Thursday, 12th December 2024

ವಿನಾಕಾರಣ ಹೈಕೋರ್ಟ್‌ ಕೋರ್ಟ್‌ ಹಾಲ್‌ ಪ್ರವೇಶಿಸಿದರೆ ಜೈಲಿಗೆ….!

ಬೆಂಗಳೂರು: ಸಂಬಂಧವಿಲ್ಲದ ವ್ಯಕ್ತಿಗಳು ವಿನಾಕಾರಣ ಹೈಕೋರ್ಟ್‌ ಕೋರ್ಟ್‌ ಹಾಲ್‌ ಪ್ರವೇಶಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ.

ಹೀಗೊಂದು ಮೌಖಿಕ ಎಚ್ಚರಿಕೆ ನೀಡಿರುವ ಕೋರ್ಟ್‌, ವಿಚಾರಣೆಗೆ ಸಂಬಂಧವಿಲ್ಲದೆ ಅನಗತ್ಯ ವಾಗಿ ಕೋರ್ಟ್ ಹಾಲ್‌ಗಳಲ್ಲಿ ಕಾಣಿಸಿಕೊಂಡರೆ ಅಂತಹವರನ್ನು ಬಂಧಿಸಿ ನೇರವಾಗಿ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದೆ.

ಸಚಿವ ಮುನಿರತ್ನ ವಿರುದ್ಧ ವಿಧಾನಪರಿಷತ್‌ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯ ವಿಚಾರಣೆ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ಈ ಎಚ್ಚರಿಕೆ ನೀಡಿದೆ.

‘ವಕೀಲರು, ಕಾನೂನು ವಿದ್ಯಾರ್ಥಿಗಳು, ಕೇಸಿಗೆ ಸಂಬಂಧಿಸಿದ ಕಕ್ಷಿದಾರರು, ಅಧಿಕಾರಿಗಳು ಹಾಗೂ ಸಕಾರಣ ಹೊಂದಿದ ವ್ಯಕ್ತಿಗಳಿಗೆ ಮಾತ್ರವೇ ಕೋರ್ಟ್‌ ಹಾಲ್‌ ಪ್ರವೇಶ ಇರುತ್ತದೆ’ ಎಂದರು.

ಕೋರ್ಟ್‌ ಹಾಲ್‌ನಲ್ಲಿ ಸಂಬಂಧವಿಲ್ಲದ ಅನೇಕ ಮುಖಗಳು ಕಾಣುತ್ತಿವೆ. ಇದು ವೈ ಕೆಟಗರಿಯ ಭದ್ರತೆ ಹೊಂದಿರುವ ಕೋರ್ಟ್ ಹಾಲ್‌. ಕಲಾಪದಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳು ಏಕೆ ಹಾಜರಿದ್ದಾರೆ’ ಎಂದು ಪ್ರಶ್ನಿಸಿತು.

ಅಲ್ಲದೆ ಸಂಬಂಧವಿಲ್ಲದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುವಂತೆ ಕೋರ್ಟ್‌ ಅಧಿಕಾರಿಗೆ ಸೂಚಿಸಿತು.