ಬೆಂಗಳೂರು: “ನನ್ನ ತಂದೆ ಹಾಗೂ ಹೀರೋ ಮೋಟೋಕಾರ್ಪ್‌ನ ಸ್ಥಾಪಕ ಚೇರ್ಮನ್ ಆದ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರು ವಿಶ್ವವ್ಯಾಪಿಯಾಗಿ ಕೋಟ್ಯಂತರ ಜನರಿಗೆ ಪ್ರೇರಣೆ ಒದಗಿಸಿದ್ದರು. ಅವರ ದೂರದೃಷ್ಟಿಯು, ಭಾರತೀಯ ಆಟೋಮೋಟಿವ್ ಉದ್ದಿಮೆ ಹಾಗೂ ಭಾರತೀಯ ಉದ್ದಿಮೆಯ ಚಿತ್ರಣವನ್ನೇ ಪರಿವರ್ತಿಸಿ, ಸೃಜನಶೀಲತೆ, ಆವುಷ್ಕಾರ, ಧೈರ್ಯ ಹಾಗೂ ವಿಶ್ವಾಸದ ಪರಂಪರೆಯನ್ನು ಬಿಟ್ಟುಹೋಯಿತು. ಅವರಿಗೆ, ಲಾಭಕ್ಕಿಂತಲೂ ವ್ಯಾಪಾರ ಹೆಚ್ಚಾಗಿತ್ತು-ಅದು, ಜನರ ಕುರಿತಾಗಿತ್ತು, ಅಂದರೆ, ವ್ಯಕ್ತಿ ಮತ್ತು ಸಮುದಾಯ ಇಬ್ಬರ ಕುರಿತಾಗಿತ್ತು.
ಅವರ ಶತಮಾನೋತ್ಸವದ ಒಂದು ವರ್ಷದ ಪೂರ್ಣಗೊಳ್ಳುವಿಕೆಯನ್ನು ನಾವು ಆಚರಿಸುತ್ತಿರುವಂತಹ ಸಂದರ್ಭದಲ್ಲಿ, ಅವರ ಪರಂಪರೆಯ ಗೌರವಾರ್ಥವಾಗಿ ಸೃಷ್ಟಿಸಲಾಗಿರುವ ಇಂಜಿನಿಯರಿಂಗ್ ಅದ್ಭುತವಾದ “ದಿ ಸೆಂಟೆನಿಯಲ್(‘The Centennial’)” ಅನ್ನು ಪರಿಚಯಿಸುತ್ತಿರುವುದಕ್ಕೆ ನನಗೆ ಅತೀವ ಉತ್ಸಾಹ ಮತ್ತು ಹೆಮ್ಮೆ ಆಗುತ್ತಿದೆ. ’ದಿ ಸೆಂಟೆನಿಯಲ್’ ಕೇವಲ ಒಂದು ಮೈಲಿಗಲ್ಲಿನ ಮೋಟಾರುಸೈಕಲ್ ಅಲ್ಲ, ಬದಲಿಗೆ ಅದು, ಉಕ್ಕು ಮತ್ತು ಇಂಗಾಲ ಫೈಬರ್‌ನಲ್ಲಿ ಬರೆಯಲಾದ ಒಂದು ಸ್ಮರಣೆಯಾಗಿದೆ. ಈ ಅದ್ಭುತವಾದ ಯಂತ್ರದ ವಿನ್ಯಾಸ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಎಲ್ಲವೂ ನಮ್ಮ ಪ್ರೇರಣೆ ಒದಗಿಸುವ ಸ್ಥಾಪಕರ ಅಳಿಸಲಾಗದ ಗುರುತನ್ನು ಪ್ರತಿಫಲಿಸುತ್ತದೆ.
ಅವರ ಒಳಗೊಳ್ಳುವ ದೂರದೃಷ್ಟಿಯು, ಹೀರೋ ಸಮುದಾಯದಲ್ಲಿ ಪ್ರತಿಯೊಬ್ಬರನ್ನೂ ಆಲಂಗಿಸಿತ್ತು-ನಮ್ಮ ಗ್ರಾಹಕರು, ಉದ್ಯೋಗಿಗಳು, ಡೀಲರ್‌ಗಳು, ಸಹಭಾಗಿಗಳು, ಸರಬರಾಜುದಾರರು ಹಾಗೂ ಇತರ ಭಾಗೀದಾರರು, ಈ 100 ದಿನಗಳ ಅವಧಿಯಲ್ಲಿ, ನಾವು ಇದನೆಲ್ಲಾ ಪ್ರಾರಂಭಿಸಿದ ಮನುಷ್ಯನನ್ನು ಆಚರಿಸುತ್ತಿದ್ದೇವೆ. ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101ನೆ ಜನ್ಮವಾರ್ಷಿಕೋತ್ಸವದಂದು, ಅವರ ಗೌರವಾರ್ಥ ನಮ್ಮೊಡನೆ ಸೇರಿಕೊಳ್ಳಲು ನಾನು ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತಿದ್ದೇನೆ.”
ಡಾ. ಪವನ್ ಮುಂಜಾಲ್
ಎಕ್ಸಿಕ್ಯೂಟಿವ್ ಚೇರ್ಮನ್
ಹೀರೋ ಮೋಟೋಕಾರ್ಪ್
ಸಂಗ್ರಹಕಾರರ ಆವೃತ್ತಿಯ ಮೋಟಾರುಸೈಕಲ್ ಆದ “ದಿ ಸೆಂಟೆನಿಯಲ್” ನೊಂದಿಗೆ, ಸ್ಕೂಟರ್‌ಗಳು ಹಾಗೂ ಮೋಟಾರುಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ , ತನ್ನ ದಾರ್ಶನಿಕ ಸ್ಥಾಪಕ ಚೇರ್ಮನ್ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರಿಗೆ ನಮನ ಸಲ್ಲಿಸುತ್ತಿದೆ.