Tuesday, 10th September 2024

ಲುಲು ಮಾಲ್ ಫಂಚುರಾದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್‌

ಬೆಂಗಳೂರು: ಲುಲು ಮಾಲ್ ಫಂಚುರಾದಲ್ಲಿ ವೃದ್ಧ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದರು ಎನ್ನಲಾಗಿದ್ದು ವಿಡಿಯೋ ವೈರಲ್‌ ಆಗಿದೆ.

ಹಳೇ ಮೈಸೂರು ರಸ್ತೆಯ ಗೋಪಾಲಪುರ ಪ್ರದೇಶದ ಲುಲು ಮಾಲ್ ಫಂಟುರಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಘಟನೆಯ ವೇಳೆ ಮಾಲ್‌ನಲ್ಲಿದ್ದ ಯಶವಂತ ತೊಗಟವೀರ ಎಂಬ ವ್ಯಕ್ತಿ ತನ್ನ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೃದ್ಧನ ವಿರುದ್ಧ ಪೊಲೀಸ್ ಕ್ರಮ ಜರುಗಿಸುವಂತೆ ಕೋರಿದ್ದಾರೆ.

ಮಾಲ್‌ನ ಗೇಮಿಂಗ್ ಝೋನ್‌ನಲ್ಲಿ ವಯಸ್ಸಾದ ವ್ಯಕ್ತಿ ಮಹಿಳೆಯ ಹಿಂಭಾಗವನ್ನು ಉದ್ದೇಶಪೂರ್ವಕವಾಗಿ ಸ್ಪರ್ಶಿಸುತ್ತಿರುವುದು ಕಂಡುಬಂದಿದೆ.

“ಈ ಘಟನೆ ಬೆಂಗಳೂರಿನ ಲುಲು ಮಾಲ್ ಫಂಚುರಾದಲ್ಲಿ ಕಂಡು ಬಂದಿದೆ. ವೀಡಿಯೋದಲ್ಲಿರುವ ಈ ವ್ಯಕ್ತಿ ಅಲ್ಲಿರುವ ಅಪರಿಚಿತ ಮಹಿಳೆಯರು ಮತ್ತು ಹುಡುಗಿಯರಿಗೆ ಇಂತಹ ಕೆಲಸ ಮಾಡುತ್ತಿದ್ದ. ಮೊದಲಿಗೆ ಅವನು ತುಂಬಾ ಜನನಿಬಿಡ ಪ್ರದೇಶದಲ್ಲಿ ಇದ್ದುದನ್ನು ನಾನು ನೋಡಿದಾಗ ನನಗೆ ಅವನ ಬಗ್ಗೆ ಅನುಮಾನ ಬಂತು. ಆಗ ನಾನು ವೀಡಿಯೊ ರೆಕಾರ್ಡ್ ಮಾಡುತ್ತಾ ಹಿಂಬಾಲಿಸಿದೆ ” ಎಂದು ವೀಡಿಯೊ ಹಂಚಿಕೊಂಡ ವ್ಯಕ್ತಿ ಬರೆದಿದ್ದಾರೆ.

ಘಟನೆಯ ಬಗ್ಗೆ ಯಶವಂತ್ ಮಾಲ್‌ನಲ್ಲಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಆದರೆ ಭದ್ರತಾ ಸಿಬ್ಬಂದಿ ಬರುವಷ್ಟರಲ್ಲಿ ವ್ಯಕ್ತಿ ಪರಾರಿ ಯಾಗಿದ್ದನು. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ.

ವಿಡಿಯೋ ವೈರಲ್ ಆದ ನಂತರ ಮಾಗಡಿ ರಸ್ತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *