ಬೆಂಗಳೂರು: ಅಪ್ರಾಪ್ತ ಮಗುವನ್ನು ಪತಿಯ ಸುಪರ್ದಿಗೆ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದ್ರೇ ಮಹಿಳೆ ಈ ಆದೇಶ ಪಾಲಿಸಿರಲಿಲ್ಲ. ಹೀಗಾಗಿ ಮಹಿಳೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಹೈಕೋರ್ಟ್ ನ್ಯಾಯಪೀಠವು ಮಗುವಿನ ನೆಮ್ಮದಿ ಹಾಗೂ ತಾಯಿಯೊಂದಿಗಿನ ಭಾವನಾ ತ್ಮಕಯನ್ನಷ್ಟೇ ನ್ಯಾಯಾಲಯ ಪರಿಗಣಿಸಬಾರದು. ಮಗು ಬೆಳೆಯುವ ವಾತಾವರಣ, ಆರೈಕೆ ಮತ್ತು ವಾತ್ಸಲ್ಯವನ್ನು ಪರಿಗಣಿಸಬೇಕಾಗುತ್ತದೆ ಎಂಬುದಾಗಿ ಅಭಿಪ್ರಾಯ ಪಟ್ಟಿತ್ತು.
ಜನವರಿ 31, 2023ರಲ್ಲಿ ಸಲ್ಲಿಸಾಗಿದ್ದ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿ, ಮಗು ವನ್ನು ತಂದೆ ವಶಕ್ಕೆ ನೀಡುವಂತೆ ಕೌಟುಂಬಿಕ ಕೋರ್ಟ್ ನೀಡಿದ್ದಂತ ಆದೇಶವನ್ನು ಎತ್ತಿ ಹಿಡಿದಿತ್ತು.
ಏಪ್ರಿಲ್ 11ರಂದು ಪತಿ ಹೇಬಿಯಸ್ ಕಾರ್ಪಸ್ ಅಡಿಯಲ್ಲಿ ನ್ಯಾಯಾಲಯ ಆದೇಶಿಸಿದ್ದರೂ, ತಮಗೆ ಮಗು ನೀಡಿಲ್ಲ ಎಂಬುದಾಗಿ ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರಿದ್ದ ರಜಾಕಾಲದ ಪೀಠವು ವಿಚಾರಣೆ ನಡೆಸಿತು.
ಇದೇ ವೇಳೆ ಅರ್ಜಿಯ ಮುಂದಿನ ವಿಚಾರಣೆ ವೇಳೆ ಮಹಿಳೆಯನ್ನು ಪೊಲೀಸ್ ಆಯುಕ್ತರು ಕೋರ್ಟ್ ಮುಂದೆ ಹಾಜರುಪಡಿಸ ಬೇಕು. ಆ ವೇಳೆ ಮಗುವೂ ಜತೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎಲ್ಲಾ ಸುರಕ್ಷತಾ ಕ್ರಮಗಳ್ನು ಪೊಲೀಸರು ಕೈಗೊಳ್ಳಬೇಕು ಎಂಬುದಾಗಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತು.