2008ರ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಖಾನ್ ಜೆಡಿಎಸ್‌ನಿಂದ ಸ್ಪರ್ಧಿಸಿ, 43,004 ಮತ ಪಡೆದು ಎರಡನೇ ಬಾರಿ ಶಾಸಕ ರಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಕೂಡ ಜೆಡಿಎಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾರೆ. 2018ರ ಚುನಾವಣೆ ಹೊತ್ತಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜೊತೆಗೆ ಮನಸ್ತಾಪ ಮಾಡಿ ಕೊಂಡ ಜಮೀರ್ ಅಹಮದ್, ಜೆಡಿಎಸ್‌ನ 6 ಶಾಸಕರ ಜೊತೆ ಕಾಂಗ್ರೆಸ್‌ಗೆ ಸೇರ್ಪಡೆ ಯಾಗುತ್ತಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ಲಕ್ಷ್ಮಿನಾರಾಯಣ ವಿರುದ್ಧ 33,137 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್‌ಗೆ ಎದುರಾಳಿಯಾಗಿ ಬಿಜೆಪಿ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಕಣಕ್ಕಿಳಿಸಿದೆ. ಜಮೀರ್ ಅಹ್ಮದ್ ಖಾನ್ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಹೊಂದಿದೆ.
ಚಾಮರಾಜಪೇಟೆ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯ ಪ್ರಾಬಲ್ಯ ಹೊಂದಿದೆ. ಇಲ್ಲಿ 80 ಸಾವಿರ ಮುಸ್ಲಿಂ ಮತಗಳಿವೆ. ಉಳಿದತೆ ಎಸ್‌ಎಸ್, ಎಸ್‌ಟಿ ಸಮುದಾಯದ 65 ಸಾವಿರ ಮತದಾರರು ಇದ್ದಾರೆ. ಒಕ್ಕಲಿಗ 10 ಸಾವಿರ, ಕುರುಬರು 9500, ಕ್ರೈಸ್ತರು 12 ಸಾವಿರ, ಬ್ರಾಹ್ಮಣರು 5 ರಿಂದ 8 ಸಾವಿರ, ತಮಿಳು ಭಾಷಿಕರು 26 ಸಾವಿರ, ಇತರರು 35000 ಮತದಾರರು ಇದ್ದಾರೆ.