Thursday, 19th September 2024

ಇಂದಿನಿಂದ ನಡ್ಡಾ ಮೂರು ದಿನ ರಾಜ್ಯ ಪ್ರವಾಸ

J P Nadda

 

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನ ಎಣಿಕೆ ಪ್ರಾರಂಭವಾಗಿದ್ದು, ಅಖಾಡದ ಕಾವು ದಿನದಿಂದ ಹೆಚ್ಚುತ್ತಿದೆ.

ಅದರಂತೆ ಜೆಪಿ ನಡ್ಡಾ ಇಂದಿನಿಂದ (ಫೆ.19-21) ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಕಾರ್ಯಕ್ರಮ ವೇಳಾಪಟ್ಟಿ ಪ್ರಕಾರ ನಡ್ಡಾ ಉಡುಪಿ ಮತ್ತು ಬೇಲೂರಲ್ಲಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ನಂತರ ಮಂಗಳೂರಿನ ಕಾರ್ಯಕ್ರಮ ವೊಂದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಚಿಕ್ಕಮಗಳೂರಿನಲ್ಲಿ ನಡೆಯುವ ಬೈಕ್​ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.

ಈ ವೇಳೆ ನಡ್ಡಾ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ರಾತ್ರಿ ತಂಗಲಿದ್ದಾರೆ. ಹಿಂದೂ ಪವಿತ್ರ ಸ್ಥಳ ಶೃಂಗೇರಿ ಶಾರದಾ ಮಠವು ನಾಲ್ಕು ಪ್ರಮುಖ ಪೀಠಗಳಲ್ಲಿ ಒಂದು. ಇದನ್ನು ಅದ್ವೈತ ವೇದಾಂತದ ಪ್ರತಿಪಾದಕರಾದ ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ. ಈ ಹಿಂದೆ ಶಾರದಾ ಮಠದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿರ ಬ್ರಾಹ್ಮಣ ಸಮಾಜದ ಮೇಲೆ ಆರೋಪ ಮಾಡಿದ್ದರು.

ಬಳಿಕ ನಡ್ಡಾ ಹಾಸನದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕರ್ತ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ.

ಬಿಜೆಪಿ ಪಾಲಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿ ಭದ್ರಕೋಟೆಯಾಗಿದ್ದು, ಅತಿ ದೊಡ್ಡ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಸವಾಲಿನ ಕೆಲಸವಾಗಿದೆ.