Wednesday, 11th December 2024

ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನಿಂದಲೇ ಮಾದಕವಸ್ತು ಮಾರಾಟ..!

ಬೆಂಗಳೂರು: ಮದ್ಯ ಮತ್ತು ಮಾದಕ ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನೇ ಮಾದಕವಸ್ತು ಮಾರಾಟದಲ್ಲಿ ಭಾಗಿಯಾದ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ. ಸುಹಾಸ್ ಎಂಬಾತ ಮಾದಕವಸ್ತು ಮಾರಾಟದಲ್ಲಿ ಭಾಗಿಯಾದ ಆರೋಪಿಯಾಗಿದ್ದಾನೆ.

ಆರೋಪಿ ಸುಹಾಸ್ ಕೆಂಗೇರಿಯಲ್ಲಿ‌ ಮಾದಕ ವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದಾನೆ. ಆದರೆ ಅಸಲಿಗೆ ಈತನೇ ಎಕ್ಸ್’ಟೆಸಿ ಪಿಲ್ಸ್ ಮಾರಾಟ ಮಾಡುತ್ತಿದ್ದನಂತೆ.

ವ್ಯಸನ ಬಿಡಲೆಂದು ಬಂದವರಿಗೆ ವ್ಯಸನ ಇರುವುದನ್ನೇ ಆರೋಪಿ ಸುಹಾಸ್ ಬಂಡವಾಳ ಮಾಡಿಕೊಂಡಿದ್ದನು. ಆರೋಪಿ ಸುಹಾಸ್‌ನನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿಯಲ್ಲಿ ರಿಹ್ಯಾಬಿಟೇಷನ್ ಸೆಂಟರ್ ನಡೆಸುತ್ತಿದ್ದ ಸುಹಾಸ್, ಹೊಸಕೆರೆಹಳ್ಳಿ ಬಳಿ ಎಕ್ಸ್’ಟೆಸಿ ಪಿಲ್ಸ್ ಮಾರಾಟ ಮಾಡಲು ಯತ್ನಿಸವ ವೇಳೆ ಖಾಕಿ ಬಲೆಗೆ ಬಿದ್ದಿದ್ದಾನೆ.