Friday, 22nd November 2024

New Fashion Trend: ವೈಬ್ರೆಂಟ್‌ ಕಲರ್‌‌‌ನ ನಿಯಾನ್‌ ಸ್ಲಿಂಗ್‌ ಬ್ಯಾಗ್‌‌ಗಳ ಹಂಗಾಮಾ! ಇವುಗಳನ್ನು ಬಳಸಬಹುದು ಹೇಗೆ?

New Fashion Trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಣ್ಣಿಗೆ ರಾಚುವಂತಹ ನಾನಾ ಕಲರ್‌ನ ನಿಯಾನ್‌ ಬಣ್ಣದ ಸ್ಲಿಂಗ್‌ ಬ್ಯಾಗ್‌ಗಳು (Sling Bags) ಜೆನ್‌ ಜಿ ಹುಡುಗ-ಹುಡುಗಿಯರನ್ನು ಆಕರ್ಷಿಸುತ್ತಿವೆ. ನೋಡಲು ಎದ್ದು ಕಾಣುವಂತಹ ಕಲರ್‌ಗಳಲ್ಲಿ ಈ ನಿಯಾನ್‌ ಸ್ಲಿಂಗ್‌ ಬ್ಯಾಗ್‌ಗಳು ಈ ಜನರೇಷನ್‌ ಹೈಕಳನ್ನು ಸೆಳೆಯುತ್ತಿದ್ದು, ಈ ಸಾಲಿನ ಹೈ ಫ್ಯಾಷನ್‌ (New Fashion Trend) ಟಾಪ್‌ ಲಿಸ್ಟ್‌ಗೆ ಸೇರಿವೆ. ಅಲ್ಲದೇ, ಗ್ಲಾಮರಸ್‌ ಹುಡುಗ-ಹುಡುಗಿಯರನ್ನು ತಮ್ಮತ್ತ ಸೆಳೆದಿವೆ.

ಚಿತ್ರಕೃಪೆ : ಪಿಕ್ಸೆಲ್‌

ಫ್ಯಾಷನ್‌ ಟಾಪ್‌ ಲಿಸ್ಟ್‌ನಲ್ಲಿರುವ ಸ್ಲಿಂಗ್‌ ಬ್ಯಾಗ್ಗಳಿವು

ಮೊದಲೆಲ್ಲಾ ಡಿಸೆಂಟ್‌ ಲುಕ್‌ ನೀಡುವ ಸ್ಲಿಂಗ್‌ ಬ್ಯಾಗ್‌ಗಳು ಟ್ರೆಂಡಿಯಾಗಿದ್ದವು. ಬರಬರುತ್ತಾ ಮಹಿಳೆಯರು ಇವನ್ನು ಹೆಚ್ಚು ಬಳಸಲಾರಂಭಿಸಿದ ನಂತರ, ಈ ಜನರೇಷನ್‌ನ ಹುಡುಗ-ಹುಡುಗಿಯರು ತಮ್ಮ ಚಾಯ್ಸ್ ಬದಲಾಯಿಸಿದರು. ತಮ್ಮದೇ ಆದ ಬಿಂದಾಸ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಮ್ಯಾಚ್‌ ಆಗುವಂತಹ ನಿಯಾನ್‌ ಶೇಡ್‌ನ ಸ್ಲಿಂಗ್‌ ಬ್ಯಾಗ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾರಂಭಿಸಿದರು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಸ್ಟ್ರೀಟ್‌ ಶಾಪ್‌ನಲ್ಲೂ ದೊರಕುತ್ತಿರುವ ನಿಯಾನ್‌ ಸ್ಲಿಂಗ್‌ ಬ್ಯಾಗ್ಸ್

ಮೊದಮೊದಲು ಕೇವಲ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಕಲರ್‌ನ ಬ್ಯಾಗ್‌ಗಳ ಪ್ರಯೋಗ ನಡೆಯಿತು. ನಂತರ, ಸಾಕಷ್ಟು ಹಾಲಿವುಡ್‌ ಚಿತ್ರಗಳಲ್ಲಿ ಈ ನಿಯಾನ್‌ ಸ್ಲಿಂಗ್‌ ಬ್ಯಾಗ್‌ಗಳ ಬಳಕೆ ಕಾಣಿಸಿಕೊಂಡ ನಂತರ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್‌ ವೀಕ್‌ನಲ್ಲೂ ಇವು ಹಂಗಾಮ ಎಬ್ಬಿಸಿದವು. ತದ ನಂತರ ಹೇಳುವುದೇ ಬೇಡ. ನಮ್ಮಲ್ಲೂ ಇವು ದೊಡ್ಡ ದೊಡ್ಡ ಬ್ರಾಂಡ್‌ಗಳಲ್ಲಿ ಬಿಡುಗಡೆಗೊಳ್ಳಲಾರಂಭಿಸಿದವು. ಆರಂಭದಲ್ಲಿ ಬ್ರಾಂಡ್‌ಗಳಲ್ಲಿ ಮಾತ್ರ ಲಭ್ಯವಿದ್ದ ಇವುಗಳ ಸೇಮ್‌ ಸೆಕೆಂಡ್‌ ಕಾಪಿ, ಸ್ಟ್ರೀಟ್‌ ಬ್ಯಾಗ್‌ ಶಾಪ್‌ಗಳಲ್ಲಿಯೂ ಕಡಿಮೆ ದರದಲ್ಲಿ ದೊರೆಯಲಾರಂಭಿಸಿದವು ಎನ್ನುತ್ತಾರೆ ಬ್ಯಾಗ್‌ ಡಿಸೈನರ್ಸ್.

ಟ್ರೆಂಡ್‌ನಲ್ಲಿರುವ ನಿಯಾನ್‌ ಸ್ಲಿಂಗ್‌ ಬ್ಯಾಗ್ಸ್

ಎದ್ದು ಕಾಣುವಂತಹ ಎಲೆಕ್ಟ್ರಿಕ್‌ ಬ್ಲ್ಯೂ, ಫ್ಲೊರಸೆಂಟ್‌ ಯೆಲ್ಲೋ, ಗ್ರೀನ್‌, ರೆಡಿಯಂ ಗ್ರೀನ್‌, ನಿಯಾನ್‌ ಪಿಂಕ್‌, ಪೀಚ್‌ ಸೇರಿದಂತೆ ಊಹೆಗೂ ಮೀರಿದ ಮಿಕ್ಸ್‌ ಮ್ಯಾಚ್‌ ಶೇಡ್‌ಗಳು ಲೆಕ್ಕವಿಲ್ಲದಷ್ಟು ಸ್ಲಿಂಗ್‌ ಬ್ಯಾಗ್‌ ವಿನ್ಯಾಸದಲ್ಲಿ ಟ್ರೆಂಡಿಯಾಗಿವೆ. ಕೆಲವು ಸಿಂಪಲ್‌ ಡಿಸೈನ್‌ನಲ್ಲಿದ್ದರೇ, ಇನ್ನು ಕೆಲವು ಮಿನಿ ಬ್ಯಾಗ್‌ ಕಮ್‌ ಪರ್ಸ್ ಶೈಲಿಯಲ್ಲಿ ದೊರೆಯುತ್ತಿವೆ. ಇನ್ನು ಹುಡುಗರ ವಿಷಯಕ್ಕೆ ಬಂದಲ್ಲಿ ಯೂನಿಸೆಕ್ಸ್ ಡಿಸೈನ್‌ನ ವ್ಯಾಲೆಟ್‌ ಹಾಗೂ ಚಿಕ್ಕ ಟ್ರಾವೆಲಿಂಗ್‌ ಪರ್ಸ್ ಶೈಲಿಯ ಮಲ್ಟಿ ಪಾಕೆಟ್‌ ವಿನ್ಯಾಸದವು ಹೆಚ್ಚು ಚಾಲ್ತಿಯಲ್ಲಿವೆ ಎನ್ನುತ್ತಾರೆ ಡಿಸೈನರ್ಸ್.

ಈ ಸುದ್ದಿಯನ್ನೂ ಓದಿ | Kannada New Movie: ಆದಿತ್ಯ ಶಶಿಕುಮಾರ್ ಹುಟ್ಟುಹಬ್ಬಕ್ಕೆ “ರಾಶಿ” ಉಡುಗೊರೆ!

ನಿಯಾನ್‌ ಸ್ಲಿಂಗ್‌ ಬ್ಯಾಗ್‌ ಆಯ್ಕೆ ಹಾಗೂ ಸ್ಟೈಲಿಂಗ್‌ ಹೇಗೆ?

ಬಿಂದಾಸ್‌ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಮಾತ್ರ ಮ್ಯಾಚ್‌ ಆಗುತ್ತದೆ.
ಎಥ್ನಿಕ್‌ ಫ್ಯಾಷನ್‌ಗೆ ಮ್ಯಾಚ್‌ ಆಗುವುದಿಲ್ಲ. ಯೂನಿಸೆಕ್ಸ್ ಡಿಸೈನ್‌ನವು ಹುಡುಗ-ಹುಡುಗಿ ಇಬ್ಬರೂ ಬಳಸಬಹುದು.
ಜೆನ್‌ ಜಿ ಹುಡುಗಿಯರು ಎಲ್ಲಾ ಬಗೆಯ ಔಟ್‌ಫಿಟ್‌ಗೂ ಧರಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)