Saturday, 14th December 2024

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸಂಜೆ ಅಂಚೆ ಕಚೇರಿ ಆರಂಭ

ಬೆಂಗಳೂರು: ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಸಂಜೆ ಅಂಚೆ ಕಚೇರಿ ಆರಂಭಿಸಲಾಗಿದ್ದು, ಉದ್ಯೋಗಕ್ಕೆ ತೆರಳು ವವರಿಗೆ ಸಂಜೆ ಅಂಚೆ ಕಚೇರಿ ಯಿಂದ ಅನುಕೂಲವಾಗುತ್ತದೆ. ರಾತ್ರಿ 9 ಗಂಟೆ ವರೆಗೆ ಆಧಾರ್ ತಿದ್ದುಪಡಿ ಸೇರಿದಂತೆ ಅಂಚೆ ಸೇವೆಗಳು ಲಭ್ಯ ಇರುತ್ತವೆ.

ಕಳೆದ ನವೆಂಬರ್ ನಲ್ಲಿ ಪ್ರಾಯೋಗಿಕವಾಗಿ ಧಾರವಾಡದಲ್ಲಿ ರಾಜ್ಯದ ಮೊದಲ ಸಂಜೆ ಅಂಚೆ ಕಚೇರಿ ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೂ ಆರಂಭಿಸಲಾಗಿದೆ.

ಅಂಚೆ ಕಚೇರಿಗಳು ಸಾಮಾನ್ಯವಾಗಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3:30ರ ವರೆಗೆ ಸೇವೆ ನೀಡಲಿದ್ದು, ಸಂಜೆ ಅಂಚೆ ಕಚೇರಿ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.

ಬೆಂಗಳೂರಿನಲ್ಲಿ ಮಧ್ಯಾಹ್ನ 3:30ಕ್ಕೆ ಅಂಚೆ ಸೇವೆ ಸ್ಥಗಿತಗೊಂಡ ನಂತರ ಸ್ಪೀಡ್ ಪೋಸ್ಟ್ ಗೆ ರಾಜಭವನ ರಸ್ತೆಯ ಜಿಪಿಓ ಗೆ ತೆರಳಬೇಕಿತ್ತು. ರಿಜಿಸ್ಟ್ರಾರ್ ಪೋಸ್ಟ್ ಮಾಡಲು ರೈಲ್ವೆ ನಿಲ್ದಾಣದ ಆರ್‌ಎಂಎಸ್‌ಗೆ ಹೋಗಬೇಕಾಗಿತ್ತು. ಸಂಜೆ ಅಂಚೆ ಕಚೇರಿಯಲ್ಲಿ ಸ್ಪೀಡ್ ಪೋಸ್ಟ್, ರಿಜಿಸ್ಟ್ರಾರ್ ಪೋಸ್ಟ್, ಪಾರ್ಸೆಲ್ ಸೇವೆ ಫಿಲಾಟಲಿ ಸೇಲ್ಸ್, ಆಧಾರ್ ತಿದ್ದುಪಡಿ ಸೇವೆ ನೀಡಲಾಗುತ್ತದೆ.

Read E-Paper click here