Friday, 13th December 2024

ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಒತ್ತಡ: ಪತ್ನಿ ವಿರುದ್ದ ಪತಿ ದೂರು

ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಪತಿ ಪತ್ನಿ ಮೇಲೆ ದೂರು ದಾಖಲಿಸಿದ್ದಾನೆ. ಮಹಾಲಕ್ಷ್ಮಿ ಲೇಔಟ್‌ನ ಅಶೋಕಪುರಂ ನಲ್ಲಿ ಘಟನೆ ನಡೆದಿದೆ.

ತನ್ನ ಹಾಗೂ ತನ್ನ ತಂದೆ ತಾಯಿ, ಸಹೋದರನಿಗೆ ಮತಾಂತರ ಆಗಲು ಒತ್ತಡ ಹೇರು ತ್ತಿದ್ದಾರೆ ಎಂದು ಆರೋಪಿಸಿ 28 ವರ್ಷದ ದೀಪಕ್ ಎಂಬವರು ಖಾಸಗಿ ದೂರು ದಾಖಲಿಸಿದ್ದಾರೆ.

ದೂರಿನ ಹಿನ್ನೆಲೆ ತನಿಖೆ ನಡೆಸುವಂತೆ ಸಿಟಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನ ಅಶೋಕಪುರಂನಲ್ಲಿ ವಾಸವಾಗಿರುವ ದೀಪಕ್ ಎಂಬಾತ ತನ್ನ ಪತ್ನಿ ಸುನೀತಾ ಗ್ರೇಸಿ ಸೇರಿ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ದೀಪಕ್ ಮತ್ತು ಗ್ರೇಸಿ ಅವರು ಎಲೆಕ್ಟ್ರಾನಿಕ್ಸ್ ಸಿಟಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

ದೀಪಕ್ ಕೆಲಸದ ನಿಮಿತ್ತ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿರುತ್ತಾರೆ, ಈ ಬಗ್ಗೆ ಹೆಂಡತಿಗೆ ತಿಳಿಸಿದ್ದರೂ ಕೂಡ ಆಕೆ ಪತಿಯ ಬಗ್ಗೆ ನಾಪತ್ತೆ ದೂರು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ತಾನು ಹಣ ನೀಡಿದರೂ ಕೂಡ ಹೆಂಡತಿ ಬಾಡಿಗೆ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಪತಿಯ ಹೆಸರನ್ನು ಬಳಸಿ ಸಾಲ ಪಡೆದಿ ರುವ ಆರೋಪವೂ ಅವರ ಮೇಲಿದೆ. ಸಾಲವನ್ನು ವಾಪಸ್ ನೀಡಿ ಎಂದುಜನ ಪೀಡಿಸಲು ಆರಂಭಿಸಿದಾಗ ತನ್ನ ಗಂಡನ ಕೆಲಸದ ಸ್ಥಳಕ್ಕೆ ಕಳುಹಿಸಿ ತೆಗೆದುಕೊಳ್ಳುವಂತೆ ಹೇಳುತ್ತಾರೆ ಎಂಬ ಆರೋಪ ಮಾಡಿದ್ದಾರೆ.