಕರಿಸಿದ ಫೈನಾನ್ಸಿಂಗ್ ಪ್ರೋಗ್ರಾಂ ಮೂಲಕ ಹೊಸ ಗ್ರಾಹಕ ವಿಭಾಗಗಳನ್ನು ಟ್ಯಾಪ್ ಮಾಡಲು ಮತ್ತು ದೇಶದಲ್ಲಿ EV ಸಂಸ್ಕೃತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು 2031-32 ರ ಹೊತ್ತಿಗೆ ಕಾರ್ಬನ್ ನ್ಯೂಟ್ರಲ್ ಆಗುವ ನಮ್ಮ ಪ್ರಯಾಣದಲ್ಲಿ ಇನ್ನೊಂದು ಹೆಜ್ಜೆಯಾಗಿದೆ ” ಎಂದರು.

ಟಾಟಾ ಮೋಟಾರ್ಸ್ ತನ್ನ ಪ್ರವರ್ತಕ ಪ್ರಯತ್ನಗಳೊಂದಿಗೆ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದೆ ಮತ್ತು ಭಾರತದಲ್ಲಿ ಇ-ಮೊಬಿಲಿಟಿ ತರಂಗವನ್ನು ಮುನ್ನಡೆಸುತ್ತಿದೆ ಮತ್ತು ಇದುವರೆಗೆ 50,000 ಟಾಟಾ EVಗಳನ್ನು ವೈಯಕ್ತಿಕ ಮತ್ತು ಫ್ಲೀಟ್ ವಿಭಾಗಗಳಲ್ಲಿ ಉತ್ಪಾದಿಸುವುದರೊಂದಿಗೆ, FY’22 ರಲ್ಲಿ 89% ನಷ್ಟು ಬಲವಾದ ಮಾರುಕಟ್ಟೆ ಪಾಲನ್ನು ಹೊಂದಿದೆ.