ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಹೋಟೆಲ್ ಊಟ-ತಿಂಡಿ ಬೆಲೆ ಏರಿಸುವ ಕುರಿತು ಚರ್ಚೆ ನಡೆಯಲಿದೆ. ಪ್ರತಿ ತಿಂಡಿ ಬೆಲೆಯಲ್ಲಿ 5 ರಿಂದ 10 ರೂ. ಹೆಚ್ಚಳ ವಾಗುವ ಸಾಧ್ಯತೆ ಇದೆ. ಉತ್ತರ ಭಾರತದ ತಿಂಡಿಗಳ ಬೆಲೆ 10 ರೂ. ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನು ಸಿಲಿಂಡರ್ ಬೆಲೆ ಹೆಚ್ಚಳದ ಜೊತೆಗೆ ಹಾಲು – ತುಪ್ಪ, ಮೈದಾ ಸೇರಿ ಇತರೆ ಅಡುಗೆ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಸರಕು ಸಾಕಾಣೆ ಹಾಗೂ ಕಟ್ಟಡಗಳ ಬಾಡಿಗೆ ಹೆಚ್ಚಾಗಿದೆ. ಹಾಲು, ಮೊಸರು ಹಾಗೂ ತುಪ್ಪದ ಕೊರತೆಯಿಂದಾಗಿ ಸಿಹಿ ಪದಾರ್ಥಗಳನ್ನ ಮಾಡುವುದನ್ನೆ ಕಡಿಮೆ ಮಾಡಲಾಗಿದೆ. ಇವೆಲ್ಲವನ್ನ ಗಮನದಲ್ಲಿಟ್ಟು ಕೊಂಡು ಇಂದು ಸಭೆ ನಡೆಯುತ್ತಿದ್ದು, ಗ್ರಾಹಕರಿಗೆ ಇಂದಿನಿಂದ ಮತ್ತೊಂದು ಶಾಕ್ ಎದುರಾಗಲಿದೆ.
ನಿರಂತರವಾಗಿ ಸಿಲಿಂಡರ್ ದರ ಹೆಚ್ಚಳದಿಂದ ಹೋಟೆಲ್ ಊಟ-ತಿಂಡಿಗಳ ಮೇಲೆ ದರ ಹೆಚ್ಚಿಸುವ ಬಗ್ಗೆ ಸಭೆ ಕರೆದಿದ್ದೇವೆ. ಸಭೆಯಲ್ಲಿ ಎಲ್ಲ ಹೋಟೆಲ್ ಗಳ ಮಾಲೀಕರು ಸೇರಿ ದರ ಏರಿಸಬೇಕೋ ಅಥವಾ ಬೇಡವೋ ಎಂಬು ದರ ಬಗ್ಗೆ ನಿರ್ಧಾರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಎಲ್ಪಿಜಿ ದರ 50 ರೂ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ 1,105 ರೂಪಾಯಿಗೆ ಏರಿಕೆ ಆಗಿದೆ. ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ಗೆ 350 ರೂಪಾಯಿ ಏರಿಕೆ ಮಾಡಲಾಗಿದೆ.