Thursday, 21st November 2024

ಜೆಡಿಎಸ್‌ನ ಪ್ರತ್ಯೇಕ ‘ಜನತಾ ಪ್ರಣಾಳಿಕೆ 2023’ ಬಿಡುಗಡೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಅಂಗವಾಗಿ ಪ್ರಾದೇಶಿಕ ಪಕ್ಷ ಜಾತ್ಯಾ ತೀತ ಜನತಾದಳ ಪಕ್ಷವು ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾಗಿ ‘ಜನತಾ ಪ್ರಣಾಳಿಕೆ 2023’ ಬಿಡುಗಡೆ ಮಾಡಿದೆ.

ಈ ಮೂಲಕ ನಗರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದಾಗಿ ಪಕ್ಷ ಹೇಳಿಕೊಂಡಿದೆ.

ಶನಿವಾರ ಜೆಡಿಎಸ್ ಜನತಾ ಪ್ರಣಾಳಿಕೆ ಯನ್ನು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಪಕ್ಷ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಬಿಡುಗಡೆ ಮಾಡಿದರು.

ಬೆಂಗಳೂರಿನ ಪ್ರತ್ಯೇಕ ಪ್ರಣಾಳಿಕೆಯಲ್ಲಿ ಮಹತ್ವದ ಅಂಶಗಳನ್ನು ಪಕ್ಷ ನೀಡಿದೆ. ಅದರ ಪ್ರಕಾರ, ‘ಬೆಂಗಳೂರು ಜನರಿಗೆ ಸಾಮಾಜಿ ಭದ್ರತೆ ಹಾಗೂ ಆರೋಗ್ಯ ಭದ್ರತೆ ಒದಗಿಸುವುದು, ಆಧುನಿಕ ಶಿಕ್ಷಣ ಪದ್ಧತಿಗೆ ಒತ್ತು, ಜರನ ಆರೋಗ್ಯ ಸಂಪತ್ತನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಮಹಾನಗರ ಪಾಲಿಕೆ ಆಡಳಿತದಲ್ಲಿ ಸುಧಾರಣೆ ತರುವ ಜೊತೆಗೆ ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ, ಅಲ್ಲದೇ ಬೆಂಗಳೂರು ಮಹಾನಗರ ಹಸರೀಕರಣ ಮಾಡುವ ಜೊತೆಗೆ ಅರಣ್ಯೀಕರಣಕ್ಕೆ ಪ್ರೋತ್ಸಾಹ ನೀಡುವ ಯೋಜನೆ ಜಾರಿ.

ಬೆಂಗಳೂರು ನಗರದಲ್ಲಿರುವ ಕೆರೆ, ಕಣಿವೆ ಸಂರಕ್ಷಣೆ ಜೊತೆ ಜೊತೆಗೆ ರಾಜಕಾಲುವೆಯ ಪುನಶ್ಚೇತನಕ್ಕೆ ಕ್ರಮ ಕೈಗೊಂಡು ನೆರೆ ನಿಯಂತ್ರಣದಲ್ಲಿಡಲು ಚಿಂತನೆ ಹಾಗೂ ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ ಏತ ನೀರಾವರಿ ಯೋಜನೆಯನ್ನು ಆಧುನೀಕರಣ ಗೊಳಿಸುವುದರ ಬಗ್ಗೆ ಗಮನಹರಿಸುವುದರ ಮೂಲಕ ನಗರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ಎಂದು ಜೆಡಿಎಸ್ ಭವರಸೆ ನೀಡಿದೆ.