Sunday, 15th December 2024

ಯಶವಂತಪುರ ರೈಲ್ವೆ ನಿಲ್ದಾಣಕ್ಕೂ ಆಧುನಿಕತೆಯ ಟಚ್‌ !

ಬೆಂಗಳೂರು: ಯಶವಂತಪುರ ರೈಲ್ವೆ ನಿಲ್ದಾಣಕ್ಕೂ ವಿಮಾನ ನಿಲ್ದಾಣದಂತೆ ಆಧುನಿಕ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ.

ರಾಜಧಾನಿಯ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ.

ಬರೋಬ್ಬರಿ 130 ವರ್ಷಗಳಷ್ಟು ಹಳೆಯದಾದ ಯಶವಂತಪುರ ರೈಲ್ವೆ ನಿಲ್ದಾಣ ರಾಜ ಧಾನಿಯಲ್ಲಿನ ಎರಡನೇ ಅತೀ ದೊಡ್ಡ ಜನನಿಬಿಢ ರೈಲ್ವೆ ಟರ್ಮಿನಲ್ ಆಗಿದ್ದು, ಅಂದಾಜು 400 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕಗೊಳಿಸಲಾಗುವುದು.

ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣವನ್ನು 314 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸ ಲಾಗಿದೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ವನ್ನು 442 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಇತ್ತೀಚೆಗಷ್ಟೇ ಟೆಂಡರ್ ಆಹ್ವಾನಿಸಲಾಗಿದೆ.

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾನ 1892ರಿಂದ ಕಾರ್ಯಾಚರಿಸುತ್ತಿದೆ. ಇದೊಂದು ಹವಾನಿಯಂತ್ರಿತ ಅತ್ಯಾಧುನಿಕ ರೈಲ್ವೆ ನಿಲ್ದಾನವಾಗಲಿದ್ದು, ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ರೈಲ್ವೆ ಮಾರ್ಗ ಒಂದೇಯಾಗಿರಲಿದೆ. ಪ್ರಯಾಣಿಕರಿ ಗಾಗಿ ಅತ್ಯಾಧುನಿಕ ವಿಶ್ರಾಂತಿ ಕೋಣೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.