Saturday, 23rd November 2024

ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್‌ ಆಟೋ ಕೌಂಟರ್‌ ಸ್ಥಾಪನೆ

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಗರದ ಎರಡು ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್‌ ಆಟೋ ಕೌಂಟರ್‌ ಗಳನ್ನು ಸ್ಥಾಪಿಸಿದೆ.

ಪ್ರಾಯೋಗಿಕವಾಗಿ ನಾಲ್ಕು ಮೆಟ್ರೋ ನಿಲ್ದಾಣಗಳ ಪೈಕಿ ಮಹಾತ್ಮ ಗಾಂಧಿ (ಎಂ.ಜಿ) ರಸ್ತೆ ಹಾಗೂ ಕಬ್ಬನ್ ಪಾರ್ಕ್‌ ಮೆಟ್ರೋ ನಿಲ್ದಾಣಗಳಲ್ಲಿ ಕೌಂಟರ್ ಸ್ಥಾಪಿಸಿದೆ. ಈ ಕೌಂಟರ್‌ ಗಳನ್ನು ಬುಧವಾರ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಉದ್ಘಾಟಿಸಿದರು.

ಇನ್ನು ಮುಂದೆ ಮೆಟ್ರೊ ಪ್ರಯಾಣಿಕರು ನಿಲ್ದಾಣದಿಂದ ಮನೆಗೆ ತೆರಳಲು ಹೆಚ್ಚು ಸಮಯ, ಅಧಿಕ ಹಣ ನೀಡಬೇಕಿಲ್ಲ ಎನ್ನಲಾಗಿದೆ.

 

ಊರುಗಳಿಗೆ ತೆರಳುವಾಗ, ದಿನನಿತ್ಯ ಕೆಲಸ ಕಾರ್ಯಗಳಿಗೆ ಹೋಗುವವರು, ಮೆಟ್ರೋ ನಿಲ್ದಾಣದಿಂದ ತಮ್ಮ ವಾಸದ ಸ್ಥಳಗಳಿಗೆ ಹೋಗಲು ಆಟೋ, ಇಲ್ಲವೇ ಬಿಎಂಟಿಸಿ ಬಸ್ ಸೇವೆ ಅಗತ್ಯವಾಗಿದೆ. ಅದರೆ ಸರಿಯಾದ ಸಮಯಕ್ಕೆ ಬಸ್ ಸೇವೆಗಳು ಲಭ್ಯವಿರುವುದಿಲ್ಲ. ಇನ್ನೂ ಆಟೋ ಚಾಲಕರು ಮನಬಂದ ದರ ಪಡೆಯುತ್ತಾರೆ. ಕೆಲವರು ಕರೆದ ಕಡೆಗಳಲ್ಲಿ ಬರುವುದಿಲ್ಲ. ಈ ಸಂಬಂಧ ಈಗಾಗಲೇ ಸಾಕಷ್ಟು ದೂರುಗಳು ಕೇಳಿ ಬಂದಿವೆ.

ಮುಂದಿನ ದಿನಗಳಲ್ಲಿ ಈ ಕೌಂಟರ್‌ಗಳು ಮೆಜೆಸ್ಟಿಕ್, ಕೆ.ಆರ್‌ ಮಾರುಕಟ್ಟೆ, ಹಸಿರು ಮಾರ್ಗದ ಕೊನೆಯ ನಿಲ್ದಾಣ ನಾಗಸಂದ್ರ ಸೇರಿದಂತೆ ವಿವಿಧೆಡೆ ವಿಸ್ತರಿಸುವ ಗುರಿ ಇದೆ.

 
Read E-Paper click here