Thursday, 12th December 2024

Onam Fashion 2024: ಯುವತಿಯರನ್ನು ಆಕರ್ಷಿಸಿದ ಓಣಂ ರೆಡಿಮೇಡ್‌ ಡಿಸೈನರ್‌ ವೇರ್ಸ್

Onam Fashion 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಓಣಂ ಹಬ್ಬದ (Onam Festival) ಸೀಸನ್‌ನಲ್ಲಿ ವೈವಿಧ್ಯಮಯ ಸ್ಟೈಲಿಶ್‌ ಆಗಿ ಕಾಣಿಸುವ ಡಿಸೈನರ್‌ವೇರ್‌ಗಳು (Onam Fashion 2024) ಬಿಡುಗಡೆಗೊಂಡಿವೆ. ಯುವತಿಯರನ್ನು ಸಿಂಗರಿಸುತ್ತಿವೆ. ಓಣಂ ಸೀರೆ (Saree) ಬೇಡ ಅಥವಾ ಟ್ರೆಡಿಷನಲ್‌ ಆಗಿ ಉಡಲು ಕಷ್ಟ, ಇಲ್ಲವೇ ಸಮಯವಿಲ್ಲ ಎನ್ನುವ ಯುವತಿಯರಿಗೆಂದೇ ನಾನಾ ಬಗೆಯ ರೆಡಿಮೇಡ್‌ ಎಥ್ನಿಕ್‌ವೇರ್‌ಗಳು (Ethnic Wears) ಹಾಗೂ ಓಣಂ ಡಿಸೈನರ್‌ವೇರ್‌ಗಳೆಂದೇ ಹೆಸರು ಪಡೆದ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಆಗಮಿಸಿವೆ. ಹೆಚ್ಚು ಸಮಯ ವ್ಯಯ ಮಾಡದೇ, ಯಾರೂ ಬೇಕಾದರೂ ಓಣಂ ಲುಕ್‌ ಪಡೆಯಬಹುದಾದಂತಹ ಈ ಉಡುಪುಗಳು ಸದ್ಯ ಟ್ರೆಂಡ್‌ (Trend) ಲಿಸ್ಟ್‌ಗೆ ಸೇರಿವೆ. ಅತಿ ಸುಲಭವಾಗಿ ಹಬ್ಬದ ಲುಕ್‌ ನೀಡುವಂತಹ ಈ ಡಿಸೈನರ್‌ವೇರ್‌ಗಳು ಸದ್ಯ ಹುಡುಗಿಯರ ಮನ ಗೆದ್ದಿವೆ ಎನ್ನುತ್ತಾರೆ ಕೇರಳ ಮೂಲದ ಡಿಸೈನರ್‌ಗಳಾದ ರಚಿತಾ ಹಾಗೂ ರಾಧಿಕಾ.

ಯುವತಿಯರ ಮನ ಸೆಳೆದ ರೆಡಿಮೇಡ್‌ ಓಣಂ ಡ್ರೆಸ್‌

ಇದೀಗ ಹಿಂದಿನ ಕಾಲದಂತೆ ಓಣಂ ಸೀರೆಯೇ ಉಡಬೇಕೆಂಬ ಡ್ರೆಸ್‌ಕೋಡ್‌ ಈ ಹಬ್ಬದಲ್ಲಿಲ್ಲ. ಬದಲಿಗೆ ಓಣಂನ ಹಬ್ಬದ ಲುಕ್‌ನಲ್ಲಿ ಕಾಣಿಸಿಕೊಂಡರೇ ಸಾಕು! ಈ ಜನರೇಷನ್‌ನ ಹುಡುಗಿಯರು ಹಾಗೂ ಮಕ್ಕಳು ಈ ಹಬ್ಬಕ್ಕೆ ಮ್ಯಾಚ್‌ ಆಗುವಂತಹ ಡಿಸೈನರ್‌ವೇರ್‌ ಧರಿಸಿದರೇ ಸಾಕು! ಎಂಬ ಮನೋಭಾವ ಮನೆಯ ಹಿರಿಯರಲ್ಲಿ ಮೂಡಿರುವುದು, ಈ ಉಡುಗೆಗಳು ಹೆಚ್ಚು ಬೇಡಿಕೆ ಸೃಷ್ಠಿಸಿಕೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಪ್ರಚಲಿತದಲ್ಲಿರುವ ರೆಡಿಮೇಡ್‌ ಓಣಂ ಉಡುಪುಗಳು

ಉದ್ದನೆಯ ಎಥ್ನಿಕ್‌ ಗೌನ್‌, ಬಾರ್ಡರ್‌ ಗೌನ್‌, ಓಣಂ ಡ್ರೆಸ್‌ಗಳಲ್ಲಿ ಲಾಂಗ್‌ ಲಂಗ, ಹಾಫ್‌ ವೈಟ್‌, ಕ್ರೀಮ್‌ ಬಣ್ಣದ ಗೋಲ್ಡನ್‌ ಬಾರ್ಡರ್‌ನ ಲಂಗ-ದಾವಣಿ, ಲೆಹೆಂಗಾ ಶೈಲಿಯ ಉಡುಗೆ, ತ್ರೀ ಪೀಸ್‌ ಓಣಂ ಔಟ್‌ಫಿಟ್ಸ್, ಅನಾರ್ಕಲಿ ಶೈಲಿಯ ಲಾಂಗ್‌ ಬಾರ್ಡರ್ ಲಂಗ, ಗೋಲ್ಡನ್‌ ಹಾಗೂ ಸಿಲ್ವರ್‌ ಝರಿಯ ಉದ್ದ-ಲಂಗ ಸೇರಿದಂತೆ ನಾನಾ ಬಗೆಯವು ಈ ಹಬ್ಬದ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ಯುವತಿಯರನ್ನು ಮಾತ್ರವಲ್ಲ, ಚಿಕ್ಕ ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿವೆ ಹಾಗೂ ಎಲ್ಲರಿಗೂ ಪ್ರಿಯವಾಗಿವೆ ಎನ್ನುತ್ತಾರೆ ಡಿಸೈನರ್‌ ಶ್ರೀ ವಾರಿಯರ್‌.

ಈ ಸುದ್ದಿಯನ್ನೂ ಓದಿ | Reliance Foundation: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ರಿಲಯನ್ಸ್‌ ಫೌಂಡೇಷನ್‌ನಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ

ಓಣಂ ಉಡುಗೆ ಪ್ರಿಯರಿಗೆ ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್

ಈ ಉಡುಗೆಗಳಿಗೆ ಕಂಪ್ಲೀಟ್‌ ಎಥ್ನಿಕ್‌ ಲುಕ್‌ ನೀಡಿ.
ಮೇಕಪ್‌ ಕೇರಳಿಯನ್ಸ್ ಲುಕ್‌ ನೀಡುವಂತಿರಲಿ.
ಹೂವು ಮುಡಿದಲ್ಲಿ ಆಕರ್ಷಕವಾಗಿ ಕಾಣಿಸುವುದು.
ಬಂಗಾರದ ಅಥವಾ ಟ್ರೆಡಿಷನಲ್‌ ಆಭರಣಗಳನ್ನು ಧರಿಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)