Thursday, 12th December 2024

ಇಂದಿನಿಂದ ಮದ್ಯದ ದರ ದುಬಾರಿ

ಬೆಂಗಳೂರು: ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಇಂದಿನಿಂದಲೇ ಮದ್ಯದ ದರ ದುಬಾರಿ ಯಾಗಲಿದೆ.

2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಇಂದಿನಿಂದ ಜಾರಿಯಾಗಲಿದೆ.

ಶೇ.20ರಷ್ಟು ಹೆಚ್ಚಿನ ಹಿನ್ನೆಲೆಯಲ್ಲಿ ಗರಿಷ್ಟ ದರದೊ೦ದಿಗೆ ಹೊಸ ಬೆಲೆಯಲ್ಲಿ ಶುಕ್ರವಾರ ರದಿಂದ ಮದ್ಯ ಮಾರಾಟವಾಗ ಲಿದೆ. ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಂತೆ ಮದ್ಯದ ಅಧಿಕಾರಿ ಸುಂಕವನ್ನು ಹೆಚ್ಚಿಸಲಾಗಿದೆ.

ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲಾ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇಕಡ 20ರಷ್ಟು ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 10ರಷ್ಟು ಹೆಚ್ಚಳ ಮಾಡಲಿದ್ದು, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.175 ರಿಂದ ಶೇ.185 ರಷ್ಟು ಹೆಚ್ಚಳವಾಗಲಿದೆ.ಭಾರತೀಯ ಮದ್ಯ 60 ಎಂಎಲ್ ಒಂದು ಪೆಗ್ ಗೆ 10 ರಿಂದ 20 ರೂಪಾಯಿ ಹೆಚ್ಚಳ ಆಗಲಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ 10 % ಹೆಚ್ಚಳವಾಗಲಿದೆ.

ಬಟ್ ವೈಸರ್ 240 ಕ್ಕೆ ಏರಿಕೆ, ಕಿಂಗ್ ಫಿಷರ್ ಪ್ರಿಮಿಯನ್ 190 ಕ್ಕೆ ಏರಿಕೆ. ಬ್ಯಾಕ್ ಪೇಪರ್ ವಿಸ್ಕಿ 120 ಕ್ಕೆ ಏರಿಕೆ, ಬ್ಲಾಕ್ ಆಯಂಡ್ ವೈಟ್ 2,800 ಕ್ಕೆ ಏರಿಕೆಯಾಗಲಿದೆ. ಓಲ್ಡ್ ಮಂಕ್ 155 ರೂಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.