Sunday, 24th November 2024

ಮೇ 13ರವರೆಗೆ ಭಾರೀ ಮಳೆ ಬೀಳುವ ಸಾಧ್ಯತೆ..!

ಬೆಂಗಳೂರು : ‘ಮೋಚಾ’ ಚಂಡಮಾರುತ ಸೃಷ್ಟಿಯಾದ ಹಿನ್ನೆಲೆ ಮುಂದಿನ ಮೇ 13 ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಒಳನಾಡು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ. ಮೇ 6 ಹಾಗೂ 7 ರಂದು ಅತಿ ಹೆಚ್ಚಾಗಿ ರಾಯಚೂರು ಜಿಲ್ಲೆಯ ರಾಯ ಚೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯಾಗಲಿದೆ. ಹಾಗೂ ಕೊಡಗು ಹಾಗೂ ಹಾಸನದ ದಕ್ಷಿಣ ಭಾಗಗಳಲ್ಲಿ ಮಳೆಯಾಗಲಿದೆ.

ಮೇ 8 ಹಾಗೂ 9 ರಂದು ಮಂಡ್ಯ, ದೊಡ್ಡಬಳ್ಳಾಪುರ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಹಾವೇರಿ, ಉಡುಪಿ, ಬೆಂಗಳೂರು ನಗರ,ಕಲಬುರಗಿ, ರಾಯಚೂರು, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ಕೊಪ್ಪಳ, ಗದಗ, ಚಿತ್ರದುರ್ಗ, ತುಮಕೂರು, ಕೋಲಾರದಲ್ಲಿ ಮಳೆಯಾಗಲಿದೆ.

ಮೇ 10ರಂದು ದಾವಣಗೆರೆ, , ಕೊಡಗಿನಲ್ಲಿ ಮಾತ್ರ ಭಾರೀ ಮಳೆ ಬೀಳಲಿದ್ದು, ಮೇ 12. 13ರಂದು ಹಾಸನ, ಬಾಗಲಕೋಟೆಯ ದಕ್ಷಿಣ, ಮಂಡ್ಯದ ದಕ್ಷಿಣ, ತುಮಕೂರು ದಕ್ಷಿಣ, ಮಂಡ್ಯ, ಚಾಮರಾಜನಗರದ ದಕ್ಷಿಣ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಮೈಸೂರಿನ ಪಶ್ಚಿಮ ಭಾಗ ಹಾಗೂ ಬೆಳಗಾವಿಯ ದಕ್ಷಿಣ, ಹಾವೇರಿಯಲ್ಲಿ ಮಳಡ ಯಾಗಲಿದೆ.

ಮೇ 14ರಂದು ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿಯ ದಕ್ಷಿಣ, ಕೊಡಗು, ಹಾವೇರಿ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ, ಸೇರಿ ಹಲವು ಕಡೆ ಮಳೆಯಾಗಲಿದೆ.