Sunday, 15th December 2024

ಪ್ರಧಾನಿ ರೋಡ್‌ ಶೋ ವೇಳಾಪಟ್ಟಿ ಬದಲಾವಣೆ

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಬೇಕಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಅನ್ನು ಮೂರನೇ ಬಾರಿ ಬದಲಾವಣೆ ಮಾಡಲಾಗಿದೆ.

ನೀಟ್‌ ಎಕ್ಸಾ ಇರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದನ್ನು ಮನಗಂಡಿರುವ ರಾಜ್ಯ ಬಿಜೆಪಿ ನಾಯಕರು ಗಳು ಈ ಬದಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಭಾನುವಾರ ಬೆಳಗ್ಗೆ ನಡೆಬೇಕಾಗಿದ್ದ ರೋಡ್ ಶೋ ಶನಿವಾರಕ್ಕೆ ನಿಗದಿಪಡಿಸಲಾಗಿದೆ. ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರ ನಡೆಯಲಿದೆ. ಅಂದರೆ ಶನಿವಾರದ 10 ಕಿಲೋಮೀಟರ್ ರೋಡ್ ಶೋ ಭಾನುವಾರ ಬೆಳಗ್ಗೆ ನಡೆಯಲಿದ್ದು, ಭಾನುವಾರ ನಡೆಯಬೇಕಿದ್ದ 26.5 ಕಿಲೋಮೀಟರ್ ರೋಡ್ ಶೋ ಶನಿವಾರವೇ ನಡೆಯಲಿದೆ.