Thursday, 12th December 2024

ನಾನು ರಾಜಸ್ಥಾನದಿಂದ ಬಂದವನಾಗಿದ್ದರೆ, ಸೋನಿಯಾ ಇಟಲಿಯಿಂದ ಬಂದವರು: ಲೆಹರ್‌ ಸಿಂಗ್‌ ತಿರುಗೇಟು

ಬೆಂಗಳೂರು: ನಾನು ರಾಜಸ್ಥಾನದಿಂದ ಬಂದವನಾಗಿದ್ದರೆ ನಿಮ್ಮ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಇಟಲಿಯಿಂದ ಬಂದವರು. ಅವರು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ರಾಜ್ಯಸಭೆ ಸದಸ್ಯ ಲೆಹರ್‌ ಸಿಂಗ್‌ ತಿರುಗೇಟು ನೀಡಿದ್ದಾರೆ.

ಕೆಐಎಡಿಬಿ ಭೂ ವ್ಯವಹಾರ ಪ್ರಶ್ನಿಸಿದ್ದಕ್ಕಾಗಿ ಖರ್ಗೆ ಜೂನಿಯರ್‌ ಮತ್ತವರ ಸ್ನೇಹಿತರು ರಾಜಸ್ಥಾನಿ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು ಕೇಳಲು ಬಯಸುತ್ತೇನೆ ಸೋನಿಯಾ ಗಾಂಧಿ ಅವರು ರಾಜಸ್ಥಾನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇಟಲಿಯ ಜುಂಜುನುದಲ್ಲಿ ಜನಿಸಿದವರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸಿಕಾರ್‌ನಲ್ಲಿ ಹಾಗೂ ರಣದೀಪ್‌ ಸಿಂಗ್‌ ಸುರ್ಜೆವಾಲ ಚುರುದಲ್ಲಿ ಜನಿಸಿದವರು. ಅವರು ಯಾವ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ರಾಜಸ್ಥಾನಿಯಾಗಿರುವುದು ಅಪರಾಧವೇ? ರಾಜಸ್ಥಾನವು ಪಾಕಿಸ್ತಾನದಲ್ಲಿಲ್ಲ ಎಂದು ಈ ಫೆಲೋಗಳಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಅಂದಹಾಗೆ, ನೆಹರೂ ಕುಟುಂಬ ಉತ್ತರ ಪ್ರದೇಶದಿಂದ ಬಂದಿದೆಯೇ ಅಥವಾ ಕಾಶ್ಮೀರದಿಂದ ಬಂದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ನಾನು 59 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿದ್ದೇನೆ ಮತ್ತು ಕೆಲಸ ಮಾಡಿದ್ದೇನೆ. ನಾನು ಕನ್ನಡ ಮಾತನಾಡುತ್ತೇನೆ, ಓದುತ್ತೇನೆ ಮತ್ತು ಬರೆಯು ತ್ತೇನೆ. ನಾನು ಕರ್ನಾಟಕ ಬಿಜೆಪಿಯ ಖಜಾಂಚಿಯಾಗಿದ್ದೆ ಮತ್ತು ನಾನು ನನ್ನ ಪಕ್ಷದ ಎಂಎಲ್ಸಿ ಮತ್ತು ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ.

ರಾಹುಲ್‌ ಗಾಂಧಿ ಅಥವಾ ಖರ್ಗೆ ಜೂನಿಯರ್‌.. ನಾನು ಯಾರೂ ಅಲ್ಲ ಎಂದು ಹೆಮೆಪಡುತ್ತೇನೆ. ಅದೇ ನಿಜವಾದ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್‌‍ ಪಕ್ಷ ಸಮರ್ಥಿಸಿಕೊಳ್ಳುವಂತೆ ನಟಿಸುತ್ತಿದೆ ಎಂದು ಕಿಡಿಕಾರಿದ್ದಾರೆ.