Thursday, 21st November 2024

Onam Saree Fashion 2024: ‘ಓಣಂ ಹಬ್ಬ’ದ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ 3 ಶೈಲಿಯ ಸೀರೆಗಳಿವು

Onam Saree Fashion 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು (ಲೇಖಕಿ, ಫ್ಯಾಷನ್‌ ಪತ್ರಕರ್ತೆ)

ಪ್ರತಿವರ್ಷದಂತೆ ಈ ವರ್ಷವೂ ಕೂಡ ಓಣಂ ಹಬ್ಬದ (Onam festival) ಸೀಸನ್‌ನಲ್ಲಿ ನಾನಾ ಬಗೆಯ ಡಿಸೈನರ್‌ ಸೀರೆಗಳು (Designer Sarees) ಎಂಟ್ರಿ ನೀಡಿವೆ. ಅವುಗಳಲ್ಲಿ ಇದೀಗ 3 ಬಗೆಯ ಸೀರೆಗಳು ಟ್ರೆಂಡಿಯಾಗಿವೆ. ಅವು ಯಾವುವು? ಎಂಬುದರ ಬಗ್ಗೆ ಸೀರೆ ಎಕ್ಸ್‌ಪರ್ಟ್‌ಗಳು ಇಲ್ಲಿ ತಿಳಿಸಿದ್ದಾರೆ. ಕೇರಳದ ಈ ಹಬ್ಬಕ್ಕೆ ಹೆಚ್ಚು ಮಹತ್ವವಿರುವುದು ಶ್ವೇತವರ್ಣದ ಸೀರೆಗೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ! ಕೇರಳದ (Kerala) ಸಾಂಪ್ರದಾಯಿಕ ಸೀರೆಯಾದ (Traditional saree) ಕಸವು ಸೀರೆ ನಾನಾ ವೆರೈಟಿಗಳಲ್ಲಿ ಬಂದಿವೆ. ಬಿಳಿ ಬಣ್ಣದ ಸೀರೆಗೆ ಗೋಲ್ಡನ್‌ ಕಲರ್‌ ಝರಿ ಇರುವ ಈ ಸೀರೆ (Onam Saree Fashion 2024) ನೋಡಲು ಅತ್ಯಂತ ಆಕರ್ಷಕವಾಗಿವೆ, ರಾಯಲ್‌ ಲುಕ್‌ ನೀಡುತ್ತವೆ.

ಕಲರ್‌ ಝರಿ ಪ್ರಿಂಟ್‌ ಸೀರೆ, ಕಸವು ಸೀರೆ ವಿತ್‌ ವೆನ್ನಕೃಷ್ಣನ್‌ ಎಂಬ್ರಾಯ್ಡರಿ, ಕೇರಳ ಸಿಂಪಲ್‌ ಝರಿ ಕಸವು, ಪಿಕಾಕ್‌ ಎಂಬ್ರಾಯ್ಡರಿ ಕಸವು, ಫ್ಯಾಬ್ರಿಕ್‌ ಪ್ರಿಂಟ್‌ ಡಿಸೈನ್‌ ಕಸವು, ಸಿಲ್ವರ್‌ ಎಂಬ್ರೋಸ್‌, ಕಸವು ಫುಲ್‌ ಟಿಶ್ಯೂ ಎಂಬೋಸಿಂಗ್‌, ವಲ್ಲಿಪ್ರಿಂಟ್‌, ಎಂಬ್ರಾಯಿಡರಿ ಫ್ಲೀಟ್‌ ಸೀರೆ, ಫ್ಲವರ್‌ ಪ್ರಿಂಟ್‌, ರಾಧಾ ಕೃಷ್ಣ ಪ್ರಿಂಟ್‌, ಸಿಲ್ವರ್‌ ಕಸವು ಡಿಸೈನರ್‌ ಸೀರೆಗಳು ಈ ಸೀಸನ್‌ನಲ್ಲಿ ಮಹಿಳೆಯರನ್ನು ಆಕರ್ಷಿಸಿವೆ.

ಈ ಸುದ್ದಿಯನ್ನೂ ಓದಿ | Eid Milad 2024: ಈದ್‌ ಮಿಲಾದ್‌ ಸೆಲೆಬ್ರೆಷನ್‌ಗೆ ಬಂತು ಬಗೆಬಗೆಯ ಬ್ಯಾಂಗಲ್ಸ್!

ಮುಂಡುಂ ನೆರಿಯುಟ್ಟುಮ್‌

ಕೇರಳದ ಟ್ರೆಡಿಷನಲ್‌ ಸೀರೆಗಳಲ್ಲಿಒಂದು ಮುಂಡುಂ ನೆರಿಯುಟ್ಟುಮ್‌. ಇದು ಟು ಪೀಸ್‌ ಸೀರೆ. ‘ಮುಂಡುʼ ಅನ್ನು ಸೊಂಟಕ್ಕೆ ಸುತ್ತಿಕೊಂಡರೆ ಅದರ ಮೇಲೆ ಹಾಫ್‌ ಸಾರಿ ತರಹ ಹಾಕುವುದೇ ನೆರಿಯುಟ್ಟುಮ್‌. ಇಲ್ಲಿನ ಹೆಂಗಳೆಯರು ಸಾಮಾನ್ಯ ದಿನಗಳಲ್ಲಿ ಗೋಲ್ಡನ್‌ ಝರಿ ಬಾರ್ಡರ್‌ ಇಲ್ಲದ ಮುಂಡುಂ ನೆರಿಯುಟ್ಟುಮ್‌ ಸೀರೆ ಉಟ್ಟರೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗೋಲ್ಡನ್‌ ಇಲ್ಲವೇ ಇನ್ನಿತರ ಡಿಸೈನ್‌ ಬಾರ್ಡರ್‌ಗಳುಳ್ಳ ಮುಂಡುಂ ನೆರಿಯುಟ್ಟುಮ್‌ನ್ನು ಉಡುತ್ತಾರೆ. ಈ ಟು ಪೀಸ್‌ ಸಾರಿ ಉಡುವ ರೀತಿ ಕೊಂಚ ವಿಭಿನ್ನವಾಗಿದೆ. ಇದೀಗ ರೆಡಿಮೇಡ್‌ನಲ್ಲೂ ದೊರೆಯುತ್ತಿವೆ.

ಕಾಟನ್‌ ಶ್ವೇತ ವರ್ಣದ ಝರಿ ಬಾರ್ಡರ್‌ ಸೀರೆ

ತೀರಾ ಟ್ರೆಡಿಷನಲ್‌ ಸೀರೆಗಳಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ, ಟ್ರೆಂಡಿಯಾಗಿಯೂ ಇರಬೇಕು ಹಾಗೂ ಪದೇ ಪದೇ ಉಡುವಂತಿರಬೇಕು ಎನ್ನುವವರು ಇದೀಗ ಕಾಟನ್‌ ಹಾಗೂ ಸಿಲ್ಕ್‌ ಮಿಕ್ಸ್ ಕಾಟನ್‌ನ ಝರಿ ಬಾರ್ಡರ್‌ನ ಸೀರೆಗಳನ್ನು ಖರೀದಿಸ ತೊಡಗುತ್ತಿದ್ದಾರೆ. ಇವುಗಳಲ್ಲಿ ಓಣಂ ಲುಕ್‌ ನೀಡುವ ಸೀರೆಗಳು ಹೆಚ್ಚು ಟ್ರೆಂಡಿಯಾಗಿವೆ.

ಈ ಸುದ್ದಿಯನ್ನೂ ಓದಿ | New York Fashion Week: ‘ನ್ಯೂಯಾರ್ಕ್‌ ಫ್ಯಾಷನ್‌ ವೀಕ್‌’ ನಲ್ಲಿ ಅನಾವರಣಗೊಂಡ ಡಿಸೈನರ್‌ವೇರ್‌ಗಳಿವು!

ಟ್ರೆಂಡಿ ಸೀರೆ ಆಯ್ಕೆಗೆ 3 ಸಿಂಪಲ್‌ ಸಲಹೆ

· ಜರಿ ಬಾರ್ಡರ್‌ ಸೀರೆಯನ್ನೇ ಆರಿಸಿ.
· ಶ್ವೇತ ವರ್ಣದಲ್ಲೆ ಇನ್ನಿತರೆ ಶೇಡ್‌ಗಳು ದೊರೆಯುತ್ತವೆ.
· ಗೋಲ್ಡನ್‌ ಎಂಬ್ರಾಯ್ಡರಿ ಇರುವಂತಹ ಸೀರೆಗಳು ದೊರೆಯುತ್ತವೆ.