ಪ್ರೋಗ್ರಾಮ್ ಮ್ಯಾನೇಜರ್-ಡೈವರ್ಸಿಟಿ, ಸ್ಟೋರ್ಸ್, ಟ್ಯಾಲೆಂಟ್ ಅಕ್ವಿಸಿಷನ್
ತಮ್ಮ ಅಸ್ತಿತ್ವ ರೂಪಿಸಿಕೊಂಡ ಮತ್ತು ವಿಶ್ವವನ್ನು ಗೆದ್ದ ಪ್ರತೀಕ್ಷ್ ಅವರನ್ನು ಭೇಟಿ ಮಾಡಿ
ಪ್ರತೀಕ್ಷ್, ಸುಮಾರು ಏಳು ವರ್ಷಗಳಿಂದ ಅಮೆಜಾನಿಯನ್ ಆಗಿದ್ದು ಸಾಮಾಜಿಕ ನಿಯಮಗಳನ್ನು ದಿಟ್ಟವಾಗಿ ನಿರಾಕರಿಸಿ, ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ಹೋರಾಡಿದರು ಮತ್ತು ತನಗೆ ತಾನು ಒಂದು ಸ್ಥಾನ ಗಳಿಸಿಕೊಂಡರು.
ಉದ್ಯೋಗಿಗಳು ಮನೆಯಲ್ಲಿರುವ ಭಾವನೆ ಮೂಡಿಸಲು; ಬೆಂಬಲಪೂರ್ವಕವಾಗಿರಲು; ಮತ್ತು ಉದ್ಯೋಗದಲ್ಲಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸುರಕ್ಷಿತ ಪರಿಸರ ನಿರ್ಮಿಸಲು, ವೈವಿಧ್ಯತೆಯ ಸಂಸ್ಕೃತಿ ಉತ್ತೇಜಿಸಲು ಮತ್ತು ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವುದನ್ನು ಉತ್ತೇಜಿಸಿದರು. ಅಮೆಜಾನ್ ಇಂಡಿಯಾ ವೈವಿಧ್ಯತೆಯಿಂದ ಒಳ ಗೊಳ್ಳುವಿಕೆಯಿಂದ, ಮಹಿಳೆಯರ ಹಕ್ಕುಗಳನ್ನು ಗೌರವಿಸುವುದರಿಂದ ಮತ್ತು ಅಂಗವಿಕಲತೆಗಳ, ಸೇನಾ ನಿವೃತ್ತರ ಮತ್ತು ಎಲ್.ಜಿ.ಬಿ.ಟಿ.ಕ್ಯೂ.ಐ.ಎ+ ಸಮುದಾಯದ ಜನರ ಪ್ರತಿಭೆಗಳನ್ನು ಗುರುತಿಸುವುದರಿಂದ ನೈಜ ಸಾಮರ್ಥ್ಯ ಮತ್ತು ಸಬಲೀಕರಣ ಬರುತ್ತದೆ ಎಂದು ದೀರ್ಘಕಾಲದಿಂದ ನಂಬಿದೆ.
ಅಮೆಜಾನಿಯನ್ ಪ್ರತೀಕ್ಷ್ ಹೈದರಾಬಾದ್ ನಲ್ಲಿ ಪ್ರಸ್ತುತ ವಾಸವಿದ್ದು ಸ್ಟೀರಿಯೋಟೈಪ್ ಗಳು, ಪ್ರತಿಬಂಧಕಗಳನ್ನು ಮೀರಿದರು ಮತ್ತು ಸಮುದಾಯ ದೊಂದಿಗೆ ಹೋರಾಟ ನಡೆಸಿ ಸಮಾಜದಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡರು. ಪ್ರತೀಕ್ಷ್ ಎಂದಿಗೂ ತಮ್ಮ ವಿಶಿಷ್ಟ ಲೈಂಗಿಕ ಆದ್ಯತೆಗೆ ಇರಿಸು ಮುರುಸು ಅನುಭವಿಸಲಿಲ್ಲ. ಕಠಿಣವಾದ ಸಮಾಜದಲ್ಲಿ ಜೀವಿಸುತ್ತಾ ಅವರು ತನ್ನ ಸಹಪಾಠಿಗಳಿಂದ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆ ಗಳಲ್ಲಿ ಆಸಕ್ತಿಯ ಕೊರತೆಗೆ ಸದಾ ಬೆದರಿಕೆಗೆ ಒಳಗಾಗುತ್ತಿದ್ದರು. ಇದರಿಂದ ಅವರು ಶಾಲೆಯಲ್ಲಿ ತನ್ನ ಸಹಪಾಠಿಗಳನ್ನು ನಿರ್ಲಕ್ಷಿಸಿ ಓದಿನ ಕಡೆ ಹೆಚ್ಚು ಗಮನ ಹರಿಸಿದರು. ಹತ್ತನೇ ತರಗತಿ ಪೂರ್ಣಗೊಂಡ ನಂತರ ಕೋಟಕ್ಕೆ ಹೋಗಿ ಎಂಜಿನಿಯರಿಂಗ್ ಸಿದ್ಧತೆಯಲ್ಲಿ ತೊಡಗಿದರು. ಎರಡು ವರ್ಷಗಳಿಗೂ ಮೀರಿ ತಾನು ಸೇರಿಸುವ ಸಮುದಾಯದ ಕುರಿತು ಸಾಕಷ್ಟು ಓದಿದ ನಂತರ ಅವರಿಗೆ ತಮ್ಮ ಲೈಂಗಿಕ ಆದ್ಯತೆ ಕುರಿತು ಹೆಚ್ಚು ತಿಳಿವ ಳಿಕೆ ಮೂಡಿತು.
ನಂತರ ಅವರು ಪುಣೆಗೆ ಹೋದರು, ಅಲ್ಲಿ ತಮ್ಮದೇ ಸ್ವಂತ ಸಮುದಾಯದ ಕೆಲ ಸದಸ್ಯರನ್ನು ಭೇಟಿಯಾದರು, ಅವರೊಂದಿಗೆ ಪರಿಚಯ ಬೆಳೆಸಿಕೊಂಡರು ಮತ್ತು ಅವರ ಸಂಗಾತಿಗಳೊಂದಿಗೆ ಜೀವಿಸುತ್ತಿರುವುದನ್ನು ಕಂಡರು, ಅವರಲ್ಲಿ ಕೆಲವರು ಮಕ್ಕಳನ್ನೂ ಪಡೆದಿದ್ದರು. ಇದು ಅವರ ಸ್ಥಾನ, ಅಲ್ಲಿ ಅವರು “ಈ ಸಮುದಾಯಕ್ಕೆ ನಾನು ಸೇರಿದ್ದೇನೆ” ಎಂದು ಹೇಳಬಲ್ಲವರಾಗಿರುತ್ತಾರೆ ಮತ್ತು ಆವಿಷ್ಕರಿಸಲು ಪ್ರಾರಂಭಿಸುತ್ತಾರೆ. ಅವರ ಲೈಂಗಿಕ ಆದ್ಯತೆಯನ್ನು ಒಪ್ಪಿಕೊಂಡ ನಂತರ ಕಾಲೇಜು ಕುರಿತು ಬಹಳ ತನ್ನ ಸಲಿಂಗಕಾಮದಿಂದ ಬಹಳ ನಿರುತ್ಸಾಹಿಯಾಗಿದ್ದರೂ ನಂತರ ಕಾಲೇಜಿನ ಸ್ಟೂಡೆಂಟ್ ಕೌನ್ಸಿಲ್ ಸದಸ್ಯರಾಗುತ್ತಾರೆ ಮತ್ತು ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ಆಯೋಜಿಸುತ್ತಾರೆ.
2017ರಲ್ಲಿ ಅಮೆಜಾನ್ ಸೇರಿದ ನಂತರ ಪ್ರತೀಕ್ಷ್ ನವದೆಹಲಿಯಲ್ಲಿ ಮೊದಲ ಗ್ಲಾಮಝಾನ್ ಚಾಪ್ಟರ್ ತೆರೆಯುತ್ತಾರೆ ಮತ್ತು ತಮ್ಮ ಸಹೋದ್ಯೋಗಿ ಗಳ ಬೆಂಬಲಕ್ಕೆ ಕೃತಜ್ಞರಾಗಿದ್ದಾರೆ. ಅವರು ತಮ್ಮ ಮ್ಯಾನೇಜರ್ ಗೆ ತಮ್ಮ ಕುರಿತು ಹೇಳಿದಾಗ ಬೆಂಬಲಿಸಿದ್ದನ್ನು ಪ್ರಶಂಸೆ ಮಾಡುತ್ತಾರೆ. ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ಮತ್ತು ಬೆಂಬಲದಿಂದ ಅವರು ತಮ್ಮ ಸಹೋದ್ಯೋಗಿಗಳ ಬೆಂಬಲ ಪಡೆದಿದ್ದರಿಂದ ಬೇರೆ ದೇಶಕ್ಕೆ ಹೋಗುವ ಆಲೋಚನೆಯನ್ನು ಕೈ ಬಿಡುತ್ತಾರೆ.
ಅವರು ಒಂದು ತತ್ವದಲ್ಲಿ ನಂಬಿಕೆ ಇರಿಸಿದ್ದಾರೆ, “ನಾನು ದಪ್ಪ ಚರ್ಮದವನಾಗಿರಬೇಕು ಮತ್ತು ದಾರಿಯಲ್ಲಿ ಎದುರಾಗುವ ಅಡ್ಡಿ ಆತಂಕಗಳಿಂದ ಸಂಕಷ್ಟಕ್ಕೆ ಒಳಗಾಗಬಾರದು” ಎನ್ನುವುದು. ಪ್ರತೀಕ್ಷ್, “ನಿಮ್ಮ ಲೈಂಗಿಕ ಆದ್ಯತೆ ಅಥವಾ ಗುರುತಿನ ಬಗ್ಗೆ ಯಾರಾದರೂ ತಪ್ಪು ಮಾಡಿದಲ್ಲಿ ನೀವು ಅವರನ್ನು ಸರಿಪಡಿಸಬೇಕು ಮತ್ತು ನೊಂದುಕೊಳ್ಳಬಾರದು. ಇದು ಕಲಿಯುವ ಹಂತವಾಗಿದೆ ಮತ್ತು ತಪ್ಪುಗಳಾಗುವುದು ಸಹಜ. ನೀವು ಒಮ್ಮೆ ವ್ಯಕ್ತಿಯನ್ನು ಸರಿಪಡಿಸಿದರೆ ಅದು ಮತ್ತೆ ಸಂಭವಿಸುವುದಿಲ್ಲ. ಅದೇ ವ್ಯಕ್ತಿ ನಿಮ್ಮ ಉತ್ತಮ ಮಿತ್ರರಾಗುವ ಸಂಭವನೀಯತೆ ಇರುತ್ತದೆ” ಎನ್ನುತ್ತಾರೆ.
ಪ್ರತೀಕ್ಷ್ ಅಪಾರ ಪ್ರವಾಸ ಮಾಡುತ್ತಿದ್ದು 20ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ ಮತ್ತು ಟೈಲರ್ ಸ್ವಿಫ್ಟ್ ಅಭಿಮಾನಿಯೂ ಆಗಿದ್ದಾರೆ.