ಆಗಸ್ಟ್ 2ರಂದು ನಡೆಯುವ ‘ಬಾಲ ನಟನಾಗಿ ಪುನೀತ್ ರಾಜಕುಮಾರ್ ಅಭಿನಯದ ನನ್ನಿಷ್ಟಿದ ಚಿತ್ರ’ ಎಂಬ ವಿಷಯದ ಪ್ರಬಂಧ ಸ್ಪರ್ಧೆ 5-7ನೇ ತರಗತಿವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಯಲಿದೆ. 8ರಿಂದ 10ನೇ ತರಗತಿವರೆಗೆ ಅಧ್ಯ ಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ಆಶಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ.
ತೋಟಗಳ ಸ್ಪರ್ಧೆ ಜು.20ರಿಂದ ಅಗಸ್ಟ್ 1ರ ವರೆಗೆ ನಡೆಯಲಿದೆ. ಕುಂಡಗಳಲ್ಲಿ ಬೆಳೆದ ಗಿಡಗಳನ್ನು ಗಾಜಿನ ಮನೆಯ ಒಳಗೆ ಪ್ರದರ್ಶಿಸಲು ಅಗಸ್ಟ್ 3ರೊಳಗೆ ಆಸಕ್ತರು ಹೆಸರು ನೋಂದಣಿ ಮಾಡಿಕೊಳ್ಳಬೇಕು.
ಇಕೆಬಾನ, ತರಕಾರಿ ಕೆತ್ತನೆ, ಇಂಡಿಯನ್ ಫ್ಲೋರಲ್ ಆರ್ಟ್, ಡಚ್ ಮತ್ತು ಒಣ ಹೊವಿನ ಪ್ರದರ್ಶನ, ಜಾನೂರು ಆರ್ಟ್, ರಂಗೋಲಿ ಮತ್ತು ತಾಯ್ ಆರ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಗಸ್ಟ್ 6ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.