Thursday, 12th December 2024

ಮುಖ್ಯವಾಹಿನಿಯಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಳ ಬಲಪಡಿಸುವ ಯತ್ನ

ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಅಂತರರಾಷ್ಟ್ರೀಯ ವ್ಯಾಪಾರ ಮೇಳ–೨೦೨೩ರಲ್ಲಿ ಟಾಟಾ ಸೌಲ್‌ಫುಲ್‌ ಭಾಗಿ

· ರುಚಿ ಮತ್ತು ಪೌಷ್ಟಿಕಾಂಶದ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳದೆ ಸಿರಿಧಾನ್ಯಗಳನ್ನು ಅಚ್ಚುಕಟ್ಟಾಗಿ ಸಂಯೋಜಿಸುವ ಹೊಸ ಉತ್ಪನ್ನಗಳ ಪರಿಚಯ ಮತ್ತು ಗ್ರಾಹಕರ ಅನುಭವ ಹೆಚ್ಚಿಸುವುದರ ಮುಂದುವರಿಕೆ

· ಉಪಾಹಾರ, ಮಿತ ಭೋಜನ ಮತ್ತು ಕುರುಕಲು ತಿಂಡಿ ವಿಭಾಗದಲ್ಲಿ ವಿವಿಧ ಬಗೆಯ ಆರೋಗ್ಯಕರ, ರುಚಿಕರ ಮತ್ತು ಅನುಕೂಲಕರ ಆಯ್ಕೆಗಳನ್ನು ಪರಿಚಯಿಸಿರುವ ಬ್ರ‍್ಯಾಂಡ್‌

ಬೆಂಗಳೂರು: ಟಾಟಾ ಕನ್ಸುಮರ್ ಸೌಲ್‌ಫುಲ್ ಪ್ರೈವೇಟ್ ಲಿಮಿಟೆಡ್‌ನ ಬ್ರ‍್ಯಾಂಡ್ ಆಗಿರುವ ಟಾಟಾ ಸೌಲ್‌ಫುಲ್ (ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಸಂಪರ‍್ಣ ಸ್ವಾಮ್ಯದ ಅಂಗಸಂಸ್ಥೆ), ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಅಂತರರಾಷ್ಟ್ರೀಯ ವ್ಯಾಪಾರ ಮೇಳ–೨೦೨೩ರಲ್ಲಿ (೪ನೇ ಆವೃತ್ತಿ) ಭಾಗವಹಿಸಿದೆ. ರ‍್ನಾಟಕ ರಾಜ್ಯ ರ‍್ಕಾರದ ಕೃಷಿ ಇಲಾಖೆ ಮತ್ತು ಕೆಎಪಿಪಿಇಸಿ ಜಂಟಿಯಾಗಿ ಈ ಮೇಳ ಆಯೋಜಿಸಿವೆ.

‌ಈ ಮೇಳವು ಸಿರಿಧಾನ್ಯಗಳು ಮತ್ತು ಸಾವಯವ ಕೃಷಿ ಉತ್ಪನ್ನಗಳ ವಲಯದ ರೈತರು, ದೇಶೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು, ಕೇಂದ್ರ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳನ್ನು ಒಟ್ಟುಗೂಡಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ೨೦೨೩ನೇ ರ‍್ಷವನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ರ‍್ಷ’ ಎಂದು ಘೋಷಿಸಿ ನರ‍್ಣಯ ಅಂಗೀಕರಿಸಿದೆ. ಹವಾಮಾನ ಬದಲಾವಣೆಯ ಕಠಿಣ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸಾಗುವಳಿ ಮಾಡಲು ಯೋಗ್ಯವಾಗಿರುವ ಸಿರಿಧಾನ್ಯಗಳು ಮತ್ತು ಅವುಗಳ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವ ಪ್ರಯತ್ನ ಇದಾಗಿದೆ.

ಭಾರತದ ಅಡುಗೆಮನೆಗಳಲ್ಲಿ ಪ್ರಾಚೀನ ಕಾಲದಿಂದಲೂ ಬಳಸುತ್ತಿರುವ ಸಿರಿಧಾನ್ಯಗಳನ್ನು ಪ್ರಾಚೀನ ಧಾನ್ಯಗಳೆಂದು ಪರಿಗಣಿಸಲಾಗುತ್ತದೆ. ಭಾರತವು ಅತಿ ಹೆಚ್ಚು ಸಿರಿಧಾನ್ಯ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದೆ. ಈ ಸಿರಿಧಾನ್ಯಗಳಲ್ಲಿ ರಾಗಿ, ಸಜ್ಜೆ, ನವಣೆ, ಜೋಳ, ಬರಗು, ವರಗು, ಅರಕ, ಸಾಮೆ ಯಂತಹ ಧಾನ್ಯಗಳು ಸೇರಿವೆ. ಇತರ ಧಾನ್ಯಗಳ ಜೊತೆಗೆ ಹೋಲಿಸಿದರೆ, ಸಿರಿಧಾನ್ಯಗಳ ಕೃಷಿಗೆ ಕಡಿಮೆ ನೀರು ಬೇಕಾಗುತ್ತದೆ. ಇದರಿಂದ ರೈತರಿಗೆ ಮತ್ತು ಭೂಮಿಗೂ ಅನೇಕ ಪ್ರಯೋಜನಗಳಿವೆ.

ಗ್ರಾಹಕರು ಈಗ ಆರೋಗ್ಯಕರ ಆಹಾರ ಆಯ್ಕೆಗಳನ್ನು ಹುಡುಕುತ್ತಿರುವುದರಿಂದ ಗ್ಲುಟೆನ್‌ ಮುಕ್ತ, ಪೌಷ್ಟಿಕಾಂಶ ಹೆಚ್ಚಿನ ಪ್ರಮಾಣದಲ್ಲಿ ಇರುವ ಹಾಗೂ ಕಬ್ಬಿಣ, ಪ್ರೋಟೀನ್, ನಾರಿನಂಶ ಮತ್ತು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಈ ಧಾನ್ಯಗಳು ಈಗ ಆಧುನಿಕ ಭಾರತೀಯ ಅಡುಗೆಮನೆಗಳಿಗೆ ಮರಳುತ್ತಿವೆ.

ಅತ್ಯಾಧುನಿಕ ಕರ‍್ಖಾನೆಗಳು ಮತ್ತು ವಿಭಿನ್ನ ಉತ್ಪನ್ನಗಳ ಮೂಲಕ ಸಿರಿಧಾನ್ಯಗಳ ವಿಷಯದಲ್ಲಿ ಅಪಾರ ಪರಿಣತಿ ಹೊಂದಿರುವ ಟಾಟಾ ಸೌಲ್‌ಫುಲ್ ‘ಮೊದಲು ರುಚಿ, ಆರೋಗ್ಯ ಮುನ್ನಡೆ’ ಎನ್ನುವುದನ್ನು ಬಲವಾಗಿ ಪ್ರತಿಪಾದಿಸುತ್ತದೆ. ಪುರಾತನ ಧಾನ್ಯಗಳನ್ನು ಗ್ರಾಹಕರ ಊಟದ ತಟ್ಟೆಗೆ ಹೆಚ್ಚು ಸೂಕ್ತವಾದ ಮತ್ತು ರುಚಿಕರ ಸ್ವರೂಪಗಳಲ್ಲಿ ತರಲು ಬ್ರ‍್ಯಾಂಡ್‌ ಗುರಿ ಹಾಕಿಕೊಂಡಿದೆ. ಇದರ ಉತ್ಪನ್ನಗಳ ಪಟ್ಟಿಯು ಉ‍ಪಾಹಾರ ಧಾನ್ಯಗಳು, ತಿಂಡಿ ಆಯ್ಕೆಗಳು ಮತ್ತು ಸಿರಿಧಾನ್ಯ ಆಧಾರಿತ ಪಾನೀಯಗಳನ್ನು hಣಣಠಿ://ತಿತಿತಿ.ಣಚಿಣಚಿsouಟಜಿuಟಟ.ಛಿom/. ಒಳಗೊಂಡಿದೆ.

ಈ ವ್ಯಾಪಾರ ಮೇಳದಲ್ಲಿ ಕಂಪನಿಯ ಭಾಗವಹಿಸುವಿಕೆಯು– ಸಿರಿಧಾನ್ಯಗಳನ್ನು ಮುಖ್ಯವಾಹಿನಿಗೆ ತರುವುದು, ಗ್ರಾಹಕರಿಗೆ ಸುಲಭವಾಗಿ ತಲುಪಿಸುವುದು ಮತ್ತು ಕೈಗೆಟುಕುವ ಸ್ವರೂಪಗಳಲ್ಲಿ ನೀಡುವ ಪ್ರಯತ್ನಗಳ ಮುಂದುವರಿಕೆಯಾಗಿದೆ. ಕಂಪನಿಯು ಗ್ರಾಹಕರಿಗಾಗಿ –ಟಾಟಾ ಸೌಲ್‌ಫುಲ್‌ ರಾಗಿ ಬೈಟ್ಸ್‌ – ನೊ ಮೈದಾ ಚೋಕೊ ಮತ್ತು ಟಾಟಾ ಸೌಲ್‌ಫುಲ್‌ ಮಸಾಲಾ ಓಟ್ಸ್‌+ ನಂತಹ ಉತ್ಪನ್ನಗಳನ್ನು ಕ್ರಮವಾಗಿ ₹ ೧೦ (೨೪ ಗ್ರಾಂ) ಮತ್ತು ₹ ೧೫ (೩೮ ಗ್ರಾಂ) ಕೈಗೆಟುಕುವ ಬೆಲೆಯಲ್ಲಿ ‌ಮಾರುಕಟ್ಟೆಗೆ ಪರಿಚಯಿಸಿದೆ.

ಸಿರಿಧಾನ್ಯಗಳ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಭಾಗವಹಿಸುವಿಕೆಯ ಕುರಿತು ಮಾತನಾಡಿರುವ ಟಾಟಾ ಕನ್ಸುಮರ್ ಸೌಲ್‌ಫುಲ್‌ನ ವ್ಯವಸ್ಥಾಪಕ ನರ‍್ದೇಶಕ ಮತ್ತು ಸಿಇಒ ಪ್ರಶಾಂತ್ ಪರಮೇಶ್ವರನ್ ಅವರು, ‘ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಅಂತರರಾಷ್ಟ್ರೀಯ ವ್ಯಾಪಾರ ಮೇಳ–೨೦೨೩’ರ ಭಾಗವಾಗಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ. ಗ್ರಾಹಕರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಭಾರತದ ಸಿರಿಧಾನ್ಯಗಳು ಸುಲಭವಾಗಿ ಮತ್ತು ಅನುಕೂಲಕರ ಸ್ವರೂಪಗಳಲ್ಲಿ ದೊರೆಯುವಂತಾಗಲು ಅವುಗಳನ್ನು ಪುನರುಜ್ಜೀವನಗೊಳಿಸುವ ನಮ್ಮ ಧ್ಯೇಯಕ್ಕೆ ಅನುಗುಣವಾಗಿದೆ. ಆಧುನಿಕ ಆರೋಗ್ಯ ಪ್ರಜ್ಞೆಯ ಗ್ರಾಹಕರಿಗೆ ಇದು ವಿಶ್ವಾಸರ‍್ಹ ಮತ್ತು ಸುಲಭದ ಆಯ್ಕೆಯಾಗಿದೆ. ಸಿರಿಧಾನ್ಯಗಳು ಕ್ರಮೇಣ ಮುಖ್ಯವಾಹಿನಿಯ ಉತ್ಪನ್ನಗಳಾಗಿ ಬೆಳವಣಿಗೆ ಕಾಣುತ್ತಿವೆ ಎಂಬುದು ನಮ್ಮ ನಂಬಿಕೆಯಾಗಿದೆ. ೨೦೨೩ನೇ ರ‍್ಷವನ್ನು ಸಿರಿಧಾನ್ಯಗಳ ಅಂತರರಾಷ್ಟ್ರೀಯ ರ‍್ಷವಾಗಿ ಆಚರಿಸಲಾಗುತ್ತಿದೆ. ಗ್ರಾಹಕರಲ್ಲಿ ಸಿರಿಧಾನ್ಯಗಳ ಬಳಕೆ ಬಗ್ಗೆ ಹೆಚ್ಚಿನ ಒಲವು ಕಂಡುಬರುತ್ತಿದೆ. ಟಾಟಾ ಸೌಲ್‌ಫುಲ್‌ನ ಸಂಪರ‍್ಣ ಉತ್ಪನ್ನ ಶ್ರೇಣಿಯಾಗಿರುವ, ಲಘು ಆಹಾರ, ಕುರುಕಲು ತಿಂಡಿ, ಮಿತ ಭೋಜನ ಅಥವಾ ಉಪಾಹಾರ ಧಾನ್ಯಗಳು ಸಿರಿಧಾನ್ಯಗಳ ಹೆಚ್ಚುತ್ತಿರುವ ಜನಪ್ರಿಯತೆಗೆ ಹಾಗೂ ಗ್ರಾಹಕರ ಬೇಡಿಕೆ ಪೂರೈಸಲು ಉತ್ತಮ ಸ್ಥಾನದಲ್ಲಿವೆ. ನಮ್ಮ ಉತ್ಪನ್ನಗಳನ್ನು ದೇಶದಾದ್ಯಂತ ಹೆಚ್ಚಿನ ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ.