Sunday, 15th December 2024

ಏ.14ಕ್ಕೆ ರಾಜ್ಯದಲ್ಲಿ ಪ್ರಧಾನಿ ಮೋದಿ ರಣಕಹಳೆ

ಬೆಂಗಳೂರು: ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರ ಗೆದ್ದು ಮೋದಿಗೆ ಗಿಫ್ಟ್‌ ಕೊಡುವುದಕ್ಕೆ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿ ಕೊಂಡು ರಾಜ್ಯಾದ್ಯಂತ ಮಿಂಚಿನ ಸಂಚಾರ ಮಾಡ್ತಿದ್ದಾರೆ.

ರಾಜ್ಯ ಬಿಜೆಪಿ ನಾಯಕರ ಶಕ್ತಿಗೆ ಮತ್ತಷ್ಟು ಹುರುಪು ತುಂಬಲು ಪ್ರಧಾನಿ ಮೋದಿ ಏ.14ಕ್ಕೆ ರಾಜ್ಯದಲ್ಲಿ ರಣಕಹಳೆ ಮೊಳಗಿಸ ಲಿದ್ದಾರೆ. ಭರ್ಜರಿ ಮತಯಾಚನೆ ಮಾಡಿ ಮತದಾರರ ಮನಗೆಲ್ಲೋದಕ್ಕೆ ಸಜ್ಜಾಗಿದ್ದಾರೆ.

ರಾಜದಲ್ಲಿ ಪ್ರಧಾನಿ ಮೋದಿ 2ನೇ ಸುತ್ತಿನ ಮತಬೇಟೆಯಾಡಲಿದ್ದಾರೆ. ಏ.14ರಂದು ಕರುನಾಡಿಗೆ ಪ್ರಧಾನಿ ಮೋದಿ ಎಂಟ್ರಿ ಕೊಡಲಿದ್ದು, ಚಿಕ್ಕಬಳ್ಳಾಪುರ ಹಾಗೂ ಮಂಗಳೂರು ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು ಉತ್ತರದಲ್ಲಿ ರೋಡ್ ಶೋ ಮಾಡಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚಿಸಲಿದ್ದಾರೆ.

ಮೋದಿ ರೋಡ್ ಶೋಗೆ 4 ಸಂಭಾವ್ಯ ರೂಟ್‌ಮ್ಯಾಪ್ ಸಿದ್ಧಪಡಿಸಲಾಗಿದೆ. ಬೆಂಗಳೂರು ಉತ್ತರ ವ್ಯಾಪ್ತಿಯ ಹೆಬ್ಬಾಳ ವಿಧಾನಸಭೆ ಕ್ಷೇತ್ರ ಹಾಗೂ ಬ್ಯಾಟರಾಯನಪುರ ಕ್ಷೇತ್ರಗಳಲ್ಲಿ ರೋಡ್ ಶೋಗೆ 4 ರೂಟ್‌ಮ್ಯಾಪ್ ಸಿದ್ಧಪಡಿಸಲಾಗಿದೆ. ಹೆಬ್ಬಾಳದಲ್ಲಿ ಅಶ್ವಥ್ ನಗರ ಸರ್ಕಲ್​ನಿಂದ ಕೋಟೆ ಮುತ್ತುಸ್ವಾಮಿ ದೇಗುಲವರೆಗೆ 6.4 KM ಮೊದಲ ರೋಡ್ ಶೋ ರೂಟ್‌ಮ್ಯಾಪ್ ಹಾಗೂ ಬ್ಯಾಟ ರಾಯನಪುರದ ಗುಂಡಾಂಜನೇಯಸ್ವಾಮಿ‌ ದೇಗುಲದಿಂದ ಜಕ್ಕೂರು ಏರೋಡ್ರಮ್​ವರೆಗೆ 4.6 ಕಿಲೋ ಮೀಟರ್​​ ರೋಡ್​ ಶೋಗೆ ಪ್ಲಾನ್ ಮಾಡಲಾಗಿದೆ. ಇದರ ಜೊತೆ 3-4 KMವರೆಗಿನ 2 ರೂಟ್‌ಮ್ಯಾಪ್ ಸಿದ್ಧಪಡಿಸಿ ರವಾನಿಸಿದ್ದು, ಪ್ರಧಾನಿ ಕಚೇರಿಯಿಂದ ಅಂತಿಮಗೊಳ್ಳಬೇಕಿದೆ.

ಬೆಂಗಳೂರಿನ ಜೊತೆ ದಕ್ಷಿಣ ಕನ್ನಡದಲ್ಲೂ ಮೋದಿ ಮತಬೇಟೆ ಜೊತೆ ರೋಡ್‌ಶೋ ನಡೆಸಲಿದ್ದಾರೆ.

ಚಿತ್ರದುರ್ಗ ಬಿಜೆಪಿಯಲ್ಲೂ ಅಸಮಾಧಾನದ ಅಲೆ ಕಡಿಮೆಯಾಗಿಲ್ಲ. ಹೊಳಲ್ಕೆರೆ ಕ್ಷೇತ್ರದಲ್ಲಿ ಶಾಸಕ ಚಂದ್ರಪ್ಪ ಹಾಗೂ ಪುತ್ರ ರಘುಚಂದನ್​​ ಸೈಲೆಂಟ್ ಆಗಿದ್ದಾರೆ. ಕ್ಷೇತ್ರದಲ್ಲಿ ಗೋವಿಂದ ಕಾರಜೋಳ ಏಕಾಂಕಿಯಾಗಿ ಪ್ರಚಾರ ಮಾಡ್ತಿದ್ದಾರೆ.

ಧಾರವಾಡ ಕ್ಷೇತ್ರದಲ್ಲಿ ಜೋಶಿ ವಿರುದ್ಧ ದಿಂಗಾಲೇಶ್ವರ್​ ಶ್ರೀಗಳು ಸಿಡಿದೆದ್ದಿದ್ದಾರೆ. ಪಕ್ಷೇತರವಾಗಿ ಸ್ಪರ್ಧೆಗೆ ನಿರ್ಧಾರ ಕೂಡ ಮಾಡಿದ್ದಾರೆ. ಚುನಾವಣಾ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಹರಿಹರ ಪಂಚಮಸಾಲಿ ಮಠಕ್ಕೆ ಭೇಟಿ ಮಹತ್ವದ ಮಾತುಕತೆ ನಡೆಸಿ ದರು. ಸಭೆ ಬಳಿಕ ಮಾತ್ನಾಡಿದ ದಿಂಗಾಲೇಶ್ವರ್​ ಸ್ವಾಮೀಜಿ, ಪ್ರಲ್ಹಾದ್​​ ಜೋಶಿಯಿಂದಲೇ ನಮ್ಮ ಬಗ್ಗೆ ಅಪಪ್ರಚಾರ ಆಗುತ್ತಿದೆ.  ಏನೇ ಮಾಡಿದರೂ ನಮ್ಮದು ಕುಗ್ಗುವ ಮನಸ್ಥಿತಿ ಅಲ್ಲ ಅಂತ ಜೋಶಿಗೆ ಟಾಂಗ್​ ಕೊಟ್ಟಿದ್ದಾರೆ. ಇದೇ ವಿಚಾರಕ್ಕೆ ಜೋಶಿ ರಿಯಾ ಕ್ಷನ್​ ಕೊಟ್ಟಿದ್ದು, ನಾನು ಯಾವತ್ತೂ ಶ್ರೀಗಳ ವಿರುದ್ಧ ಟೀಕಿಸಿಲ್ಲ ಎಂದಿದ್ದಾರೆ. ಇದೇ ವೇಳೆ ಮಾತ್ನಾಡಿದ ವಚನಾನಂದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಸ್ಪರ್ಧೆಯನ್ನ ಸ್ವಾಗತಿದ್ದಾರೆ.