ಬೆಂಗಳೂರು: ಭಾರತೀಯ ಪ್ರಮುಖ ಮತ್ತು ದೊಡ್ಡ ಆ್ಯಪಲ್ ಚಿಲ್ಲರೆ ಮಾರಾಟಗಾರ ಇಮ್ಯಾಜೀನ್ ಸಂಸ್ಥೆ ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್‌ನಲ್ಲಿ ಅದ್ಧೂರಿಯ ವಿನೂತನ ಹೊಸ ಮಳಿಗೆಯನ್ನು ಅರಂಭಿಸುತ್ತಿದೆ.
ಸುಮಾರು 2500 ಚದರ ಅಡಿಯ ಈ ಅದ್ಧೂರಿ ಮಳಿಗೆಯಲ್ಲಿ ಆ್ಯಪಲ್ ಉತ್ಪನ್ನಗಳ ಸಂಪೂರ್ಣ ಶ್ರೇಣಿ ಮತ್ತು ಪ್ರದರ್ಶನದಲ್ಲಿರುವ ಬಿಡಿಭಾಗಗಳ ಬೃಹತ್ ಶ್ರೇಣಿಯ ಜೊತೆಗೆ ಅಂಗಡಿಯಲ್ಲಿನ ದುರಸ್ತಿ ಯಂತಹ ಸೇವೆಗಳನ್ನು ಒದಗಿಸಲಿದೆ. ವಿಪರ್ಯಾಸವೆಂದರೆ, 2004 ರಲ್ಲಿ ಆಪಲ್ ಉತ್ಪನ್ನಗಳಿಗಾಗಿ ಭಾರತದ ಮೊದಲ ವಿಶೇಷ ಪ್ರೀಮಿಯಂ ಮರುಮಾರಾಟಗಾರರ ಅಂಗಡಿಯನ್ನು ಇಮ್ಯಾಜೀನ್ ಇದೇ ಸ್ಥಳದಲ್ಲಿ ತೆರೆದಿತ್ತು.
ಈ ಬಿಡುಗಡೆಯನ್ನು ಸಂಭ್ರಮಿಸಲು, ಇಮ್ಯಾಜೀನ್ ಐಫೋನ್ 14 ಮೇಲೆ ಫ್ಲ್ಯಾಟ್ 20% ಮತ್ತು ಮ್ಯಾಕ್‌ಬುಕ್ ಏರ್ ಎಂ2 ಮೇಲೆ ಫ್ಲ್ಯಾಟ್ 15% ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ಇದು ಜೂನ್ 2 ರಿಂದ 4 ರವರೆಗೆ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಇದಲ್ಲದೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಡೊಳ್ಳು ಕುಣಿತ ಪ್ರದರ್ಶನ, ಟೆಕ್ ಗುರು ರಾಜೀವ್ ಮಖ್ನಿ ಅವರೊಂದಿಗಿನ ಸಂವಾದ, ಅಬೀಶ್ ಮ್ಯಾಥ್ಯೂ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಆಕ್ಟ್, ಆಕರ್ಷಕ ಸ್ಪರ್ಧೆಗಳು, ವಾಕ್ಸ್‌ಪಾಪ್ ಚಟುವಟಿಕೆಗಳು, ಹಲವು ಕೊಡುಗೆಗಳು ಮತ್ತು ಅತ್ಯಾಕರ್ಷಕ ಚಟುವಟಿಕೆಗಳನ್ನು ಸಹ ಎದುರು ನೋಡಬಹುದು.
ಅ್ಯಂಪಲ್‌ನ (ಇಮ್ಯಾಜಿನ್‌ನ ಮೂಲ ಕಂಪನಿ) ಸಂಸ್ಥಾಪಕ ಮತ್ತು ಸಿಇಒ ಶ್ರೀ ರಾಜೇಶ್ ನಾರಂಗ್ ಅವರು ತಮ್ಮ ಹೃತ್ಪೂರ್ವಕ ಭಾವನೆಗಳನ್ನು ವ್ಯಕ್ತಪಡಿಸುತ್ತಾ, “ನಾವು ಗ್ರಾಹಕರಿಗೆ ನಗುಮೊಗದಿಂದ ಸೇವೆ ಸಲ್ಲಿಸುವ ಪ್ರಯತ್ನ ಮಾಡುತ್ತಾ ಮತ್ತು ಅವರಿಗೆ ಹೆಚ್ಚು ಉತ್ತಮವಾಗಿ ಬದುಕಲು ಸಹಾಯ ಮಾಡಲು, ಸರಿಯಾದ ಆ್ಯಪಲ್ ಉತ್ಪನ್ನ ಗಳನ್ನು ಆಯ್ಕೆ ಮಾಡಲು ಅವರಿಗೆ ಸಹಾಯ ಮಾಡುತ್ತೇವೆ.
ಸಂತೃಪ್ತಗೊಂಡ ಗ್ರಾಹಕರ ಸಂತೋಷ ಮತ್ತು ಸಂಭ್ರಮದ ಮುಂದೆ ಬೇರೆ ಯಾವುದೇ ಸಾಟಿಯಿಲ್ಲ. ಈ ಐತಿಹಾಸಿಕ ಸ್ಥಳದಲ್ಲಿನ ನಮ್ಮ ಹೊಸ ಮಳಿಗೆಯು, ನಾವು ಮತ್ತಷ್ಟು ಮುಂದುವರೆದು, ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಮೂಲಕ ಮಂತ್ರಮುಗ್ಧರನ್ನಾಗಿಸಲು ಸಹಾಯ ಮಾಡಲಿದೆ.”