Saturday, 12th October 2024

ಮುಂದಿನ ರಾಜ್ಯೋತ್ಸವದೊಳಗೆ ಪಂಪನ ಒಂದು ಪದ್ಯ ಕಲಿಯಲು ಶಪಥ ಮಾಡಿ: ಸಾಹಿತಿ ಎಚ್‌.ಎಸ್‌. ವೆಂಕಟೇಶ್‌ ಮೂರ್ತಿ

ಬೆಂಗಳೂರು: ಮುಂದಿನ ಬಾರಿ ಕರ್ನಾಟಕ ರಾಜ್ಯೋತ್ಸವ ಕೇವಲ ಆಚರಣೆಯ ಭಾಗವಾಗದೇ ಪ್ರತಿಯೊಬ್ಬರು ಕನಿಷ್ಠ ಪಂಪನ ಒಂದು ಪದ್ಯ ಹಾಗೂ ಮಹಾಕಾವ್ಯದ ಒಂದು ಶ್ಲೋಕವನ್ನು ಕಲಿತಿರಬೇಕು ಎಂಬ ಶಪತ ಮಾಡಿ ಎಂದು ಸಾಹಿತಿ ಎಚ್‌.ಎಸ್‌. ವೆಂಕಟೇಶ್‌ ಮೂರ್ತಿ ಹೇಳಿದರು.

ವಿಎಂ ವೇರ್‌ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ಧ ಕನ್ನಡ ರಾಜ್ಯೋತ್ಸವ ಸಮಾರಂಭ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗುತ್ತಿದೆ. ಹಿಂದೆಲ್ಲಾ ನಾವು ಕನ್ನಡ ಭಾಷೆಯ ಮಧ್ಯೆ ಜೀವಿಸು ತ್ತಿದ್ದೆವು. ಆದ್ದರಿಂದು ಕನ್ನಡ ಭಾಷೆ ನಮ್ಮ ನಾಲಿಗೆ ಮೇಲೆ ನಲಿದಾಡದೇ ಬೇರೆ ಭಾಷೆ ಕುಳಿತಿದೆ.

ವರ್ಷದಲ್ಲಿ ಒಂದು ತಿಂಗಳು ಮಾತ್ರ ನಮ್ಮ ಮಾತೃಭಾಷೆಯ ಆಚರಣೆ ಆಗುತ್ತಿದೆ. ಸಾವಿರಾರು ವರ್ಷದ ಇತಿಹಾಸ ಇರುವ ಕನ್ನಡ ಭಾಷೆಯ ಬಗ್ಗೆ ನಾವೆಲ್ಲರೂ ಕನಿಷ್ಠ ಪಂಪನ ಒಂದು ಪದ್ಯವನ್ನಾದರೂ ನಾಲಿಗೆ ತುದಿಯಲ್ಲಿ ಇಟ್ಟಿಲ್ಲವೆಂದರೆ ಹೇಗೆ? ನಮ್ಮ ಭಾಷೆಯ ಮೇಲೆ ಪ್ರೀತಿ, ಗೌರವ ಹೊಂದಿರುವ ಪ್ರತಿಯೊಬ್ಬರೂ ಕನಿಷ್ಠ ಪಂಪನ ಒಂದು ಪದ್ಯವನ್ನಾಗಲಿ ಅಥವಾ ಭಗವದ್ಗೀತೆ ಒಂದು ಶ್ಲೋಕವನ್ನಾಗಲಿ ಕಲಿತಿರಬೇಕು.

ಮುಂದಿನ ರಾಜ್ಯೋತ್ಸವದ ವೇಳೆಗೆ ಪ್ರತಿಯೊಬ್ಬರೂ ಈ ಶಪತ ಮಾಡಿದರೆ ನಮ್ಮ ಕನ್ನಡ ರಾಜ್ಯೋತ್ಸವವಕ್ಕೆ ಒಂದು ಅರ್ಥ ಬರಲಿದೆ ಎಂದು ಹೇಳಿದರು.

ನಗರದಲ್ಲಿ ಇಂದು ಸಾಕಷ್ಟು ಖಾಸಗಿ ಸಂಸ್ಥೆಗಳು ಸಾಕಷ್ಟು ಜನರಿಗೆ ಉದ್ಯೋಗ ನೀಡಿದೆ. ಹೊರ ರಾಜ್ಯ ಹಾಗೂ ದೇಶಗಳಿಂದ ಜನರು ಇಲ್ಲಿ ಉದ್ಯೋಗ ಪಡೆದಿದ್ದಾರೆ. ಸಂಸ್ಥೆಯಲ್ಲಿನ ಉನ್ನತ ಸ್ಥಾನ ಪಡೆದವರು ಕನ್ನಡ ಭಾಷೆ ಬಗ್ಗೆ ದೊಡ್ಡ ಮನಸ್ಸು ಮಾಡಿದರೆ ಕನ್ನಡ ನಮ್ಮ ಮಧ್ಯೆ ಸದಾ ಉಳಿದಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪದ್ಮಶೀ ಪುರಸ್ಕೃತ ಕೆ.ವೈ. ವೆಂಕಟೇಶ್‌, ವಿ.ಎಂ. ವೇರ್‌ ಇಂಜಿನಿಯರಿಂಗ್‌ನ ಗ್ಲೋಬಲ್‌ ಮುಖ್ಯಸ್ಥೆ ರೂಪ ರಾಜ್‌, ಎಂ.ಡಿ. ರಾಜ್‌ಕುಮಾರ್‌ ನಾರಾಯಣ್‌ ಉಪಸ್ಥಿತರಿದ್ದರು.