ಕಬ್ಬನ್ ಪಾರ್ಕ್ ಟ್ರಾಫಿಕ್ ಪೋಲಿಸರು, ಕಾರನ್ನು ತಡೆ ಹಾಕಿ ಮಾಹಿತಿ ಪಡೆದುಕೊಳ್ಳುವುದಕ್ಕೆ ಮುಂದಾಗಿದೆ. ಇದೇ ವೇಳೆ ಕಾರಿನಲ್ಲಿದ್ದ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಪೋಲಿಸರಿಗೆ ಅವಾಜ್ ಹಾಕಿ, ನಾನು ಯಾರು ಗೊತ್ತಾ? ನಮ್ಮ ಅಪ್ಪ ಎಂ ಎಲ್ ಎ ಅರವಿಂದ ಲಂಬಾವಳಿ ಎಂದು ದಾಂಧಲೆ ನಡೆಸಿದ್ದಾಳೆ ಎನ್ನಲಾಗಿದೆ.
ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸರು ಬೈಸಿಕೊಂಡರು ಕೂಡ ಸುಮ್ಮನೆ ಆಗಿರುವುದು ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡಲಾ ಗುತ್ತಿದೆ. ಪೋಲಿಸರ ಈ ಕೆಲಸದ ಬಗ್ಗೆ ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದು, ಜನರಿಗೆ ಒಂದು ನ್ಯಾಯ, ರಾಜಕಾರಣಿಗಳ ಮಕ್ಕಳಿಗೆ ಒಂದು ನ್ಯಾಯ ಅಂತ ಬೆಂಗಳೂರು ಪೊಲೀಸ್ ಆಯುಕ್ತರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನೂ ಶಾಸಕರ ಪುತ್ರಿ ವಿರುದ್ದ ಪೋಲಿಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಪೋಲಿಸರ ಕೆಲಸಕ್ಕೆ ಅಡ್ಡಿ ಮಾಡಿದ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದು, ಪ್ರಕರಣ ಸಂಬಂಧ ಶಾಸಕಿಯ ಪುತ್ರಿಯನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.