ಸಾಧಕರಿಗೆ ಅಪ್ಪಟ ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು ೧ ಲಕ್ಷ ಅಮೆರಿಕನ್ ಡಾಲರ್ ನಗದು ನೀಡಲಾಯಿತು
ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ ಬ್ರಯಾನ್ ಶ್ಮಿತ್ ಅವರಿಂದ ಪ್ರಶಸ್ತಿ ಪ್ರದಾನ
ಬೆಂಗಳೂರಿನ ಮುಕುಂದ ಥಟ್ಟೈ ಮತ್ತು ಜಾಹ್ನವಿ ಫಾಲ್ಕೆ ಅವರಿಗೆ ಭೌತವಿಜ್ಞಾನ ಹಾಗೂ ಮಾನವಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಇನ್ಫೊಸಿಸ್ ಪ್ರಶಸ್ತಿ ೨೦೨೩ ಪ್ರದಾನ
ಬೆಂಗಳೂರು: ಇನ್ಫೊಸಿಸ್ ಪ್ರಶಸ್ತಿ ೨೦೨೩ಕ್ಕೆ ಆಯ್ಕೆಯಾಗಿರುವ ಸಾಧಕರಿಗೆ ಇನ್ಫೊಸಿಸ್ ಸೈನ್ಸ್ ಫೌಂಡೇಷನ್ ಇಂದು ಪ್ರಶಸ್ತಿ ಪ್ರದಾನ ಮಾಡಿತು. ಪ್ರಶಸ್ತಿ ಪ್ರದಾನ ಕರ‍್ಯಕ್ರಮವು ಬೆಂಗಳೂರಿನಲ್ಲಿ ನಡೆಯಿತು. ಇನ್ಫೊಸಿಸ್ ಪ್ರಶಸ್ತಿಯು ಕಳೆದ ೧೫ ರ‍್ಷಗಳಿಂದ, ಬೇರೆ ಬೇರೆ ಜ್ಞಾನಶಾಖೆಗಳಲ್ಲಿ ಕೆಲಸ ಮಾಡು ತ್ತಿರುವ, ವೃತ್ತಿಯ ಮಧ್ಯಭಾಗದಲ್ಲಿ ಇರುವ ಸಂಶೋಧಕರು ದೇಶದ ವೈಜ್ಞಾನಿಕ ಸಂಶೋಧನೆಗೆ ನೀಡಿರುವ ಕೊಡುಗೆಯನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಆರು ವಿಭಾಗಗಳಲ್ಲಿ ಅಸಾಮಾನ್ಯ ಕೊಡುಗೆ ನೀಡಿದ ಸಂಶೋಧಕರಿಗೆ ಪ್ರಶಸ್ತಿ ನೀಡಲಾಗಿದೆ.
ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವಿಕ, ಜೀವವಿಜ್ಞಾನ, ಗಣಿತಶಾಶ್ತ್ರ, ಭೌತವಿಜ್ಞಾನ ಮತ್ತು ಸಮಾಜವಿಜ್ಞಾನ ಈ ಕ್ಷೇತ್ರಗಳು. ನೊಬೆಲ್ ಪ್ರಶಸ್ತಿ ಪುರಸ್ಕೃತ, ಮಾಜಿ ಕುಲಪತಿ, ಆಸ್ಟ್ರೇಲಿಯನ್ ನ್ಯಾಷನಲ್ ಯೂನಿರ‍್ಸಿಟಿಯ ಡಿಸ್ಟಿಂಗ್ವಿಶ್ಡ್ ಪ್ರೊಫೆಸರ್ ಆಗಿರುವ ಪ್ರೊ. ಬ್ರಯಾನ್ ಶ್ಮಿತ್ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಪ್ರಶಸ್ತಿಯು ಅಪ್ಪಟ ಚಿನ್ನದ ಪದಕ, ಪ್ರಶಂಸಾಪತ್ರ ಮತ್ತು ೧ ಲಕ್ಷ ಅಮೆರಿಕನ್ ಡಾಲರ್ ನಗದನ್ನು ಒಳಗೊಂಡಿದೆ.
ಜಗತ್ತಿನ ಬೇರೆ ಬೇರೆ ಭಾಗಗಳ ವಿಜ್ಞಾನಿಗಳು ಮತ್ತು ಅಕಾಡೆಮಿಕ್ ವಲಯದ ವಿದ್ವಾಂಸರು ಕರ‍್ಯಕ್ರಮದಲ್ಲಿ ಭಾಗಿಯಾಗಿದ್ದರು. ವಾಣಿಜ್ಯೋದ್ಯಮ ಲೋಕದ ಪ್ರಮುಖರು, ಯುವ ಸಂಶೋಧಕರು ಮತ್ತು ವಿದ್ಯರ‍್ಥಿಗಳು ಕೂಡ ಇದರಲ್ಲಿ ಪಾಲ್ಗೊಂಡಿದ್ದರು. ಇನ್ಫೊಸಿಸ್ ಸೈನ್ಸ್ ಫೌಂಡೇಷನ್‌ನ ಟ್ರಸ್ಟಿ ಗಳಾದ ಕ್ರಿಸ್ ಗೋಪಾಲಕೃಷ್ಣನ್ (ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ), ನಾರಾಯಣಮರ‍್ತಿ, ಶ್ರೀನಾಥ್ ಬಾಟ್ನಿ, ಕೆ. ದಿನೇಶ್, ನಂದನ್ ನಿಲೇಕಣಿ, ಮೋಹನ ದಾಸ್ ಪೈ, ಸಲೀಲ್ ಪಾರೇಖ್ ಮತ್ತು ಎಸ್.ಡಿ. ಶಿಬುಲಾಲ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದ್ದರು.
ಕಾರ‍್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಮುಖ್ಯ ಅತಿಥಿ ಪ್ರೊ. ಬ್ರಯಾನ್ ಶ್ಮಿತ್ ಅವರು, “ಈ ರ‍್ಷದ ಇನ್ಫೊಸಿಸ್ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ವಿಶೇಷವಾದುದು. ಜ್ಞಾನದ ಬೆಳವಣಿಗೆಗೆ ಭಾರತೀಯರು ಸಂಶೋಧನೆಗಳ ಮೂಲಕ ನೀಡುತ್ತಿರುವ ಗುರುತರ ಕೊಡುಗೆಯನ್ನು ಎತ್ತಿತೋರಿಸುವ ಕೆಲಸವನ್ನು ಈ ಪ್ರಶಸ್ತಿಯು ಮಾಡುತ್ತಿದೆ. ಅಕಾಡೆಮಿಕ್ ವಲಯದ ವಿಭಿನ್ನ ವಿಭಾಗಗಳಿಗೆ ಸೇರಿರುವ ಪ್ರಶಸ್ತಿ ಪುರಸ್ಕೃತರು ಸಂಶೋಧನೆಯ ಕ್ಷೇತ್ರದಲ್ಲಿ ಹಾಗೂ ಸಂಶೋಧನೆಗಳನ್ನು ಮಾನವ ಕುಲದ ಒಳಿತಿಗೆ ಅನ್ವಯಿಸುವಲ್ಲಿ ಜಾಗತಿಕ ನಾಯಕರಿದ್ದಂತೆ. ಮನುಷ್ಯನ ಹೆಜ್ಜೆಗುರುತುಗಳ ವ್ಯಾಪ್ತಿ ದೊಡ್ಡದಾಗುತ್ತಿದ್ದರೂ ಭೂಮಿಯ ಗಾತ್ರ ಹೆಚ್ಚುತ್ತಿಲ್ಲ. ಇಂತಹ ಸಂರ‍್ಭದಲ್ಲಿ ಸುಸ್ಥಿರವಾದ ಬದುಕು ಕಂಡು ಕೊಳ್ಳಲು, ಶಾಂತಿಯುತವಾಗಿ ಬಾಳ್ವೆ ನಡೆಸಲು ಇಂತಹ ಜ್ಞಾನದ ಅಗತ್ಯ ಇದೆ. ಜ್ಞಾನಲೋಕಕ್ಕೆ ಭಾರತ ನೀಡುತ್ತಿರುವ ಕೊಡುಗೆಯು ಬಹಳ ವೇಗವಾಗಿ ಹೆಚ್ಚುತ್ತಿದೆ. ಈ ಕರ‍್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಗೌರವದ ಸಂಗತಿ” ಎಂದು ಹೇಳಿದ್ದಾರೆ.
ವಿಜ್ಞಾನ ಮತ್ತು ಸಂಶೋಧನೆಯ ಮೇಲೆ ಹೂಡಿಕೆ ಮಾಡಬೇಕಿರುವುದರ ಮಹತ್ವವನ್ನು ಹೇಳಿದ ಇನ್ಫೊಸಿಸ್ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರು, “೧೫ ರ‍್ಷಗಳಷ್ಟು ಹಳೆಯದಾಗಿರುವ ಇನ್ಫೊಸಿಸ್ ಪ್ರಶಸ್ತಿಯು ಪ್ರಮುಖವಾದ ವೈಜ್ಞಾನಿಕ ಸಂಶೋಧನೆಗಳನ್ನು ಗುರುತಿಸುವ ಕೆಲಸವನ್ನು ಮುಂದುವರಿಸಿದೆ. ಮುಂದಿನ ತಲೆಮಾರು ವಿಜ್ಞಾನವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಸ್ಫರ‍್ತಿಯಾಗಿ ನಿಂತಿದೆ. ವೈಜ್ಞಾನಿಕ ಸಂಶೋಧನೆಗಳನ್ನು ಮುಖ್ಯವಾಹಿನಿಯ ರ‍್ಚೆಗಳ ಭಾಗವಾಗಿಸುವುದು ಇಂದಿನ ಅಗತ್ಯ. ದೇಶದ ವೈಜ್ಞಾನಿಕ ವಾತಾವರಣವು ಇನ್ನಷ್ಟು ಬಲಗೊಳ್ಳಬೇಕು ಎಂದಾದರೆ ಸಮನ್ವಯದಿಂದ ಕೆಲಸಗಳು ಆಗಬೇಕು. ಪ್ರಶಸ್ತಿ ಪುರಸ್ಕೃತರ ಸಾಧನೆಗೆ ಅಭಿನಂದನೆಗಳು. ದೇಶದ ಬೆಳವಣಿಗೆಯಲ್ಲಿ ಇವರ ಕರ‍್ಯವು ಮಹತ್ವದ್ದು. ಅವರನ್ನು ಅಭಿನಂದಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ” ಎಂದು ಹೇಳಿದರು.
ಹಿರಿಯ ಅಕಾಡೆಮಿಕ್ ವಿದ್ವಾಂಸರನ್ನು ಒಳಗೊಂಡ ತರ‍್ಪುಗಾರರ ಸಮಿತಿಯು ೨೨೪ ಹೆಸರುಗಳನ್ನು ಪರಿಶೀಲಿಸಿ ಪ್ರಶಸ್ತಿಗೆ ಆರು ಮಂದಿಯನ್ನು ಅಂತಿಮಗೊಳಿಸಿದೆ. ತರ‍್ಪುಗಾರರ ಸಮಿತಿಯಲ್ಲಿ ಇದ್ದವರು: ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗಕ್ಕೆ ಪ್ರೊ. ಅರವಿಂದ್ (ಮೆಸಾಚು ಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ); ಮಾನವಿಕ ವಿಭಾಗಕ್ಕೆ ಪ್ರೊ. ಅಕೀಲ್ ಬಿಲ್ಗ್ರಾಮಿ (ಕೊಲಂಬಿಯಾ ವಿಶ್ವವಿದ್ಯಾಲಯ); ಜೀವ ವಿಜ್ಞಾನ ವಿಭಾಗಕ್ಕೆ ಪ್ರೊ ಮೃಗಾಂಕಾ ಸುರ್ (ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ಗಣೀತಶಾಸ್ತ್ರಕ್ಕೆ ಪ್ರೊ. ಚಂದ್ರಶೇಖರ ಖರೆ (ಲಾಸ್ ಏಂಜಲೀಸ್‌ನ ಕ್ಯಾಲಿಫರ‍್ನಿಯಾ ವಿಶ್ವವಿದ್ಯಾಲಯ); ಭೌತವಿಜ್ಞಾನಕ್ಕೆ ಪ್ರೊ. ಶ್ರೀನಿವಾಸ ಕುಲರ‍್ಣಿ (ಕ್ಯಾಲಿಫರ‍್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ); ಸಮಾಜ ವಿಜ್ಞಾನಕ್ಕೆ ಪ್ರೊ. ಕೌಶಿಕ್ ಬಸು (ರ‍್ನಲ್ ವಿಶ್ವವಿದ್ಯಾಲಯ).
ಆರು ವಿಭಾಗಗಳಲ್ಲಿ ಇನ್ಫೊಸಿಸ್ ಪ್ರಶಸ್ತಿ ೨೦೨೩ಕ್ಕೆ ಪಾತ್ರರಾದವರು:
ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ಐಐಟಿ–ಕಾನ್ಪುರದ ಸುಸ್ಥಿರ ಇಂಧನ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸಚ್ಚಿದಾನಂದ ತ್ರಿಪಾಠಿ
ಅವರಿಗೆ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದ ಇನ್ಫೊಸಿಸ್ ಪ್ರಶಸ್ತಿ ೨೦೨೩ ಘೋಷಿಸಲಾಗಿದೆ. ಸೆನ್ಸಾರ್ ಆಧಾರಿತ ವಾಯು ಗುಣಮಟ್ಟ ಜಾಲವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಘೋಷಿಸಲಾಗುತ್ತಿದೆ. ವಾಯು ಗುಣಮಟ್ಟವನ್ನು ಪರಿಣಾಮ ಕಾರಿಯಾಗಿ ನರ‍್ವಹಿಸುವ ಉದ್ದೇಶದಿಂದ ಮಾಲಿನ್ಯವನ್ನು ಬಹಳ ಸ್ಥಳೀಯ ಮಟ್ಟದಲ್ಲಿ ಅಳತೆ ಮಾಡುವುದು, ದತ್ತಾಂಶ ರೂಪಿಸುವುದು ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಮೆಷಿನ್ ರ‍್ನಿಂಗ್ ಸೌಲಭ್ಯ ಬಳಸಿಕೊಂಡು ವಿಶ್ಲೇಷಣೆ ನಡೆಸುವುದಕ್ಕೆ ಅವರ ಕೊಡುಗೆಗಳು ಈ ವಿಭಾಗದಲ್ಲಿ ಪ್ರಶಸ್ತಿ ಘೋಷಿಸು ತ್ತಿರುವುದಕ್ಕೆ ಕಾರಣಗಳು. ಚಳಿಗಾಲದಲ್ಲಿ ದೆಹಲಿಯಲ್ಲಿ ಸೃಷ್ಟಿಯಾಗುವ ಮುಸುಕಿನ ವಾತಾವರಣವು ದೆಹಲಿಯಲ್ಲಿ ಹಾಗೂ ಬೇರೆ ನಗರಗಳಲ್ಲಿ ಭಿನ್ನವಾಗಿರುತ್ತವೆ ಎಂಬುದನ್ನು ಕಂಡುಕೊಳ್ಳುವಲ್ಲಿ ತ್ರಿಪಾಠಿ ಅವರ ಕೊಡುಗೆ ಮಹತ್ವದ್ದಾಗಿದೆ. ಇದು ಭಾರತದಲ್ಲಿ ವಾಯು ಮಾಲಿನ್ಯ ವನ್ನು ನಿಯಂತ್ರಿಸುವಲ್ಲಿ ಮಹತ್ವದ ಕೊಡುಗೆ ನೀಡಬಲ್ಲದು.
ಮಾನವಿಕ
ಮಾನವಿಕ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ ೨೦೨೩ ಜಾಹ್ನವಿ ಫಾಲ್ಕೆ ಅವರಿಗೆ ಸಂದಿದೆ. ಜಾಹ್ನವಿ ಅವರು ಸೈನ್ಸ್ ಗ್ಯಾಲರಿ ಬೆಂಗಳೂರು ಇದರ ಸಂಸ್ಥಾಪಕ ನರ‍್ದೇಶಕಿ. ಆಧುನಿಕ ಭಾರತದ ವೈಯಕ್ತಿಕ, ಸಾಂಸ್ಥಿಕ ಹಾಗೂ ಭೌತಿಕ ವಸ್ತುಗಳ ವೈಜ್ಞಾನಿಕ ಸಂಶೋಧನೆಗಳ ಇತಿಹಾಸದ ವಿಚಾರವಾಗಿ ಅವರು ನೀಡಿರುವ ಅಸಾಮಾನ್ಯ ಒಳನೋಟಗಳಿಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಾಹ್ನವಿ ಅವರು ಬರೆದಿರುವ ‘ದಿ ಆಟೊಮಿಕ್ ಸ್ಟೇಟ್’ ಪುಸ್ತಕ ಮತ್ತು ವಿವಿಧ ಲೇಖನಗಳು ವಿಜ್ಞಾನ, ಅದರಲ್ಲೂ ಮುಖ್ಯವಾಗಿ ಅಣು ವಿಜ್ಞಾನ, ಮತ್ತು ವಸಾಹತೋತ್ತರ ಕಾಲದ ಮಾನವಶಾಸ್ತ್ರವನ್ನು ಜೊತೆಯಾಗಿ ನೋಡಿ, ಭಾರತದಲ್ಲಿ ವಿಜ್ಞಾನದ ಪ್ರತಿದಿನದ ಜೀವನದ ವಿವಿಧ ಹಂತಗಳ ಇತಿಹಾಸವನ್ನು ಚಿತ್ರಿಸುತ್ತವೆ. ವಿಜ್ಞಾನದ ಇತಿಹಾಸವನ್ನು ಅಧಿಕಾರ, ಆಚರಣೆ ಮತ್ತು ರಾಷ್ಟ್ರ–ಪ್ರಭುತ್ವದ ಇತಿಹಾಸವಾಗಿಯೂ ನೋಡಬೇಕು ಎಂದು ಜಾಹ್ನವಿ ಅವರಬರಹಗಳು ಒತ್ತಿ ಹೇಳಿವೆ.
ಜೀವ ವಿಜ್ಞಾನ
ಜೀವ ವಿಜ್ಞಾನ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ ೨೦೨೩ ಐಐಟಿ–ಕಾನ್ಪುರದ ಬಯೋಎಂಜಿನಿಯರಿಂಗ್ ಮತ್ತು ಜೀವವಿಜ್ಞಾನ ಪ್ರೊಫೆಸರ್ ಅರುಣ್ ಕುಮಾರ್ ಶುಕ್ಲಾ ಅವರಿಗೆ ಸಂದಿದೆ. ಜಿ–ಪ್ರೊಟೀನ್ ಕಪಲ್ಡ್ ರಿಸೆಪ್ಟರ್ (ಜಿಪಿಸಿಆರ್) ಜೀವವಿಜ್ಞಾನಕ್ಕೆ ಅವರು ನೀಡಿರುವ ಅಸಾಮಾನ್ಯ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರೊ. ಶುಕ್ಲಾ ಅವರ ಸಂಶೋಧನೆಯು ಜಿಪಿಸಿಆರ್ ಬಗ್ಗೆ ಹೊಸ ಅರಿವನ್ನುನೀಡಿದೆ. ಹೊಸ ಮತ್ತು ಪರಿಣಾಮಕಾರಿ ಚಿಕಿತ್ಸಾ ಕ್ರಮಗಳನ್ನು ರೂಪಿಸಲು ಇವರ ಸಂಶೋಧನೆಯುನೆರವಾಗಿದೆ.
ಗಣಿತ ವಿಜ್ಞಾನ
ಗಣಿತ ವಿಜ್ಞಾನ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ ೨೦೨೩ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಹಾಗೂ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿಯ ರ‍್ನ್‌ಹಾಲ್ಜ್ ಜಾಯಿಂಟ್ ಪ್ರೊಫೆಸರ್ ಆಗಿರುವ ಭರ‍್ಗವ್ ಭಟ್ ಅವರಿಗೆ ಸಂದಿದೆ. ಪ್ರೊ. ಭಟ್ ಅವರು ರ‍್ಮನಿಯ ಗಣಿತಶಾಸ್ತ್ರಜ್ಞ ಪೀಟರ್ ಶಾಲ್ಜ್ ಅವರ ಜೊತೆ
ಸೇರಿ ಪ್ರಿಸ್ಮ್ಯಾಟಿಕ್ ಕೊಹೊಮಾಲಜಿ ಕ್ಷೇತ್ರದಲ್ಲಿ ನಡೆಸಿರುವ ಕೆಲಸಗಳು ಈ ಕ್ಷೇತ್ರದಲ್ಲಿ ಹೊಸ ಆಲೋಚನೆಗಳು ಮತ್ತು ಪದ್ಧತಿಗಳನ್ನು ರೂಪಿಸಿವೆ.
ಭೌತವಿಜ್ಞಾನ
ಭೌತ ವಿಜ್ಞಾನ ವಿಭಾಗದಲ್ಲಿನ ಇನ್ಫೊಸಿಸ್ ಪ್ರಶಸ್ತಿ ೨೦೨೩ ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್‌ನ ಜೀವರಸಾಯನಶಾಸ್ತ್ರ, ಜೀವಭೌತವಿಜ್ಞಾನ ಮತ್ತು ಬಯೋಇನ್ಫರ‍್ಮೆಟಿಕ್ಸ್ ವಿಭಾಗದ ಪ್ರೊಫೆಸರ್ ಮುಕುಂದ್ ಥಟ್ಟೈ ಅವರಿಗೆ ಸಂದಿದೆ. ವಿಕಾಸಾತ್ಮಕ ಜೀವಕೋಶ ಜೀವವಿಜ್ಞಾನ ದಲ್ಲಿ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಅವರಿಗೆ ಈ ಗೌರವ ಸಲ್ಲಿಸಲಾಗುತ್ತಿದೆ. ಸಂಕರ‍್ಣವಾದ ಜೀವಕೋಶಗಳು ಸೃಷ್ಟಿಯಾಗಿದ್ದು ಹೇಗೆ ಎಂಬ ಕೌತುಕದ ಪ್ರಶ್ನೆಯ ಮೇಲೆ ಪ್ರೊ. ಥಟ್ಟೈ ಅವರಸಂಶೋಧನೆಗಳು ಆಳವಾದ ಪ್ರಭಾವವನ್ನು ಬೀರಬಲ್ಲವು.
ಸಮಾಜ ವಿಜ್ಞಾನ
ಸಮಾಜ ವಿಜ್ಞಾನ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ ೨೦೨೩ ಕೊಲಂಬಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪ್ರೊಫೆಸರ್ ಕರುಣಾ ಮಂತೆನಾ ಅವರಿಗೆ ಸಂದಿದೆ. ಸಾಮ್ರಾಜ್ಯಶಾಹಿ ಸಿದ್ಧಾಂತವು ಆಧುನಿಕ ಸಾಮಾಜಿಕ ಸಿದ್ಧಾಂತದ ಉಗಮದಲ್ಲಿ ಅತ್ಯಂತ ಪ್ರಮುಖವಾದ ಒಂದು ಅಂಶವಾಯಿತು ಎಂಬ ಪ್ರತಿಪಾದನೆಯ ಕುರಿತು ಅವರ ಮಹತ್ವದ ಸಂಶೋಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರೊ. ಕರುಣಾ ಮಂತೆನಾ ಅವರು ಬರೆದಿರುವ ‘ಅಲಿಬಿಸ್ ಆಫ್ ಎಂಪೈರ್’ ಮತ್ತು ಸಂಬಂಧಿತ ಕೆಲವು ಸಂಶೋಧನಾ ಬರಹಗಳು ರಾಜಕೀಯ ಸಿದ್ಧಾಂತದಲ್ಲಿ ಮಹತ್ವದವು. ಇವು ಎಲ್ಲ ಬಗೆಯ ಸಮಾಜ ವಿಜ್ಞಾನಗಳಲ್ಲಿ ಪ್ರಭಾವಬೀರುವಂಥವು. ಇನ್ಫೊಸಿಸ್ ಪ್ರಶಸ್ತಿ ಪುರಸ್ಕೃತರ ಕೆಲಸಗಳ ಬಗ್ಗೆ ಹೆಚ್ಚಿನಮಾಹಿತಿಗೆತಿತಿತಿ.iಟಿಜಿosಥಿsಠಿಡಿize.oಡಿg ವೆಬ್‌ಸೈಟ್‌ಗೆ ಭೇಟಿ ನೀಡಬಹುದು.