Thursday, 7th December 2023

ಜಾನ್ ಟ್ಯಾನ್ ಸಹಯೋಗದೊಂದಿಗೆ ವಿಶೇಷ ಮಲೇಷಿಯನ್ ಸಂಗ್ರಹ ಪರಿಚಯಿಸಿದ ರಾಯಲ್‌ ಓಕ್‌

ಬೆಂಗಳೂರು: ಪೀಠೋಪಕರಣಗಳು ಮತ್ತು ಗೃಹಾಲಂಕಾರ ಕ್ಷೇತ್ರದ ದಿಗ್ಗಜ ರಾಯಲ್‌ಓಕ್‌, ಮಲೇಷಿಯಾದ ಪೀಠೋಪಕರಣ ವಿನ್ಯಾಸಕ ಜಾನ್ ಟಾನ್ ಸಹಯೋಗದೊಂದಿಗೆ ಬಹು ನಿರೀಕ್ಷಿತ ಮಲೇಷಿಯನ್ ಪಿಠೋಪಕರಣ ಸಂಗ್ರಹ ಬಿಡುಗಡೆ ಘೋಷಿಸಿದೆ.

ಈ ಸೊಗಸಾದ ಸಂಗ್ರಹವು ಮಲೇಷ್ಯಾದ ಶ್ರೀಮಂತ ಸಂಸ್ಕೃತಿ, ಉನ್ನತ ಫ್ಯಾಷನ್ ಮತ್ತು ಹೇರಳವಾದ ನೈಸರ್ಗಿಕ ಸಂಪನ್ಮೂಲ ಗಳ ಪ್ರತಿಬಿಂಬ ವಾಗಿದ್ದು, ಗ್ರಾಹಕರಿಗೆ ವಿಶಿಷ್ಟವಾದ ಕ್ರಿಯಾತ್ಮಕತ, ಸುಂದರ ಮತ್ತು ಸಮಕಾಲೀನ ವಿನ್ಯಾಸವನ್ನು ಒದಗಿಸಲಿದೆ.

ಜನಪ್ರಿಯ ಪೀಠೋಪಕರಣ ವಿನ್ಯಾಸಕ ಜಾನ್ ಟ್ಯಾನ್ ಜೊತೆಗಿನ ಸಹಯೋ ಗವು ನವೀನ ವಿನ್ಯಾಸಗಳಿಗಳನ್ನು ಗ್ರಾಹಕರಿಗೆ ಒದಗಿಸಲಿದೆ. ‘ಜಾನ್ ಟಾನ್ ಜೊತೆಗಿನ ಸಹಯೋಗದೊಂದಿಗೆ ಮಲೇಷಿಯನ್ ಕಲೆಕ್ಷನ್ ಅನ್ನು ಪರಿಚಯಿಸಲು ನಾವು ಉತ್ಸುಕ ರಾಗಿದ್ದೇವೆ. ಈ ಸಂಗ್ರಹವು ಮಲೇಷಿಯಾದ ನೈಸರ್ಗಿಕ ಸೌಂದರ್ಯ, ಕರಕುಶಲತೆ ಮತ್ತು ಸಮಕಾಲೀನ ವಿನ್ಯಾಸದ ಪರಿಪೂರ್ಣ ಸಮ್ಮಿಲನಾವಾಗಿದೆ’ ಎಂದು ರಾಯಲ್‌ ಓಕ್‌ನ ಅಧ್ಯಕ್ಷ ವಿಜಯ್ ಸುಬ್ರಮಣ್ಯಂ ಹೇಳಿದರು.

ರಾಯಲ್‌ ಓಕ್‌ನ ಮಲೇಷಿಯನ್ ಕಲೆಕ್ಷನ್ ಈಗ ಆನ್‌ಲೈನ್ ಮತ್ತು ಭಾರತದಾದ್ಯಂತ 200 + ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು royaloakindia.com ಗೆ ಭೇಟಿ ನೀಡಿ

Leave a Reply

Your email address will not be published. Required fields are marked *

error: Content is protected !!