Sunday, 15th December 2024

ಕ್ಯಾಶ್​ಬ್ಯಾಕ್, ಗಿಫ್ಟ್​ ವೋಚರ್​ಗಳು ಜಿಎಸ್​ಟಿ ವ್ಯಾಪ್ತಿಗೆ ಸೇರುವುದಿಲ್ಲ

ಬೆಂಗಳೂರು: ಕ್ಯಾಶ್​ಬ್ಯಾಕ್ ಹಾಗೂ ಗಿಫ್ಟ್​ ವೋಚರ್​ಗಳು ಸರಕು ಮತ್ತು ಸೇವೆಗಳಡಿಯಲ್ಲಿ ಬರುವುದಿಲ್ಲ. ಹೀಗಾಗಿ ಇವುಗಳು ಜಿಎಸ್​ಟಿ (GST)ವ್ಯಾಪ್ತಿಗೆ ಸೇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಹೇಳಿದೆ

ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್ ಮತ್ತು ಶಿವಶಂಕರೇಗೌಡ ಅವರ ಪೀಠವು ಜನವರಿ 16 ರಂದು ಈ ತೀರ್ಪು ನೀಡಿತು. ಗ್ರಾಹಕರು ತಮ್ಮ ಉದ್ಯೋಗಿಗಳಿಗೆ ಅಥವಾ ಗ್ರಾಹಕರಿಗೆ ಗಿಫ್ಟ್​ ವೋಚರ್​ಅಥವಾ ಕ್ಯಾಶ್​ಬ್ಯಾಕ್​ ಅನ್ನು ಪ್ರೋತ್ಸಾಹಕವಾಗಿ ನೀಡುತ್ತಾರೆ ಹಾಗಾಗಿ ಅದನ್ನು ಜಿಎಸ್​ಟಿ ವ್ಯಾಪ್ತಿಗೆ ತರಬಾರದು ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರರು, ಮೌಲ್ಯಮಾಪಕರು, M/s ಪ್ರೀಮಿಯರ್ ಸೇಲ್ಸ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್, ಗಿಫ್ಟ್ ವೋಚರ್‌ಗಳು, ಕ್ಯಾಶ್ ಬ್ಯಾಕ್ ವೋಚರ್‌ಗಳು ಮತ್ತು ಇ-ವೋಚರ್‌ಗಳನ್ನು ಒಳಗೊಂಡಂತೆ ಪ್ರಿ-ಪೇಯ್ಡ್​ ಪೇ ಮೆಂಟ್ ಇನ್​ಸ್ಟ್ರುಮೆಂಟ್​ಗಳನ್ನು ವಿತರಕರುಗಳಿಂದ ಪಡೆದುಕೊಳ್ಳುತ್ತಾರೆ ಮತ್ತು ಅವು ಗಳನ್ನು ಗ್ರಾಹಕರಿಗೆ ಪೂರೈಸುತ್ತಾರೆ.

ಗ್ರಾಹಕರು ತಮ್ಮ ಉದ್ಯೋಗಿಗಳಿಗೆ ಪ್ರೋತ್ಸಾಹದ ರೂಪದಲ್ಲಿ ಅಥವಾ ಪ್ರಚಾರದ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಈ ಗಿಫ್ಟ್​ ಕೂಪನ್​ಗಳನ್ನು ನೀಡಲಾಗುತ್ತದೆ. ಡೆಬಿಟ್ ಹಾಗೂ ಕ್ರೆಡಿಟ್​ ಕಾರ್ಡ್​ಗಳ ಪ್ರಾಮು ಖ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕೆಲವೊಂದು ಮಳಿಗೆಗಳಲ್ಲಿ ಇಂತಿಷ್ಟು ಮೌಲ್ಯದ ವಸ್ತುಗಳನ್ನು ಕೊಂಡರೆ ಒಂದಷ್ಟು ಹಣವನ್ನು ಕ್ಯಾಶ್​ಬ್ಯಾಕ್​ ರೂಪದಲ್ಲಿ ನೀಡಲಾಗುತ್ತದೆ. ಕೆಲವೊಂದು ಮಳಿಗೆಗಳಲ್ಲಿ ಕ್ರೆಡಿಟ್ ಕಾರ್ಡ್​ ಬಳಕೆ ಮಾಡಿ ವಸ್ತುಗಳನ್ನು ಕೊಂಡರೆ ಕ್ಯಾಶ್​ಬ್ಯಾಕ್ ಸಿಗುತ್ತದೆ.

ಇನ್ನೂ ಕೆಲವು ಕಡೆ ಇಂತಿಷ್ಟು ದಿನದೊಳಗೆ ಆ ವಸ್ತುಗಳನ್ನು ಖರೀದಿಸಿದರೆ ಇಂತಿಷ್ಟು ಹಣವನ್ನು ಹಿಂದಿರುಗಿಸಲಾಗುವುದು ಎಂದು ಫಲಕ ಅಳವಡಿಸಿ ರುತ್ತಾರೆ. ಇನ್ನೂ ಕೆಲವು ಕಡೆ ಗಿಫ್ಟ್​ ವೋಚರ್​ಗಳನ್ನು ನೀಡಿ ಯಾವುದೋ ಅವಧಿಯೊಳಗೆ ಖರೀದಿಸಬೇಕು ಎಂದು ಗಡುವು ನೀಡಿರುತ್ತಾರೆ.