Sunday, 23rd June 2024

ನಾಳೆಯಿಂದ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರೈಲು ಸಂಚಾರ ಆರಂಭ

ಬೆಂಗಳೂರು: ಬೆಂಗಳೂರಿನ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ಬೈಯಪ್ಪನ ಹಳ್ಳಿಯ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರೈಲುಗಳ ಸಂಚಾರ ಜೂ.6ರಿಂದ ಆರಂಭವಾಗಲಿದೆ.

314 ಕೋಟಿ ರುಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮಾದರಿ ಸೌಲಭ್ಯಗೊಂದಿಗೆ ನಗರದ ಬೈಯಪ್ಪನಹಳ್ಳಿಯ ಸರ್‌.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಸಿದ್ಧಗೊಂಡು 14 ತಿಂಗಳು ಕಳೆದರೂ ಅದಕ್ಕೆ ಉದ್ಘಾಟನೆ ಭಾಗ್ಯ ದೊರೆತಿರಲಿಲ್ಲ. ಇದೀಗ ರೈಲುಗಳ ಸೇವೆ ಆರಂಭಿಸಲಿದೆ.

ಟರ್ಮಿನಲ್‌ನಿಂದ ಮೊದಲ ರೈಲು ಜೂ.6 ರಂದು ರಾತ್ರಿ 7 ಗಂಟೆಗೆ ಹೊರಡಲಿದೆ. ಟರ್ಮಿನಲ್‌ ಅಧಿಕೃತ ಉದ್ಘಾಟನೆ ಸಮಾರಂಭ ಮುಂದಿನ ದಿನಗಳಲ್ಲಿ ನಡೆಯಲಿದೆ.

ಮೊದಲ ಹಂತದಲ್ಲಿ ಬಾಣಸವಾಡಿ ರೈಲು ನಿಲ್ದಾಣದಿಂದ ತೆರಳುತ್ತಿದ್ದ ಮೂರು ಜೋಡಿ ರೈಲುಗಳನ್ನು ಸರ್‌. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಸ್ಥಳಾಂತರಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!