Thursday, 12th December 2024

ಶಾಮನೂರು ಮೊಮ್ಮಗಳ ಜತೆ ಸಚಿವ ಎಂ.ಬಿ.ಪಾಟೀಲ ಪುತ್ರನ ವಿವಾಹ

ಬೆಂಗಳೂರು: ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮತ್ತು ಆಶಾ ಅವರ ಪುತ್ರ ಬಸನ್ ಅವರ ವಿವಾಹವು ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳು ಅಖಿಲಾ ಅವರೊಂದಿಗೆ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಗುರುವಾರ ನೆರವೇರಿತು.

ಅಖಿಲಾ ಅವರು ಎಸ್ ಎಸ್ ಗಣೇಶ್ ಮತ್ತು ರೇಖಾ ದಂಪತಿಯ ಪುತ್ರಿಯಾಗಿದ್ದಾರೆ.

ಕುಟುಂಬದ ಹಿರಿಯರು ಮತ್ತು ಬಂಧುಗಳ ಸಮ್ಮುಖದಲ್ಲಿ ವಿವಾಹ ಮಹೋತ್ಸವವು ನೆರವೇರಿತು. ಮುಖ್ಯಮಂತ್ರಿ ಸಿದ್ದರಾ ಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವರಾದ ರಾಮಲಿಂಗಾರೆಡ್ಡಿ, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಮಧು ಬಂಗಾರಪ್ಪ, ದರ್ಶನಾಪುರ, ಶಿವಾನಂದಪಾಟೀಲ, ದಿನೇಶ ಗುಂಡೂರಾವ್ ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಎಚ್ .ಡಿ. ರೇವಣ್ಣ, ಕೋಟಾ ಶ್ರೀನಿವಾಸಪೂಜಾರಿ ಬಸನಗೌಡ ಪಾಟೀಲ ಯತ್ನಾಳ, ಮಂಜುನಾಥ ಭಂಡಾರಿ, ಸಂಸದರಾದ ಪಿ.ಸಿ.ಮೋಹನ್, ರಮೇಶ ಜಿಗಜಿಣಗಿ ಸೇರಿದಂತೆ ಸರ್ವಪಕ್ಷಗಳ ಶಾಸಕರು, ಸಂಸದರು, ಮುಖಂಡರು ವಧು-ವರರನ್ನು ಆಶೀರ್ವ ದಿಸಿ, ಶುಭ ಕೋರಿದರು.