ಬ್ಯಾಟರಾಯನಪುರ : ಸಿಮೆಂಟ್ ಉದ್ಯಮದಲ್ಲಿ ದಕ್ಷಿಣ ಭಾರತದಲ್ಲಿ ಹೆಸರು ಗಳಿಸಿರುವ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಹೊರ ತಂದಿರುವ ಮಹಾ ಎಚ್.ಡಿ.+ಒಪಿಸಿ 53 ಮತ್ತು ಮಹಾ ಎಚ್.ಡಿ.+ಪಿಪಿಸಿ ಹೊಸ ಸಿಮೆಂಟ್ ಉತ್ಪನ್ನಗಳನ್ನು ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಸಾಂಬ ಶಿವರಾವ್ ನಗರದ ನಾಗವಾರದ ಖಾಸಗಿ ಹೋಟೆಲ್ ನಲ್ಲಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ಐಎಸ್ಒ 9001-2015 ಪ್ರಮಾಣೀಕೃತ ದಕ್ಷಿಣ ಭಾರತದ ದೊಡ್ಡ ಸಿಮೆಂಟ್ ಕಂಪನಿಗಳಲ್ಲಿ ಮೈ ಹೋಮ್ ಇಂಡಸ್ಟ್ರೀಸ್ ಒಂದಾಗಿದ್ದು, ಕಂಪನಿಯ ಒಟ್ಟು ಸಾಮರ್ಥ್ಯ 12.5 ಎಂಟಿಪಿಎ ಇದೆ. ನಮ್ಮ ಸಂಸ್ಥೆ ತೆಲಂಗಾಣದ ಸೂರ್ಯಪೇಟ್, ಆಂಧ್ರ ಪ್ರದೇಶದ ಕರ್ನೂಲ್, ವೈಜಾಗ್ ಜಿಲ್ಲೆಗಳು ಮತ್ತು ತಮಿಳುನಾಡಿನ ಟ್ಯುಟಿಕೋರಿನ್ ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ, ಒಡಿಶಾ, ಛತ್ತೀಸ್ ಗಢ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಒಳಗೊಂಡಂತೆ ದೇಶದಟ 11 ರಾಜ್ಯಗಳಲ್ಲಿ 8000ಕ್ಕೂ ಹೆಚ್ಚು ಡೀಲರ್ ಜಾಲಗಳನ್ನು ಹೊಂದಿದೆ.
ಈ ಹೊಸ ಸಿಮೆಂಟ್ ಉತ್ಪನ್ನಗಳನ್ನು ಉನ್ನತ ಗುಣಮಟ್ಟದ ಕ್ಲಿಂಕರ್, ಟ್ರೈ-ಕ್ಯಾಲ್ಷಿಯಂ ಸಿಲಿಕೇಟ್ಸ್ ಮತ್ತು ಉನ್ನತ ಜಿಪ್ಸಂ ಉಪಯೋಗಿಸಿ, ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಸಂಯೋಜಿಸಿ ಉತ್ಪಾದಿಸಲಾಗಿದ್ದು, ಇದು ಗಗನಚುಂಬಿ ಕಟ್ಟಡಗಳು, ಸೇತುವೆಗಳು, ಫ್ಲೈಓವರ್ ಗಳು, ಅಣೆಕಟ್ಟುಗಳು, ಕಟ್ಟಡಗಳು, ಪ್ರಿಕಾಸ್ಟ್ ಕಟ್ಟಡಗಳು, ಜಲ ಹಾಗೂ ತ್ಯಾಜ್ಯ ನೀರು ಸಂಸ್ಕರಣೆ ಮುಂತಾದ ನಿರ್ಮಾಣಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದು, ನಿರ್ಮಾಣಗಳು ದೀರ್ಘ ಕಾಲದ ಬಾಳಿಕೆಯ ವಿಶ್ವಾಸಾರ್ಹತೆ ಹೊಂದಿರುತ್ತವೆ ಎಂದರು.
ಈ ಸಂದರ್ಭದಲ್ಲಿ ಮೈ ಹೋಮ್ ಇಂಡಸ್ಟ್ರೀಸ್ ನ ಮಾರ್ಕೆಟಿಯಿಂಗ್ ಹಿರಿಯ ಉಪಾಧ್ಯಕ್ಷ ಶ್ರೀ ಕೆ. ವಿಜಯ್ ವರ್ಧನ್ ರಾವ್, ಅಧ್ಯಕ್ಷ ಪಿ ಜೆ ಮಥಾಯ್, ಹಿರಿಯ ಉಪಾಧ್ಯಕ್ಷ ಶ್ರೀ ನವಾಜ್ ಬಿ.ಎನ್. ಕಾರ್ಯನಿರ್ವಾಹಕ ನಿರ್ದೇಶಕ ಸಂಬಶಿವರಾವ್ ಉಪಸ್ಥಿತರಿದ್ದರು.