ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್ ಮತ್ತು ಶಿವಶಂಕರೇಗೌಡ ಅವರ ಪೀಠವು ಜನವರಿ 16 ರಂದು ಈ ತೀರ್ಪು ನೀಡಿತು. ಗ್ರಾಹಕರು ತಮ್ಮ ಉದ್ಯೋಗಿಗಳಿಗೆ ಅಥವಾ ಗ್ರಾಹಕರಿಗೆ ಗಿಫ್ಟ್ ವೋಚರ್ಅಥವಾ ಕ್ಯಾಶ್ಬ್ಯಾಕ್ ಅನ್ನು ಪ್ರೋತ್ಸಾಹಕವಾಗಿ ನೀಡುತ್ತಾರೆ ಹಾಗಾಗಿ ಅದನ್ನು ಜಿಎಸ್ಟಿ ವ್ಯಾಪ್ತಿಗೆ ತರಬಾರದು ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರು, ಮೌಲ್ಯಮಾಪಕರು, M/s ಪ್ರೀಮಿಯರ್ ಸೇಲ್ಸ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್, ಗಿಫ್ಟ್ ವೋಚರ್ಗಳು, ಕ್ಯಾಶ್ ಬ್ಯಾಕ್ ವೋಚರ್ಗಳು ಮತ್ತು ಇ-ವೋಚರ್ಗಳನ್ನು ಒಳಗೊಂಡಂತೆ ಪ್ರಿ-ಪೇಯ್ಡ್ ಪೇ ಮೆಂಟ್ ಇನ್ಸ್ಟ್ರುಮೆಂಟ್ಗಳನ್ನು ವಿತರಕರುಗಳಿಂದ ಪಡೆದುಕೊಳ್ಳುತ್ತಾರೆ ಮತ್ತು ಅವು ಗಳನ್ನು ಗ್ರಾಹಕರಿಗೆ ಪೂರೈಸುತ್ತಾರೆ.
ಗ್ರಾಹಕರು ತಮ್ಮ ಉದ್ಯೋಗಿಗಳಿಗೆ ಪ್ರೋತ್ಸಾಹದ ರೂಪದಲ್ಲಿ ಅಥವಾ ಪ್ರಚಾರದ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಈ ಗಿಫ್ಟ್ ಕೂಪನ್ಗಳನ್ನು ನೀಡಲಾಗುತ್ತದೆ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಪ್ರಾಮು ಖ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕೆಲವೊಂದು ಮಳಿಗೆಗಳಲ್ಲಿ ಇಂತಿಷ್ಟು ಮೌಲ್ಯದ ವಸ್ತುಗಳನ್ನು ಕೊಂಡರೆ ಒಂದಷ್ಟು ಹಣವನ್ನು ಕ್ಯಾಶ್ಬ್ಯಾಕ್ ರೂಪದಲ್ಲಿ ನೀಡಲಾಗುತ್ತದೆ. ಕೆಲವೊಂದು ಮಳಿಗೆಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ವಸ್ತುಗಳನ್ನು ಕೊಂಡರೆ ಕ್ಯಾಶ್ಬ್ಯಾಕ್ ಸಿಗುತ್ತದೆ.
ಇನ್ನೂ ಕೆಲವು ಕಡೆ ಇಂತಿಷ್ಟು ದಿನದೊಳಗೆ ಆ ವಸ್ತುಗಳನ್ನು ಖರೀದಿಸಿದರೆ ಇಂತಿಷ್ಟು ಹಣವನ್ನು ಹಿಂದಿರುಗಿಸಲಾಗುವುದು ಎಂದು ಫಲಕ ಅಳವಡಿಸಿ ರುತ್ತಾರೆ. ಇನ್ನೂ ಕೆಲವು ಕಡೆ ಗಿಫ್ಟ್ ವೋಚರ್ಗಳನ್ನು ನೀಡಿ ಯಾವುದೋ ಅವಧಿಯೊಳಗೆ ಖರೀದಿಸಬೇಕು ಎಂದು ಗಡುವು ನೀಡಿರುತ್ತಾರೆ.